ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ನಾಳೆ(ಅ.5) ಕ್ಕೆ ಮುಂದೂಡಿಕೆಯಾಗಿದೆ. ಇದರೊಂದಿಗೆ ಜಾಮೀನಿನ ನಿರೀಕ್ಷೆಯಲ್ಲಿದ್ದ ದಾಸನಿಗೆ ಮತ್ತೆ ನಿರಾಸೆಯಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿಯ ಹತ್ಯೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿ ನೂರಕ್ಕೂ ಹೆಚ್ಚು ದಿನಗಳು ಕಳೆದಿದೆ. ಮೊದಲು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದ ದರ್ಶನ್ ನನ್ನ ಬಳಿಕ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯಿತು ಈ ನಡುವೆ ದರ್ಶನ್ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ.
ಇದರ ಅರ್ಜಿಯ ವಿಚಾರಣೆಯನ್ನು 57ನೇ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ನಡೆಸಲಾಗಿದ್ದು. ದರ್ಶನ್ ಪರ ವಾದ ಮಂಡನೆ ಮಾಡಿದ ವಕೀಲರಾದ ಸುನೀಲ್ ಉತ್ತಮ ತನಿಖೆ ಎಂದು ಹೇಳಿದ ವಿಚಾರವನ್ನು ಎತ್ತಿ ಹಿಡಿದ ಸುನಿಲ್ ಇದೊಂದು ಕೆಟ್ಟದಾಗಿರುವ ತನಿಖೆ ಇಲ್ಲಿ ಪೋಲಿಸರು ದರ್ಶನ್ ನನ್ನು ಆರೋಪಿಯನ್ನಾಗಿಸಲು ಕೆಲವು ವಿಚಾರಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಅಷ್ಟು ಮಾತ್ರವಲ್ಲದೆ ಕೃತ್ಯ ದಿನ ಧರಿಸಿದ್ದ ವಸ್ತುಗಳನ್ನು ಬೇಕಾದರೂ ತೋರಿಸುತ್ತೇನೆ ಎಂದು ದರ್ಶನ್ ಹೇಳಿದ್ದರು ಆದರೆ ಪೊಲೀಸರು ಕೃತ್ಯದ ದಿನ ದರ್ಶನ್ ಜೀನ್ಸ್ ಪ್ಯಾಂಟ್, ಟೀ ಶರ್ಟ್ ಮತ್ತು ಶೂ ಹಾಕಿದ್ದರು ಎಂದು ಹೇಳಿದ್ದಾರೆ ಆದರೆ ಅಸಲಿಗೆ ದರ್ಶನ್ ಕೃತ್ಯ ನಡೆದ ದಿನ ಶೂ ಬದಲಿಗೆ ಚಪ್ಪಲಿ ಧರಿಸಿದ್ದರು ಎಂದು ದರ್ಶನ್ ಹೇಳಿದ್ದಾರೆ ಅಷ್ಟುಮಾತ್ರವಲ್ಲದೆ ಪಂಚನಾಮೆಯಲ್ಲೂ ಇದನ್ನು ಉಲ್ಲೇಖಿಸಿದ್ದಾರೆ ಎಂದು ವದ ಮಂಡಿಸಿದರು.
ಇಲ್ಲಿ ಎಲ್ಲ ಸಾಕ್ಷಿಗಳನ್ನು ಸೃಷ್ಟಿ ಮಾಡಲಾಗಿದೆ ಮರದ ಕೊಂಬೆ, ಹಗ್ಗದ ತುಂಡು ಇದನ್ನೆಲ್ಲಾ ಜೂನ್ ೧೨ ರಂದು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ ಆದರೆ ಜೂನ್ 9 ರಂದೇ ಇದೆಲ್ಲ ಪೋಲೀಸರ ವಶದಲ್ಲಿತ್ತು ಎಂದು ವಕೀಲ ನಾಗೇಶ್ ವದ ಮಂಡಿಸಿದ್ದಾರೆ.
ಜೂನ್ ಹನ್ನೆರಡನೇ ತಾರೀಖಿಗೆ ದರ್ಶನ್ ಅವರ ಬಟ್ಟೆಯನ್ನು ಪೊಲೀಸರು ವಶಕ್ಕೆ ಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ. ಇಲ್ಲಿರುವ ವಾಸ್ತವಾಂಶ ಏನೆಂದರೆ ಪೊಲೀಸರು ವಶ ಪಡೆದ ಬಟ್ಟೆಯನ್ನು ಒಂಬತ್ತನೇ ತಾರೀಖಿನಂದೇ ಒಗೆಯಲಾಗಿತ್ತು. ಅದೂ ಕೂಡ ಸರ್ಫ್ ಪೌಡರ್ ಹಾಕಿ ಒಗೆಯಲಾಗಿತ್ತು ಸರ್ಫ್ ಪೌಡರ್ ಹಾಕಿ ಒಗೆದ ಬಟ್ಟೆಗಳಲ್ಲಿ ರಕ್ತದ ಕಲೆ ಇರಲು ಹೇಗೆ ಸಾಧ್ಯ ಎಂದು ವಕೀಲರು ಮಾಡಿದ್ದಾರೆ.