ಚಿತಾಪುರ: ಜಗದ್ಗರು ರೇಣುಕಾಚಾರ್ಯರ ತತ್ವ ಸಿದ್ಧಾಂತಗಳು ಎಲ್ಲ ಧರ್ಮದವರಿಗೆ ಮಾರ್ಗದರ್ಶಕವಾಗಿವೆ ಎಂದು ಅಳ್ಳೋಳಿ ಸಾವಿರ ದೇವರ ಮಠದ ಸಂಗಮನಾಥ ದೇವರು ಹೇಳಿದರು. ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಅಖೀಲ ಭಾರತ ವೀರಶೈವ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಗದ್ಗರು ರೇಣುಕಾಚಾರ್ಯರ ಜಯಂತಿ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ವೀರಶೈವ ಧರ್ಮ ಒಂದು ಜಾತಿಗೆ ಸೀಮಿತವಲ್ಲ. ಇಡೀ ವಿಶ್ವಕ್ಕೆ ಶ್ರೇಷ್ಠವಾದ ಧರ್ಮವಾಗಿದೆ. ಈ ಧರ್ಮದಲ್ಲಿ ಭಾರತೀಯ ಸಂಸ್ಕೃತಿ ಅಡಗಿದೆ. ಎಲ್ಲ ಧರ್ಮಗಳ ತತ್ವಗಳು ಈ ಧರ್ಮದಲ್ಲಿ ಅಡಗಿವೆ ಎಂದು ಹೇಳಿದರು. ಹಲಕರ್ಟಿ ಧಾನ್ಯ ಮಂದಿರದ ರಾಜಶೇಖರ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಯತ ಧರ್ಮದ ಬಗ್ಗೆ ಕಚ್ಚಾಟ ಬೇಡ.
ಎಲ್ಲರೂ ಸೇರಿ ಒಗ್ಗಟಿನಿಂದ ವೀರಶೈವ ಧರ್ಮ ಸಂಸ್ಥಾಪನೆ ಮಾಡಿ ರೇಣುಕಾಚಾರ್ಯರ ಜಯಂತಿ ಆಚರಿಸಬೇಕು ಎಂದು ಸಲಹೆ ನೀಡಿದರು. ವೀರಶೈವ ಸಮಾಜದ ಯುವ ಘಟಕ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿ, ಮುಂದಿನ ವರ್ಷದಿಂದ ವೀರಶೈವ ಸಮಾಜದಿಂದ ಒಂದು ತಿಂಗಳ ಮುಂಚಿತವಾಗಿಯೇ ಪೂರ್ವ ಸಿದ್ಧತೆ ಸಭೆ ನಡೆಸಿ ಅದ್ಧೂರಿ ಸಮಾರಂಭ ಮಾಡಲಾಗುವುದು ಎಂದು ಹೇಳಿದರು.
ತಾಲೂಕು ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಚಂದ್ರಶೇಖರ ಅವಂಟಿ, ಕಸಪಾ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ಮಾತನಾಡಿದರು. ವೀರಶೈವ ಸಮಾಜದ ಮುಖಂಡ ಸೋಮಶೇಖರ ಪಾಟೀಲ ಬೆಳಗುಂಪಾ ಕಾರ್ಯಕ್ರಮ ಉದ್ಘಾಟಿಸಿದರು. ವಿಕಾಸ ಅಕಾಡಮಿ ಸಂಚಾಲಕ ಸಿದ್ರಾಮೇಶ್ವರ ರೇಷ್ಮಿ, ಶಿವಕುಮಾರ ಸುಲ್ತಾನಪುರ, ಕರಬಸಯ್ಯ ಶಾಸ್ತ್ರಿ, ಸಿದ್ರಾಮಯ್ಯ ಗೊಂಬಿಮಠ, ನಾಗರಾಜ ಹೂಗಾರ, ಕೋಟೇಶ್ವರ ರೇಷ್ಮಿ,
ಮಂಜುನಾಥ ಸ್ವಾಮಿ, ಸೋಮಶೇಖರ ಮೂಡಬೂಳಕರ್, ಬಸವರಾಜ ಸಂಕನೂರ, ಬಸವರಾಜ ಹೂಗಾರ, ವೆಂಕಟಮ್ಮ ಪಾಲಪ್, ಸಂಗಮ್ಮ ದರಪುರ,ರಾಜಶೇಖರ ಬಳ್ಳಾ, ನಾಗೇಂದ್ರ ಪೊಲೀಸ್, ಸರ್ವೆಶ ಸ್ವಾಮಿ, ರವಿ ಗೊಬ್ಬರ, ರಮೇಶ ಕಾಳನೂರ, ಯೊಗೇಶ ಕಲಾಲ ಇದ್ದರು. ಮಂಜುನಾಥ ಶಾಸ್ತ್ರಿ ಸ್ವಾಗತಿಸಿದರು. ಸಿದ್ದಯ್ಯ ಶಾಸ್ತ್ರಿ ನಿರೂಪಿಸಿದರು. ಬಸವರಾಜ ಮಾಡಗಿ ವಂದಿಸಿದರು.
ಮೆರವಣಿಗೆ: ಅಕ್ಕಮಹಾದೇವಿ ಮಂದಿರದಿಂದ ರೇಣುಕಾಚಾರ್ಯರ ಭಾವಚಿತ್ರದ ಭವ್ಯ ಮರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚಾರಿಸಿ ಅಕ್ಕಮಹಾದೇವಿ ಮಂದಿರಕ್ಕೆ ತಲುಪಿತು.