Advertisement
ಮೊದಲ ದಿನ ಒಲ್ಲದ ಮನಸ್ಸಿನಿಂದಲೇ ರಾತ್ರಿ ಊಟ ಸೇವಿಸಿದ್ದು, ಎರಡನೇ ದಿನ ಶುಕ್ರವಾರ ಜೈಲಿನ ಮೆನು ಪ್ರಕಾರ ನೀಡಿದ್ದ ಬೆಳಗ್ಗೆ ಉಪ್ಪಿಟ್ಟನ್ನು ಸ್ವಲ್ಪ ಸೇವಿಸಿದ್ದಾನೆ. ಮಧ್ಯಾಹ್ನ ಅನ್ನ-ಸಾಂಬಾರ್, ಚಪಾತಿ, ಮುದ್ದೆ ಸೇವಿಸಿದ್ದಾನೆ. ಪ್ರತೀ ಶುಕ್ರವಾರ ಕೈದಿಗಳಿಗೆ ನೀಡುವಂತೆ ದರ್ಶನ್‌ಗೂ ಮಾಂಸಾಹಾರ ನೀಡಲಾಗಿದೆ.
ನಿಯಮದ ಪ್ರಕಾರ ಕೈದಿಗಳಿಗೆ ವಾರಕ್ಕೊಂದು ದಿನ ಮಾಂಸಾಹಾರ ಸಿಗುತ್ತದೆ. ಒಂದು ವಾರ ಮಟನ್, ಒಂದು ವಾರ ಚಿಕನ್ ಇರುತ್ತದೆ. ಈ ಶುಕ್ರವಾರ ರಾತ್ರಿ ದರ್ಶನ್ ಸಹಿತ ಎಲ್ಲ 385 ಕೈದಿಗಳಿಗೂ ಮಟನ್ ಊಟ ನೀಡಲಾಯಿತು. ಪ್ರತೀ ಕೈದಿಗೆ 115 ಗ್ರಾಂನಂತೆ ಮಟನ್ ನೀಡಲಾಗುತ್ತಿದೆ. ದರ್ಶನ್‌ಗಷ್ಟೇ ಅಲ್ಲ, ಡಿ ಗ್ಯಾಂಗ್ ಸದಸ್ಯರಿಗೂ ಕಠಿನ ನಿಯಮ
ಬಂದೀ ಖಾನೆ ಉತ್ತರ ವಲಯ ಐಜಿಪಿ ನಿರ್ದೇಶನ
ಬೆಳಗಾವಿ: ವಿಚಾರಣಾ ಧೀನ ಕೈದಿ ದರ್ಶನ್‌ಗೆ ಕಠಿನ ನಿಯಮ ವಿಧಿ ಸಿರುವ ಕಾರಾಗೃಹ ಮತ್ತು ಸುಧಾರಣ ಸೇವೆಗಳ ಉತ್ತರ ವಲಯ ಐಜಿಪಿ ಟಿ.ಪಿ. ಶೇಷ ಅವರು ದರ್ಶನ್ ಸಹಚರರಿಗೂ ಕಠಿನ ನಿಯಮ ವಿ ಧಿಸಿ ಆಯಾ ಜೈಲು ಅಧಿಧೀಕ್ಷಕರಿಗೆ ಜ್ಞಾಪನಾ ಪತ್ರ ಬರೆದಿದ್ದಾರೆ.
