Advertisement
ಈ ಕಾರಣಕ್ಕಾಗಿಯೇ ದರ್ಶನ್ ಟೀಂನ ಪವನ್ ಮತ್ತು ಕೆಲವರು ನಕಲಿ ಖಾತೆ ತೆರೆದು ರೇಣುಕಾಸ್ವಾಮಿಯ ಫೇಕ್ ಅಕೌಂಟ್‌ಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಬಳಿಕ ಚಾಟ್ ಮಾಡಿದ್ದಾರೆ. ಅಲ್ಲಿಂದ ಆತನ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
Related Articles
Advertisement
ನ್ಯಾಯಾಧೀಶರ ಮುಂದೆಯೇ ಕಣ್ಣೀರಿಟ್ಟ ಚಾಲೆಂಜಿಂಗ್ ಸ್ಟಾರ್
ಬೆಂಗಳೂರು: ಮೈಸೂರಿನಿಂದ ಅನ್ನ ಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ಕರೆತಂದ ದರ್ಶನ್‌ಗೆ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ರೇಣುಕಾಸ್ವಾಮಿ ಯಾರೆಂದು ಗೊತ್ತಿಲ್ಲ. ಈ ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿಗಳ ಫೋಟೋ ತೋರಿಸಿ ಕೇಳಿದಾಗ, ಈ ಎಲ್ಲರ ಪರಿಚಯವಿದೆ. ಈ ಪೈಕಿ ಒಬ್ಬ ಚಾಲಕ, ಮ್ಯಾನೇಜರ್ ಹಾಗೂ ಇತರರು ಆಪ್ತರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಪೊಲೀಸರು, ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಹಾಗೂ ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸಿ ದರ್ಶನ್‌ಗೆ ತೋರಿಸಿದಾಗ ಸುಮ್ಮನಾಗಿದ್ದಾರೆ ಎಂದು ಹೇಳಲಾಗಿದೆ.
ಕೋರ್ಟ್‌ನಲ್ಲಿ ಕಣ್ಣೀರಿಟ್ಟರು: ಮಂಗಳವಾರ ಸಂಜೆ ದರ್ಶನ್ ಸೇರಿ ಎಲ್ಲ 13 ಮಂದಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಆಗ ದರ್ಶನ್ ಮತ್ತು ಪವಿತ್ರಾಗೌಡ ನ್ಯಾಯಾಧೀಶರ ಎದುರು ಭಾವುಕರಾದ ಪ್ರಸಂಗ ಕೂಡ ನಡೆಯಿತು.
ಪವಿತ್ರಾ ಗೌಡ ಯಾರು?
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಆರಂಭದಲ್ಲಿ ಕನ್ನಡ ಚಿತ್ರರಂಗಕ್ಕೆ ನಟಿಯಾಗಿ ಎಂಟ್ರಿಕೊಟ್ಟವರು. ಎಸ್ .ನಾರಾಯಣ್ ನಿರ್ದೇಶನದ “ಛತ್ರಿಗಳು ಸಾರ್ ಛತ್ರಿಗಳು’ ಸಿನಿಮಾದ ನಾಯಕಿಯರಲ್ಲೊಬ್ಬರಾಗಿದ್ದಾರೆ. ಆ ನಂತರ ಅಗಮ್ಯ ಸೇರಿ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಚಿತ್ರರಂಗದಿಂದ ದೂರವಾಗಿದ್ದ ಪವಿತ್ರಾ ಹೆಸರು ಕೇಳಿಬಂದಿದ್ದು ದರ್ಶನ್ ಜತೆಗೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಜತೆಗಿನ ಫೋಟೊವನ್ನು ಹಂಚಿಕೊಂಡಿದ್ದ ಪವಿತ್ರಾ “ನಮ್ಮ ಸಂಬಂಧಕ್ಕೆ ಹತ್ತು ವರ್ಷಗಳಾಗಿವೆ’ ಎಂದು ಬರೆದುಕೊಂಡು ಜಗಜ್ಜಾಹೀರು ಮಾಡಿದ್ದಳು. ಇದಕ್ಕೆ “ಕರ್ಮ ರಿಟರ್ನ್ಸ್’ ಎಂದು ವಿಜಯಲಕ್ಷ್ಮಿ ಹೇಳಿದ್ದರು.
