Advertisement

CM ಸಿದ್ದರಾಮಯ್ಯರನ್ನ ಭೇಟಿಯಾದ ರೇಣುಕಾಸ್ವಾಮಿ ಪೋಷಕರು, ಕಣ್ಣೀರಿಟ್ಟ ದಂಪತಿ

10:27 PM Jun 25, 2024 | Team Udayavani |

ಚಿತ್ರದುರ್ಗ: ಹತ್ಯೆಯಾದ ರೇಣುಕಾಸ್ವಾಮಿ ಪೋಷಕರು ಮಂಗಳವಾರ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

Advertisement

ರೇಣುಕಾಸ್ವಾಮಿ ತಂದೆ ಶಿವನಗೌಡರು ಹಾಗೂ ತಾಯಿ ರತ್ನಪ್ರಭ ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ದುಃಖ ತೋಡಿಕೊಂಡರು. ಈ ವೇಳೆ ಮಗನನ್ನು ವಿಕೃತವಾಗಿ ಕೊಲೆ ಮಾಡಿದ್ದು ಎಷ್ಟು ನೋವು ಅನುಭವಿಸಿದ್ದಾನೋ ಎಂದು ನೆನೆದು ಕಣ್ಣಿರಿಟ್ಟರು. ಇಬ್ಬರನ್ನೂ ಸಿದ್ದರಾಮಯ್ಯ ಸಮಾಧಾನಪಡಿಸಿದರು.

ಮಗನ ಸಾವಿನ ಕುರಿತು ಪೊಲೀಸರು ನಡೆಸುತ್ತಿರುವ ತನಿಖೆ ನಮಗೆ ಸಮಾಧಾನ ತಂದಿದೆ ಎಂದು ಅವರಿಗೆ ವಿವರಿಸಿದರು.

ಕೊಲೆಯಾದ ರೇಣುಕಾಸ್ವಾಮಿ ಪತ್ನಿ ಸಹನಾಗೆ ಬದುಕು ಕಟ್ಟಿಕೊಡಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಆಕೆಗೆ ಉದ್ಯೋಗ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಮನವಿ ಆಲಿಸಿದ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ವೇಳೆ ಕೃಷಿ ಸಚಿವ ಚಲುವರಾಸ್ವಾಮಿ, ಮಾಜಿ ಸಚಿವ ಎಚ್‌.ಆಂಜನೇಯ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next