Advertisement
ದರ್ಶನ್ ಸೇರಿ ನಾಲ್ವರು ಆರೋಪಿಗಳ ವಿಚಾರಣೆಯಲ್ಲಿ ಕೆಲವೊಂದು ಮಹತ್ವದ ಸಾಕ್ಷ್ಯಗಳು ಸಿಕ್ಕಿವೆ. ಹೀಗಾಗಿ ನಾಲ್ವರಿಗೆ ನ್ಯಾಯಾಂಗ ಬಂಧನ ವಿಧಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ ವಿಶೇಷ ಸರಕಾರಿ ಅಭಿಯೋಜಕರಾದ ಪಿ. ಪ್ರಸನ್ನ ಕುಮಾರ್, ದರ್ಶನ್ ಹಾಗೂ ಇತರ ಆರೋಪಿಗಳು ಹಾಗೂ ಜೈಲಿನಲ್ಲಿರುವ ದರ್ಶನ್ ಅಭಿಮಾನಿಗಳಿಂದ ಚಿತ್ರದುರ್ಗದ ರವಿಶಂಕರ್, ಕಾರ್ತಿಕ್, ಕೇಶವ ಮೂರ್ತಿ, ನಿಖೀಲ್ ನಾಯಕ್‌ಗೆ ಬೆದರಿಕೆ ಇದ್ದು ಅವರನ್ನು ತುಮಕೂರು ಜಿಲ್ಲಾ ಕಾರಾಗೃಹಕ್ಕೆ ವರ್ಗಾವಣೆ ಮಾಡುವಂತೆ ಕೋರ್ಟ್‌ಗೆ ಮನವಿ ಮಾಡಿದರು.
ಕೋರ್ಟ್ ಆವರಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದರ್ಶನ್ ಪರ ವಕೀಲ, ಜಾಮೀನು ಅರ್ಜಿಯನ್ನು ಸತ್ರ ನ್ಯಾಯಾಲಯದಲ್ಲಿ ಸಲ್ಲಿಸುತ್ತೇವೆ. ಅದಕ್ಕೂ ಮೊದಲು ಅಂತಿಮ ರಿಮ್ಯಾಂಡ್ ಅರ್ಜಿ ಸಲ್ಲಿಸಿ ಬಳಿಕ ಜಾಮೀನು ಅರ್ಜಿ ಹಾಕುತ್ತೇವೆ. ಒಂದು ವೇಳೆ ರಿಟ್ ಅರ್ಜಿ ಪುರಸೃತಗೊಂಡರೆ ಆರೋಪಿಗಳಿಗೆ ಬಿಡುಗಡೆ ಸಾಧ್ಯತೆಯಿದೆ. ಅದು ಹೈಕೋರ್ಟ್‌ಗೆ ವಿವೇಚನೆಗೆ ಬಿಟ್ಟದ್ದು ಎಂದರು.
Related Articles
ದರ್ಶನ್ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಲಿದ್ದಾರೆ. ಶನಿವಾರ ಸೆಷನ್ಸ್ ಕೋರ್ಟ್‌ನಲ್ಲಿ ವಕೀಲ ನಾಗೇಶ್ ಅವರ ಪರವಾಗಿ ವಕೀಲ ರಾಘವೇಂದ್ರ ರೆಡ್ಡಿ ವಕಾಲತ್ತು ಹಾಕಿದ್ದಾರೆ.
Advertisement