ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯನ್ನು(Renukaswamy) ಅಪಹರಣ ಮಾಡಿ ಚಿತ್ರಹಿಂಸೆ ನೀಡಿ ಭೀಕರವಾಗಿ ಹತ್ಯೆಗೈದಿರುವ ಆರೋಪದಲ್ಲಿ ದರ್ಶನ್& ಗ್ಯಾಂಗ್ ಕಳೆದ ಎರಡು ತಿಂಗಳಿನಿಂದ ಜೈಲಿನಲ್ಲಿದೆ.
ಪ್ರಕರಣ ಸಂಬಂಧ 17 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಸಿದ್ದಾರೆ. ಈ ಸಂಬಂಧ ಪೊಲೀಸರು 3,991 ಪುಟಗಳ ಆರೋಪ ಪಟ್ಟಿಯನ್ನು ಸಲ್ಲಿಸಿದಾರೆ.
ರೇಣುಕಾಸ್ವಾಮಿಯನ್ನು ಹಲ್ಲೆ ಮಾಡಿ, ವಿದ್ಯುತ್ ಶಾಕ್ ನೀಡಿ, ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದಾರೆ ಎಂದು ಈ ಹಿಂದೆ ವರದಿಗಳಾಗಿತ್ತು. ಬಿಟ್ಟು ಬಿಡಿ ಎಂದು ಅಂಗಲಾಚಿದರೂ ರೇಣುಕಾಸ್ವಾಮಿಗೆ ಹಿಂಸೆ ನೀಡಲಾಗಿತ್ತು.
ಆರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಸಾಯುವುದಕ್ಕೂ ಮುನ್ನ ರೇಣುಕಾಸ್ವಾಮಿ ನೋವಿನಿಂದ ಕೂತು ಕ್ಷಮಿಸಿ ಎನ್ನುವ ನೋಟವುಳ್ಳ ಅಸಹಾಯಕತೆಯ ಫೋಟೋ ಈಗ ವೈರಲ್ ಆಗಿದೆ.
ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಹಿಂಸೆಯ ಕೃತ್ಯವನ್ನು ಈ ಫೋಟೋಗಳು ಎತ್ತಿ ತೋರಿಸುತ್ತದೆ. ಈ ಫೋಟೋ ಗಳು ಆರೋಪಿ ವಿನಯ್ ಫೋನ್‌ನಿಂದ ರಿಟ್ರೀವ್ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.
ಒಂದು ಫೋಟೋ ರೇಣುಕಾಸ್ವಾಮಿ ಅಂಗಲಾಚುವ ರೀತಿಯಿದ್ದು, ಇನ್ನೊಂದು ಫೋಟೋ ಎದೆ ಮೇಲೆ ಕೈಯಿಟ್ಟು ಮಲಗಿರುವ ರೀತಿಯಲ್ಲಿದೆ.
ಸದ್ಯ ವೈರಲ್ ಆಗಿರುವ ಫೋಟೋಗಳ ಬಗ್ಗೆ ಪೊಲೀಸರು ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.
ಹಲವು ಸಾಕ್ಷ್ಯಗಳ ಉಲ್ಲೇಖ: ಕೋರ್ಟ್‌ಗೆ ಸಲ್ಲಿಕೆ ಮಾಡಿರುವ ದೋಷಾರೋಪಪಟ್ಟಿಯಲ್ಲಿ ಆರೋಪಿಗಳ ವಿರುದ್ಧ ಹಲವು ಸಾಕ್ಷ್ಯಗಳನ್ನು ಉಲ್ಲೇಖ ಮಾಡಲಾಗಿದೆ. 3 ಪ್ರತ್ಯಕ್ಷ ಸಾಕ್ಷಿಗಳಿದ್ದು, ಎಫ್ಎಸ್ಎಲ್ ಮತ್ತು ಸಿಎಫ್ಎಸ್ಎಲ್ನಿಂದ 8 ವರದಿಗಳಿವೆ. 27 ಜನರ 164ರ ಅಡಿಯಲ್ಲಿ ಹೇಳಿಕೆ, 161 ಅಡಿಯಲ್ಲಿ 70 ಜನರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ 59 ಜನ ಸಮಕ್ಷಮದಲ್ಲಿ ಮಹಜರು ಮಾಡಲಾಗಿದೆ. 8 ವೈದ್ಯರು, ತಹಶೀಲ್ದಾರ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಸಾಕ್ಷಿ ಕೂಡ ಉಲ್ಲೇಖ ಮಾಡಲಾಗಿದೆ ಎಂದು ತಿಳಿದು ಬಂದಿದೆ.