Advertisement

ವಿದ್ಯುತ್‌ ಶಾಕ್‌ನಿಂದಲೇ ರೇಣುಕಾಸ್ವಾಮಿ ಸಾವು! ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗ

09:48 PM Jun 19, 2024 | Team Udayavani |

ಬೆಂಗಳೂರು: ದರ್ಶನ್‌ ಗ್ಯಾಂಗ್‌ ರೇಣುಕಾಸ್ವಾಮಿಯನ್ನು ಎಷ್ಟು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆಗೈದಿದೆ ಎಂಬುದಕ್ಕೆ ಆತನ ಮರಣೋತ್ತರ ಪರೀಕ್ಷಾ ವರದಿಯಲ್ಲಿ ವೈದ್ಯರು ಉಲ್ಲೇಖೀಸಿರುವ ಅಂಶಗಳೇ ಸಾಕ್ಷಿಯಾಗಿವೆ.

Advertisement

ವಿದ್ಯುತ್‌ ಶಾಕ್‌ ನೀಡಿದ್ದಲ್ಲದೆ ಬಲವಾದ ವಸ್ತುಗಳಿಂದ ಭೀಕರವಾಗಿ ಹಲ್ಲೆ ನಡೆಸಿದ ಪರಿಣಾಮ ರಕ್ತಸ್ರಾವವಾಗಿ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

”Death is due to shock and Hemorrhage as a result to multiple blunt injuries sustained” ಅಂದರೆ ವಿದ್ಯುತ್‌ ಶಾಕ್‌ ಹಾಗೂ ಪ್ರಬಲವಾದ ಹೊಡೆತಗಳ ಕಾರಣದಿಂದ ರಕ್ತಸ್ರಾವವಾಗಿ ಸಾವು ಸಂಭವಿಸಿದೆ ಎಂಬ ಅಂಶವನ್ನು ವೈದ್ಯರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.. ಮರಣೋತ್ತರ ಪರೀಕ್ಷೆಯ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ಕಳಿಸಿರುವ ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ.

ಕಿವಿ ಕತ್ತರಿಸಿದ ಹಂತಕರು
ಬೆನ್ನು, ಕೈ, ತೊಡೆ ಮೇಲೆ ಬೆಲ್ಟ್ ಹಾಗೂ ಇತರ ವಸ್ತುಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಮರ್ಮಾಂಗಕ್ಕೆ ಬಲವಾಗಿ ಹೊಡೆದಿದ್ದಾರೆ. ವಿದ್ಯುತ್‌ ಶಾಕ್‌ನಿಂದ ನಿಶಕ್ತಿಗೊಳಿಸಿದ್ದಾರೆ. ಸಿಗರೇಟ್‌ ಅಥವಾ ಇತರ ವಸ್ತುಗಳಿಂದ ದೇಹದ ನಾನಾ ಕಡೆ ಸುಟ್ಟಿದ್ದಾರೆ. ಜತೆಗೆ ಎಡಕಿವಿಯನ್ನು ಕತ್ತರಿಸಿ ದೊಣ್ಣೆಗಳಿಂದ ಕಾಲುಗಳಿಗೆ ಚೆನ್ನಾಗಿ ಬಾರಿಸಿರುವುದು ವರದಿಯಲ್ಲಿ ಉಲ್ಲೇಖವಾಗಿದೆ.

ಭದ್ರತಾ ಸಿಬಂದಿ
ಹೇಳಿಕೆ ದಾಖಲು
ಹತ್ಯೆ ನಡೆದ ಪಟ್ಟಣಗೆರೆಯ ಶೆಡ್‌ನ‌ ಭದ್ರತಾ ಸಿಬಂದಿ ನರೇಂದ್ರ ಸಿಂಗ್‌ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next