Related Articles
Advertisement
ಅಭಿಮಾನಿಗಳಿಂದ ಕನಕದುರ್ಗಮ್ಮಗೆ ಪೂಜೆಬಳ್ಳಾರಿ: ದರ್ಶನ್ ದೋಷಮುಕ್ತನಾಗಿ ಬೇಗ ಬಿಡುಗಡೆಯಾಗಲಿ ಎಂದು ಅಭಿಮಾನಿಗಳು ಜೈಲಿಗೆ ಅನತಿ ದೂರದಲ್ಲಿರುವ ಕನಕದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ದೇವಿಯ ಮೂರ್ತಿಗೆ ದೊಡ್ಡ ಮಾಲೆ ಅರ್ಪಿಸಿ ದರ್ಶನ್ ಹೆಸರಿನಲ್ಲಿ ಕುಂಕುಮಾರ್ಚನೆ ಮಾಡಿಸಿ, 201 ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ಭಕ್ತರಿಗೆ ಅನ್ನ ಸಂತರ್ಪಣೆಯೂ ಇತ್ತು. ದರ್ಶನ್ ನಟನೆಯ “ಕ್ರಾಂತಿ’ ಸಿನೆಮಾದ ಪೋಸ್ಟರ್ ಹಿಡಿದು ಘೋಷಣೆ ಕೂಗಿದರು. ದರ್ಶನ್‌ಗೆ ಕುಂಕುಮ ನೀಡಲು ನಿರಾಕರಣೆ
ಕುಂಕುಮಾರ್ಚನೆ ಮಾಡಿಸಿದ್ದ ಕುಂಕುಮವನ್ನು ದರ್ಶನ್‌ಗೆ ನೀಡುವಂತೆ ಅಭಿಮಾನಿಗಳು ಜೈಲಿನ ಭದ್ರತಾ ಸಿಬಂದಿಯಲ್ಲಿ ಮನವಿ ಮಾಡಿಕೊಂಡರು. ಆದರೆ ಸಿಬಂದಿ ನಿರಾಕರಿಸಿದರು. ಮೂರ್ತಿಯ ಮೇಲೆ ಕಾಲಿಟ್ಟು ದೇವಿಗೆ ಅಪಮಾನ!
ಕನಕದುರ್ಗಮ್ಮ ಮೂರ್ತಿಗೆ ಹಾರ ಹಾಕುವ ಆತುರದಲ್ಲಿ ದೇವಿ ಮೂರ್ತಿಯ ಕಿವಿಯ ಮೇಲೆ ಕಾಲು ಇಟ್ಟು ಏರಿದರು. ಬಳಿಕ ದೇವಿಯ ತಲೆಮೇಲೆ ಕುಳಿತು ಅಪಚಾರವೆಸಗಿದ್ದಾರೆ. ಇದನ್ನು ಕಂಡ ಸ್ಥಳೀಯ ಭಕ್ತರು ಆಕ್ಷೇಪಿಸಿ ಅಸಮಾಧಾನ ವ್ಯಕ್ತಪಡಿಸಿದರು. ಟ್ರೆಂಡಿಂಗ್ ಆಯ್ತು ದರ್ಶನ್‌ಕೈದಿ ನಂ. 511
ಬಳ್ಳಾರಿ: ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ನೀಡಿರುವ ವಿಚಾರಣಾಧಿಧೀನ ಕೈದಿ ಸಂಖ್ಯೆ 511 ಟ್ರೆಂಡಿಂಗ್ ಆಗುತ್ತಿದ್ದು, ಅಭಿಮಾನಿಯೊಬ್ಬರು ತನ್ನ ಆಟೋ ರಿಕ್ಷಾದಲ್ಲಿ ಅದನ್ನು ಬರೆಸಿಕೊಂಡಿದ್ದಾರೆ. ಬಳ್ಳಾರಿ ಜೈಲು ಹಕ್ಕಿಯಾಗಿರುವ ದರ್ಶನ್ ಅಭಿಮಾನಿಯೊಬ್ಬ ತನ್ನ ಆಟೋ ಹಿಂದೆ “ಕೈಕೋಳ’ ಚಿತ್ರದೊಂದಿಗೆ ಕನ್ನಡ ದಲ್ಲಿ “ಬಳ್ಳಾರಿ’ ಇಂಗ್ಲಿಷ್‌ನಲ್ಲಿ “ಕೈದಿ’ (ಕೆಎಚ್‌ಐಡಿಐ) ಎಂದು ಬರೆದು ಅದರ ಕೆಳಗೆ ದರ್ಶನ್ ಕೈದಿ ಸಂಖ್ಯೆ 511 ಎಂದು ಬರೆಸಿದ್ದಾನೆ. ದರ್ಶನ್‌ನ ಮೂವರು ಸಹಚರರು ಮೈಸೂರು ಕಾರಾಗೃಹಕ್ಕೆ ಸ್ಥಳಾಂತರ
ಮೈಸೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಸಹಚರರಾದ ಪವನ್, ನಂದೀಶ್ ಮತ್ತು ರಾಘವೇಂದ್ರ ಅವರನ್ನು ಬೆಂಗ ಳೂ ರಿನ ಪರ ಪ್ಪನ ಅಗ್ರಹಾರದಿಂದ ಶುಕ್ರವಾರ ಬೆಳಗ್ಗೆ ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಗುರುವಾರವಷ್ಟೇ ದರ್ಶನ್ ಸೇರಿ ಇತರರನ್ನು ಶಿವಮೊಗ್ಗ, ಹಿಂಡಲಗಾ, ಧಾರವಾಡ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಎ3 ಆರೋಪಿ ಪವನ್‌ಗೆ 1023, ಎ 4 ಆರೋಪಿ ರಾಘವೇಂದ್ರಗೆ 1024 ಮತ್ತು ಎ 5 ಆರೋಪಿ ನಂದೀಶ್‌ಗೆ 1025 ನಂಬರ್ ನೀಡಲಾಗಿದೆ. ನಟನ ಅಭಿಮಾನಿಗಳಿಗೆ ಪೊಲೀಸರ ಲಾಠಿ ಏಟಿನ ರುಚಿ
ಬೆಂಗಳೂರು: ದರ್ಶನ್ ಅಭಿನಯದ ಕರಿಯ ಸಿನೆಮಾ ಶುಕ್ರವಾರ ರಾಜ್ಯಾದ್ಯಂತ ಮರು ಬಿಡುಗಡೆ ಆಗಿದ್ದು ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಅವಾಚ್ಯ ಶಬ್ದಗಳಿಂದ ಘೋಷಣೆ ಕೂಗಿದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. ಅಭಿಮಾನಿಗಳು ದರ್ಶನ್‌ನ ಕರಿಯ ಸಿನೆಮಾ ಪೋಸ್ಟರ್ ಜತೆಗೆ ವೈರಲ್ ಆದ ಜೈಲಿನ ಫೋಟೋಗೆ ಹಾಲಿನ ಅಭಿಷೇಕ ಮಾಡಿದರು. ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಗಲಾಟೆ ಮಾಡದಂತೆ ಪೊಲೀಸರು ಎಚ್ಚರಿಕೆ ಕೊಟ್ಟರೂ ಸಹ ಅಭಿಮಾನಿಗಳು ಅವಾಚ್ಯ ಶಬ್ದಗಳಿಂದ ಘೋಷಣೆ ಕೂಗಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪೊಲೀಸರು ಲಾಠಿ ಬೀಸುತ್ತಿದ್ದಂತೆ ಅಭಿಮಾನಿಗಳು ಚೆಲ್ಲಾಪಿಲ್ಲಿಯಾಗಿ ಥಿಯೇಟರ್‌ನಿಂದ ಚದುರಿ ಹೊರಗೆ ಓಡಿ ಹೋದರು. ಬಳ್ಳಾರಿಯಲ್ಲಿ “ಶಾಸ್ತ್ರಿ’ ಸಿನೆಮಾ ಪ್ರದರ್ಶನ
ಬಳ್ಳಾರಿ: 2005ರ ಜೂ. 10ರಂದು ತೆರೆ ಕಂಡಿದ್ದ ದರ್ಶನ್ ನಟನೆಯ “ಶಾಸ್ತ್ರಿ’ ಚಿತ್ರವನ್ನು ಸುಮಾರು 19 ವರ್ಷಗಳ ಬಳಿಕ ಇದೀಗ ಬಳ್ಳಾರಿ ನಗರದ ರಾಘವೇಂದ್ರ ಚಿತ್ರಮಂದಿರದಲ್ಲಿ ಮರು ಬಿಡುಗಡೆ ಮಾಡಲಾಗಿದೆ. ಚಿತ್ರಮಂದಿರದ ಬಳಿ ಗಲಾಟೆ ಮಾಡುತ್ತಿದ್ದ ಪ್ರೇಕ್ಷಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.