Advertisement

Renuka Swamy case; ನಟ ದರ್ಶನ್ ಮಾಡಿದ್ದು ತಪ್ಪು…: ಶಾಸಕ ವಿನಯ್ ಕುಲಕರ್ಣಿ ಹೇಳಿದ್ದೇನು?

04:38 PM Jun 18, 2024 | Team Udayavani |

ಬೆಳಗಾವಿ: ನಟ ದರ್ಶನ್ ವಿರುದ್ದ ಆರೋಪ ಇದ್ದಿದ್ದಕ್ಕೆ ಬಂಧಿಸಿದ್ದಾರೆ. ತಪ್ಪು ತಪ್ಪೇ, ಹೀಗಾಗಿ ಅವರನ್ನು ಅರೆಸ್ಟ್ ಮಾಡಿದ್ದಾರೆ. ಪೊಲೀಸರು ಈ ವಿಚಾರದಲ್ಲಿ ತನಿಖೆ ಮಾಡುತ್ತಿದ್ದಾರೆ. ದರ್ಶನ್ ಗೆ ಯಾವ ಪ್ರಮಾಣದ ಶಿಕ್ಷೆ ಆಗಬೇಕೆಂದು ಕೋರ್ಟ್ ತೀರ್ಮಾನ ಮಾಡುತ್ತದೆ. ಆದರೆ ನಟ ದರ್ಶನ್ ಮಾಡಿದ್ದು ತಪ್ಪು ಎಂದು ದರ್ಶನ್ ಒಡನಾಡಿ, ಶಾಸಕ ವಿನಯ ಕುಲಕರ್ಣಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಅವರು ರ್ಯಾಶ್ ಆಗಿ ವರ್ತನೆ ಮಾಡುತ್ತಿದ್ದರು ಎಂದಿತ್ತು. ನಮ್ಮ ಜೊತೆಗಿದ್ದಾಗ ಆ ರೀತಿ ಇರುತ್ತಿರಲಿಲ್ಲ. ಕೊಲೆ ಮಾಡುವಷ್ಟರ ಮಟ್ಟಿಗೆ ಏನಾಗಿದೆ ಎಂದು ನನಗೆ ಗೊತ್ತಿಲ್ಲ ಎಂದರು.

ನಟ ಮಾದರಿ ಆಗಬೇಕಿದ್ದವರು ಈ ರೀತಿ ಮಾಡಿದ್ದು ಸರಿನಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿನಯ್, ‘ಅವನಿಗೆ ಬಿಟ್ಟಿದ್ದು’ ಎಂದು ಹೇಳುತ್ತಾ ಆಕಾಶದತ್ತ ಕೈ ತೋರಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ, ಪಕ್ಷದಲ್ಲೂ ಆ ಬಗ್ಗೆ ಚರ್ಚೆಯೂ ಆಗಿಲ್ಲ ಎಂದು ವಿನಯ ಕುಲಕರ್ಣಿ ಹೇಳಿದರು.

ಸೋತ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲು ಗೆಲುವಿಗೆ ಹಲವಾರು ಕಾರಣಗಳು ಇವೆ ಎಂದರು.

Advertisement

ಮಂತ್ರಿ ಆಸೆಯಿದೆ..: ನಾಗೇಂದ್ರ ರಾಜೀನಾಮೆಯಿಂದ ತೆರವಾಗಿರುವ ಸಚಿವ ಸ್ಥಾನಕ್ಕೆ ವಿನಯ ಕುಲಕರ್ಣಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಆ ಬಗ್ಗೆ ಚರ್ಚೆಯಾಗಿಲ್ಲ, ಯಾರಿಗಾದರೂ ಮಂತ್ರಿ ಆಗಬೇಕು ಎಂದು ಆಸೆ ಇರುತ್ತದೆ. ನಾನು ಮಂತ್ರಿ ಇದ್ದಾಂವ, ಸೀನಿಯರ್ ಕೂಡಾ ಹೌದು. ನಾನು ಮಂತ್ರಿ ಮಾಡಿ ಎಂದು ಯಾರನ್ನೂ ಕೇಳಲ್ಲ. ಪಕ್ಷದಲ್ಲಿ ಒಳ್ಳೆಯ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ, ಪಕ್ಷವೇ ನನ್ನನ್ನು ಗುರುತಿಸಲಿ. ನಾನು ಇವತ್ತಿನವರೆಗೂ ಮಂತ್ರಿ ಸ್ಥಾನ ಕೊಡವಂತೆ ಕೇಳಿಲ್ಲ, ಅವರಾಗಿಯೇ ಕೊಡಬೇಕು ಎಂದ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next