ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ನಮ್ಮ ನಾಯಕರು. ನಾನೇ ಮುಖ್ಯಮಂತ್ರಿ ಎಂದು ಯಾರು ಬೇಕಾದರೂ ಹೇಳಿಕೊಳ್ಳುವ ಸಂಸ್ಕ್ರತಿ ಬಿಜೆಪಿಯಲ್ಲಿ ಇಲ್ಲ ಎಂದು ಶಾಸಕ ರೇಣುಕಾಚಾರ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಮಾಧ್ಯಮಗಳಲ್ಲಿ ಬಂದ ವರದಿ ಮಾತ್ರ ಗಮನಿಸಿದ್ದೇನೆ ಹೊರತು ಬೇರೆ ಯಾವ ಮಾಹಿತಿಯಿಲ್ಲ. ಯಡಿಯೂರಪ್ಪ ಜನಪ್ರಿಯ ನಾಯಕರು. ಅವರು ಕೇವಲ ವೀರಶೈವ ವರ್ಗಕ್ಕೆ ಸೀಮಿತವಾದ ನಾಯಕರಲ್ಲ. ಎಲ್ಲ ಸಮುದಾಯದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದಾರೆ ಎಂದರು.
ಇದನ್ನೂ ಓದಿ:ಮಣಿಪುರ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸೇರಿ ಎಂಟು ಮಂದಿ ಶಾಸಕರು ಇಂದು ಬಿಜೆಪಿಗೆ ಜಂಪ್..!?
ನಾನು ಯಡಿಯೂರಪ್ಪ ಪರ 66 ಶಾಸಕರ ಸಹಿ ಮಾಡಿಸಿದ್ದೆ. ಆದರೆ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರ ಸೂಚನೆ ನೀಡಿ ಸಹಿ ಸಂಗ್ರಹ ಮಾಡದಂತೆ ಸೂಚಿಸಿದ್ದರು. ಹಾಗಾಗಿ ನಾನು ಅಂದೇ ಸಹಿ ಸಂಗ್ರಹ ನಿಲ್ಲಿಸಿದೆ. ಈಗ ಆ ಬಗ್ಗೆ ಚರ್ಚೆ ಅನಗತ್ಯ. ಎಲ್ಲ ಶಾಸಕರು, ಸಂಸದರು ಯಡಿಯೂರಪ್ಪ ಪರವಾಗಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು.
ಕಟೀಲ್ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಾಗಿ ಅವರ ಹೆಸರಿನಲ್ಲಿ ನಕಲಿ ಆಡಿಯೋ ಬಿಡುಗಡೆ ಮಾಡಲಾಗಿದೆ. ಇದರ ಹಿಂದೆ ಬಹುದೊಡ್ಡ ಷಡ್ಯಂತ್ರ ಇದೆ. ಈ ಬಗ್ಗೆ ತನಿಖೆಗೆ ಅವರೇ ಆಗ್ರಹ ಮಾಡಿದ್ದಾರೆ ಎಂದರು