Advertisement

Renukaswamy Case: ದರ್ಶನ್‌ಗೆ ಬಳ್ಳಾರಿ ‘ಹೈ ಸೆಕ್ಯುರಿಟಿ’ ಸೆಲ್‌ ಸಿದ್ಧ

07:57 AM Aug 28, 2024 | Team Udayavani |

ಬಳ್ಳಾರಿ: ಬೆಂಗಳೂರಿನ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸಿದ್ದ ನಟ ದರ್ಶನ್‌ನನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, “ಹೈ ಸೆಕ್ಯುರಿಟಿ’ ಸೌಲಭ್ಯವುಳ್ಳ ಸೆಲ್‌ಗ‌ಳನ್ನು ಸಿದ್ಧಗೊಳಿಸಲಾಗುತ್ತಿದೆ.

Advertisement

ಬಳ್ಳಾರಿ ಕೇಂದ್ರ ಕಾರಾಗೃಹ 800ರಿಂದ 1 ಸಾವಿರ ಕೈದಿಗಳ ಸಾಮರ್ಥ್ಯ ಹೊಂದಿದೆ. ಸದ್ಯ ವಿಚಾರಣಾಧೀನ, ಸಜಾಬಂದಿಗಳು ಸೇರಿ ಒಟ್ಟು 368 ಕೈದಿಗಳಿದ್ದಾರೆ. ವಿಚಾರಣಾಧೀನ ಕೈದಿಗಳಿಗೆ ಪ್ರತ್ಯೇಕ 5 ಬ್ಲಾಕ್‌ಗಳಿವೆ. ಸಜಾಬಂದಿಗಳಿಗೆ 200 ಪ್ರತ್ಯೇಕ ಸೆಲ್‌ಗ‌ಳಿವೆ.

“ಹೈ ಸೆಕ್ಯುರಿಟಿ’ ಸೆಲ್‌ಗ‌ಳು ನೀರು, ಶೌಚಾಲಯ ಸೌಲಭ್ಯ ಹೊಂದಿವೆ. ಸೆಲ್‌ನಲ್ಲಿದ್ದುಕೊಂಡೇ ಕೋರ್ಟ್‌ ಕಲಾಪ ವೀಕ್ಷಿಸಲು ವೀಡಿಯೋ ಕಾನ್ಫರೆನ್ಸ್‌ ವ್ಯವಸ್ಥೆ ಇದೆ. ಸಿಸಿ ಕೆಮರಾ ಅಳವಡಿಸಿ ನಿಗಾ ವಹಿಸಲಾಗುತ್ತದೆ. ಬಳ್ಳಾರಿ ಕಾರಾಗೃಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಜಿಲ್ಲೆಗಳ ಕೈದಿಗಳೇ ಇದ್ದಾರೆ.

ಅಂದು ಚಿತ್ರೀಕರಣ; ಇಂದು ಸೆರೆವಾಸ!
2017ರಲ್ಲಿ ತೆರೆಕಂಡಿದ್ದ ದರ್ಶನ್‌ ನಟನೆಯ “ಚೌಕ’ ಚಿತ್ರವನ್ನು ಬಳ್ಳಾರಿ ಕೇಂದ್ರ ಕಾರಾಗೃಹದ ಖಾಲಿ ಸೆಲ್‌ಗ‌ಳಲ್ಲಿ ಚಿತ್ರೀಕರಿಸಲಾಗಿತ್ತು. ಅಂದು ಚಿತ್ರೀಕರಣಕ್ಕೆ ಈ ಜೈಲಿಗೆ ಬಂದಿದ್ದ ದರ್ಶನ್‌ ಈಗ ಅದೇ ಜೈಲಲ್ಲಿ ಸೆರೆವಾಸಕ್ಕೆ ಆಗಮಿಸುತ್ತಿದ್ದಾನೆ.

ಒಂದು ರಾತ್ರಿ ಕಳೆದಿದ್ದ ಜನಾರ್ದನ ರೆಡ್ಡಿ
ಅಕ್ರಮ ಗಣಿಗಾರಿಕೆ ಆರೋಪದಡಿ ಜನಾರ್ದನ ರೆಡ್ಡಿ ಆಂಧ್ರದ ಚರ್ಲಪಲ್ಲಿ ಜೈಲಲ್ಲಿದ್ದರು. ಅವರನ್ನು ವಿಚಾರಣೆಗೆ ಸಂಡೂರು ನ್ಯಾಯಾಲಯಕ್ಕೆ ಕರೆತರುವಾಗ ಬಳ್ಳಾರಿ ಜೈಲಿನಲ್ಲಿ ಒಂದು ದಿನ ರಾತ್ರಿ ಇರಿಸಲಾಗಿದ್ದು, ಮರು ದಿನ ಬೆಳಗ್ಗೆ ಸಂಡೂರಿನ ನ್ಯಾಯಾಲಯಕ್ಕೆ ಕರೆದೊಯ್ಯಲಾಗಿತ್ತು.

Advertisement

ವಿಶೇಷವೆಂದರೆ ಇದಕ್ಕೂ ಒಂದು ವರ್ಷದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜನಾರ್ದನ ರೆಡ್ಡಿ, ಇದೇ ಜೈಲಲ್ಲಿ ಸನ್ನಡತೆ ಆಧಾರದಲ್ಲಿ ಬಿಡುಗಡೆಗೊಳಿಸುವಂತೆ ಪ್ರತಿಭಟಿಸುತ್ತಿದ್ದ ಕೈದಿಗಳನ್ನು ಭೇಟಿ ಮಾಡಿ ಭರವಸೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next