Advertisement

Renukaswamy Case; 3 ಪಿಸ್ತೂಲ್‌ ಶೀಘ್ರ ಪೊಲೀಸರ ವಶಕ್ಕೆ ?

12:25 AM Jun 27, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟ ದರ್ಶನ್‌ ಹಾಗೂ ಪ್ರದೋಷ್‌ ಹೊಂದಿರುವ 3 ಪಿಸ್ತೂಲ್‌ಗ‌ಳನ್ನು ಪೊಲೀಸರು ಶೀಘ್ರದಲ್ಲೇ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

Advertisement

ನಟ ದರ್ಶನ್‌ ಬಳಿ 2 ಯುಎಸ್‌ ಮೇಡ್‌ ಪಿಸ್ತೂಲ್‌ಗ‌ಳು, ಪ್ರದೋಷ್‌ ಬಳಿ 1 ಪಿಸ್ತೂಲ್‌ ಇರುವುದು ಗೊತ್ತಾಗಿದೆ. ಇಬ್ಬರೂ ಪಿಸ್ತೂಲ್‌ಗೆ ಪರವಾನಿಗೆ ಹೊಂದಿದ್ದರು. ಆದರೆ, ಕಳೆದ ಲೋಕಸಭಾ ಚುನಾವಣೆ ವೇಳೆ ಪರವಾನಿಗೆ ಪಡೆದಿರುವ ಎಲ್ಲ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಲು ಸೂಚಿಸಲಾಗಿತ್ತು.

ಆದರೆ, ಚುನಾವಾಣೆ ವೇಳೆ ಶಸ್ತ್ರಾಸ್ತ್ರ ಠೇವಣಿಯಿಂದ ದರ್ಶನ್‌ ಮತ್ತು ಪ್ರದೋಷ್‌ ವಿನಾಯಿತಿ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

ಬೆಂಗಳೂರು ನಗರಾದ್ಯಂತ 7 ಸಾವಿರಕ್ಕೂ ಅಧಿಕ ಗನ್‌ ಲೈಸೆನ್ಸ್‌ ಪರವಾನಿಗೆದಾರರಿ¨ªಾರೆ. ಈ ಪೈಕಿ ದರ್ಶನ್‌ ಮತ್ತು ಪ್ರದೋಷ್‌ ಸೇರಿ 277 ಜನರಿಗೆ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ನೀಡಲಾಗಿತ್ತು. ಬೆಂಗಳೂರು ಪೊಲೀಸ್‌ ಕಮಿಷನರ್‌ ಅವರಿಂದಲೇ ವಿನಾಯಿತಿ ನೀಡಿ ಆದೇಶ ದೊರೆತಿದೆ. ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಬ್ಬರೂ ಸಿಕ್ಕಿ ಬಿದ್ದಿರುವುದರಿಂದ ಪ್ರದೋಷ್‌ ಪಿಸ್ತೂಲ್‌ ಅನ್ನು ಗಿರಿನಗರ ಠಾಣೆ ಪೊಲೀಸರಿಗೆ ಹಾಗೂ ದರ್ಶನ್‌ ಪಿಸ್ತೂಲ್‌ಗ‌ಳನ್ನು ಆರ್‌ಆರ್‌ನಗರ ಠಾಂಣೆ ಪೊಲೀಸರಿಗೆ ವಶಪಡಿಸಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಲಾಠಿಯಿಂದ ರೇಣುಕಾಸ್ವಾಮಿಗೆ ಹಲ್ಲೆ ?
ಇತ್ತೀಚೆಗೆ ದರ್ಶನ್‌ ಜನ್ಮದಿನದಂದು ಪೊಲೀಸ್‌ ಸಿಬಂದಿ ದರ್ಶನ್‌ ಮನೆಯ ಬಳಿ ಲಾಠಿ ಬಿಟ್ಟು ಹೋಗಿದ್ದರು. ಆ ಲಾಠಿ ದರ್ಶನ್‌ ಮನೆಯ ಸೆಕ್ಯೂರಿಟಿ ಗಾರ್ಡ್‌ ರೂಂನಲ್ಲಿ ಎತ್ತಿಟ್ಟಿದ್ದರು. ಅದೇ ಲಾಠಿ ಬಳಕೆ ಮಾಡಿ ರೇಣುಕಾಸ್ವಾಮಿ ಮೇಲೆ ಆರೋಪಿಗಳು ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಅದೇ ಲಾಠಿಯ ಮೇಲೆ ಫಿಂಗರ್‌ ಪ್ರಿಂಟ್‌ ಸಂಗ್ರಹಕ್ಕೆ ಪೊಲೀಸರು ಮುಂದಾಗಿ¨ªಾರೆ ಎನ್ನಲಾಗಿದೆ.

Advertisement

ಠೇವಣಿಯಿಂದ ವಿನಾಯಿತಿ ಏಕೆ ?
ಕಮಿಷನರ್‌ ಬಿ. ದಯಾನಂದ್‌ ಅವರು ಶಸ್ತ್ರಾಸ್ತ್ರ ಠೇವಣಿ ಸ್ಕ್ರೀನಿಂಗ್‌ ಕಮಿಟಿಯ ಅಧ್ಯಕ್ಷರಾಗಿದ್ದು, ಅತೀ ಗಣ್ಯರಿಗೆ ನೀಡುವ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿಯಲ್ಲಿ ನಟ ದರ್ಶನ್‌, ಪ್ರದೋಷ್‌ ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದರು. ನಿವೃತ್ತ ನ್ಯಾಯಾಧೀಶರು, ಐಎಎಸ್‌, ಐಪಿಎಸ್‌ ಅಧಿಕಾರಿಗಳು, ಕೇಂದ್ರ ಹಾಗೂ ರಾಜ್ಯ ಸರಕಾರಿ ಇಲಾಖೆ ಅಧಿಕಾರಿಗಳು, ಶಾಸಕರು ಸೇರಿ ಕೆಲವರಿಗೆ ಮಾತ್ರ ವಿನಾಯಿತಿ ನೀಡಲು ಅವಕಾಶಗಳಿವೆ. ಉಳಿದಂತೆ ಎಲ್ಲರ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ಆಯಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ವಶಕ್ಕೆ ಪಡೆಯಬೇಕೆಂಬ ನಿಯಮಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next