ಮದುವೆಯಾಗಿದ್ದ ಪವಿತ್ರಾ
ಪವಿತ್ರಾ ಗೌಡಗೆ ಚಿತ್ರರಂಗಕ್ಕೆ ಬರುವ ಮುನ್ನವೇ ಮದುವೆಯಾಗಿತ್ತು. ಸಂಜಯ್ ಎನ್ನುವರನ್ನು ವಿವಾಹವಾಗಿ, ಬಳಿಕ ಡೈವೋರ್ಸ್ ಪಡೆದಿದ್ದರು. ಇವರಿಗೆ ಖುಷಿ ಎಂಬ ಮಗಳಿದ್ದಾಳೆ. ಕೆಲವು ತಿಂಗಳ ಹಿಂದೆ ಪವಿತ್ರಾ ಗೌಡ ಪುತ್ರಿ ಖುಷಿ ಜತೆ ದರ್ಶನ್ ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು.
ಹಾದಿ ತಪ್ಪಿಸಲು ಬಂದವರಿಂದಲೇ ಕೊಲೆ ಹಿಂದಿನ ರಹಸ್ಯ ಬಯಲು!
ಹಣಕಾಸು ವಿಚಾರಕೆ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ಶರಣು
ಬೆಂಗಳೂರು: ಕಾಮಾಕ್ಷಿಪಾಳ್ಯದ ಸತ್ವ ಅಪಾರ್ಟ್‌ಮೆಂಟ್ ಸಮೀಪದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಆತಂಕಗೊಂಡ ನಾಲ್ವರು ಹಂತಕರು, ಪೊಲೀಸ್ ಠಾಣೆಗೆ ಬಂದು ಶರಣಾಗಿ, ಮೃತ ವ್ಯಕ್ತಿಯ ಹೆಸರು ಹಾಗೂ ಹತ್ಯೆ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ನಾವೇ ಹಣಕಾಸಿನ ವಿಚಾರಕ್ಕೆ ಕೊಂದಿದ್ದಾಗಿ ಹೇಳಿಕೆ ನೀಡಿದ್ದಾರೆ. ಅನುಮಾನಗೊಂಡ ಪೊಲೀಸರು, ನಾಲ್ವರನ್ನು ಯಾರ ಮಾಹಿತಿ ಮೇರೆಗೆ ಠಾಣೆಗೆ ಬಂದು ಶರಣಾಗಿದ್ದಿರಿ? ಎಂದೆಲ್ಲ ಪ್ರಶ್ನಿಸಿದಾಗ ಗೊಂದಲದ ಹೇಳಿಕೆ ನೀಡಿದ್ದಾರೆ. ಆರೋಪಿಗಳನ್ನು ಪೊಲೀಸ್ ಶೈಲಿಯಲ್ಲಿ ವಿಚಾರಿಸಿದಾಗ ಇತರ 7 ಮಂದಿ ಹಂತಕರ ಹೆಸರು ಬಾಯಿಬಿಟ್ಟಿದ್ದಾರೆ.
ಅನುಮಾನ ಬಂದಿದ್ದು ಇಲ್ಲಿಂದ: ಜೂ. 10ರಂದು ಆರೋಪಿಗಳ ಪೈಕಿ ನಾಲ್ವರು ಏಕಾಏಕಿ ಪೊಲೀಸರಿಗೆ ಶರಣಾಗಿ, ಹಣ ಕಾಸಿನ ವಿಚಾರಕ್ಕೆ ತಾವೇ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿ ಕೊಂಡಿ ದ್ದಾರೆ. ಅನುಮಾನ ಗೊಂಡ ವಿಜಯನಗರ ಉಪವಿಭಾಗದ ಎಸಿಪಿ ಚಂದನ್, ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಇತರ 7 ಮಂದಿ ಹೆಸರನ್ನು ಬಾಯಿಬಿಟ್ಟಿದ್ದರು. ಇದಕ್ಕೂ ಮುನ್ನ ಜೂ.9ರಂದು ಮಂಜಾನೆ ಫುಡ್ ಡೆಲಿವರಿ ಬಾಯ್, ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.