Advertisement

Renukaswamy Case: ಸ್ಥಳ ಮಹಜರು ವೇಳೆ ಕಿಡ್ನಾಪ್ ಮಾಡಿದ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಆರೋಪಿ

09:52 AM Jun 14, 2024 | Team Udayavani |

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿರುವ ಸ್ಥಳವನ್ನು ಮಹಜರು ನಡೆಸಲು ಸಿಪಿಐ ಸಂಜೀವ್ ಗೌಡ ನೇತೃದ ತಂಡ ಆರೋಪಿ ರಾಘುನನ್ನು ಗುರುವಾರ ತಡರಾತ್ರಿ ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿ ಹಾಗೂ ಬೆಂಗಳೂರು ರಸ್ತೆಯ ಪಕ್ಕದಲ್ಲಿನ ಜಗಳೂರು ಮಹಲಿಂಗಪ್ಪ ಪೆಟ್ರೋಲ್ ಬಂಕ್ ಬಳಿ ಸ್ಪಾಟ್ ಮಹಜರ್ ನಡೆಸಿದರು.

Advertisement

ತನಿಖೆ ವೇಳೆ ಆರೋಪಿ ರಾಘು ರೇಣುಕಾಸ್ವಾಮಿಯನ್ನು ಸಂಚು ರೂಪಿಸಿ ಕಿಡ್ನಾಪ್ ಮಾಡಿರುವ ಮಾಹಿತಿ ನೀಡಿದ್ದ ಅದರಂತೆ ಆರೋಪಿ ರಘು ನನ್ನು ಗುರುವಾರ ತಡರಾತ್ರಿ ಸ್ಥಳ ಮಹಜರು ನಡೆಸಲಾಯಿತು.

ಸ್ಪಾಟ್ ಮಹಜರ್ ವೇಳೆ ರೇಣುಕಸ್ವಾಮಿಯನ್ನು ಕಿಡ್ನಾಪ್ ಮಾಡಿದ ರೀತಿಯನ್ನು ರಾಘು ವಿವರಿಸಿದ್ದಾನೆ ಅದರಂತೆ ರೇಣುಕಾಸ್ವಾಮಿ ಜೂ8 ರ ಬೆಳಗ್ಗೆ ಬಾಲಾಜಿ ಬಾರ್ ಬಳಿ ಬೈಕ್ ನಲ್ಲಿ ಬರುತ್ತಿದ್ದಂತೆ ಅಡ್ಡಗಟ್ಟಿದ ರಾಘು, ರೇಣುಕಾಸ್ವಾಮಿಯನ್ನು ಆಟೋದಲ್ಲಿ ಕಿಡ್ನಾಪ್ ಮಾಡಿ ಕರೆದುಕೊಂಡು ಹೋಗಿದ್ದಾನೆ ಇದಾದ ಬಳಿಕ ಚಳ್ಳಕೆರೆ ಗೇಟ್ ನಿಂದ ಬೆಂಗಳೂರು ರಸ್ತೆಯಲ್ಲಿ ಸಂಚರಿಸಿ ಜಗಳೂರು ಮಹಲಿಂಗಪ್ಪ ಪೆಟ್ರೋಲ್ ಬಂಕ್ ವರೆಗೆ ಆಟೋದಲ್ಲಿ ತೆರಳಿ ಬಳಿಕ ಆರೋಪಿ ರವಿ ಕಾರು ತರಿಸಿ ಅಲ್ಲಿಂದ ಕಾರಿನಲ್ಲಿ ತೆರಳಿರುವುದಾಗಿ ಹೇಳಿಕೊಂಡಿದ್ದಾನೆ.

ಈ ವಿಚಾರಕ್ಕೆ ಸಂಬಂಧಿಸಿ ಪೊಲೀಸರು ಎರಡೂ ಸ್ಥಳಗಳನ್ನು ಮಹಜರು ನಡೆಸಿದ್ದಾರೆ ಅಲ್ಲದೆ ಬೆಳಿಗ್ಗೆ ಸ್ಥಳ ಮಹಜರು ನಡೆಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಉದ್ದೇಶದಿಂದ ಸಾರ್ವಜನಿಕರಿಗೆ ಗೊತ್ತಾಗದ ರೀತಿಯಲ್ಲಿ ಮಧ್ಯರಾತ್ರಿ ಕಿಡ್ನಾಪ್ ಮಾಡಿದ ಎರಡೂ ಸ್ಥಳಗಳಲ್ಲಿ ಮಹಜರು ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಇದನ್ನೂ ಓದಿ: Kuwait ಅಗ್ನಿ ದುರಂತ: 45 ಭಾರತೀಯರ ಮೃತದೇಹ ಹೊತ್ತು ಕೊಚ್ಚಿಗೆ ಹೊರಟ ವಿಶೇಷ ವಿಮಾನ

Advertisement
Advertisement

Udayavani is now on Telegram. Click here to join our channel and stay updated with the latest news.

Next