Advertisement

Shocking: ಅಪಘಾತ ನಡೆಸಿದರೂ ಸಾಯದ ಪತಿ… ಗೆಳೆಯನ ಜೊತೆ ಸೇರಿ ಗುಂಡು ಹಾರಿಸಿ ಕೊಂದ ಪತ್ನಿ

09:52 AM Jun 18, 2024 | Team Udayavani |

ಹರಿಯಾಣ: ಗೆಳೆಯನ ಜೊತೆ ಸೇರಿಕೊಂಡು ಅಪಘಾತ ನಡೆಸಿ ಪತಿಯನ್ನು ಕೊಲ್ಲುವ ಮೊದಲ ಯತ್ನ ವಿಫಲವಾದ ನಿಟ್ಟಿನಲ್ಲಿ ಕೊನೆಗೆ ಗೆಳೆಯನ ಜೊತೆ ಸೇರಿಕೊಂಡು ಗುಂಡು ಹಾರಿಸಿ ಪತಿಯನ್ನು ಹತ್ಯೆಗೈದ ಭಯಾನಕ ಘಟನೆ ಹರಿಯಾಣದ ಪಾಣಿಪತ್‌ನಲ್ಲಿ 2021ರಲ್ಲಿ ನಡೆದಿದ್ದು ಇದೀಗ ಪತ್ನಿ ಹಾಗೂ ಪ್ರಿಯಕರ ಜೈಲು ಕಂಬಿ ಎಣಿಸುತ್ತಿದ್ದಾರೆ.

Advertisement

ಏನಿದು ಪ್ರಕರಣ:
ವಿನೋದ್ ಬರಾಡ ಹಾಗೂ ನಿಧಿ ಪತಿ ಪತ್ನಿಯಾಗಿದ್ದು ಈ ನಡುವೆ ನಿಧಿಗೆ ಸುಮಿತ್ ಎನ್ನುವ ಇನ್ನೋರ್ವ ಗೆಳೆಯನಿದ್ದ ಆತ ನಿಧಿ ಜೊತೆ ಸಲುಗೆಯಿಂದ ನಡೆದುಕೊಳ್ಳುತ್ತಿದ್ದ ಇತ್ತ ನಿಧಿ ಹಾಗೂ ಗೆಳೆಯ ಸುಮಿತ್ ಸೇರಿಕೊಂಡು ತಮ್ಮ ವಿನೋದ್ ನನ್ನ ಮುಗಿಸಲು ಯೋಜನೆ ಹಾಕಿದ್ದರು, ಅದರಂತೆ ವಾಹನ ಡಿಕ್ಕಿ ಹೊಡೆದು ಸಾಯಿಸುವ ಯೋಜನೆ ಅವರದ್ದಾಗಿತ್ತು ಅದರಂತೆ 2021 ರ ಅಕ್ಟೋಬರ್ 5 ರಂದು ಪಂಜಾಬ್ ನೊಂದಾಯಿತ ವಾಹನವೊಂದು ವಿನೋದ್ ಸಂಚರಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ವಿನೋದ್ ತನ್ನೆರಡು ಕಾಲುಗಳನ್ನು ಕಳೆದುಕೊಂಡು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆದರೂ ದೇವರ ದಯೆ ಹೇಗೋ ಬದುಕಿಕೊಂಡ ಇದರಿಂದ ಸುಮಿತ್ ಸುಮ್ಮನಾಗಲಿಲ್ಲ ತಾವು ಮಾಡಿದ ಪ್ಲಾನ್ ಕೈ ಕೊಟ್ಟ ಸಿಟ್ಟಿನಲ್ಲಿ ಡಿಸೆಂಬರ್ 15, 2021 ರಂದು ಸುಮಿತ್ ನೇರವಾಗಿ ನಿಧಿ ಅವರ ಮನೆಗೆ ದಾಳಿ ಮಾಡಿ ಬೆಡ್ ರೂಮ್ ನಲ್ಲಿ ಮಲಗಿದ್ದ ನಿಧಿ ಅವರ ಪತಿ ವಿನೋದ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ.

ಘಟನೆ ಸಂಬಂಧ ಹತ್ಯೆಯಾದ ವಿನೋದ್ ಅವರ ಚಿಕ್ಕಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಅದರಂತೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೊದಲು ಅಪಘಾತ ನಡೆಸಿದ ವಾಹನ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಆಗ ಸುಮಿತ್ ಹಣ ನೀಡಿ ವಿನೋದ್ ಅವರನ್ನು ಕೊಲ್ಲಲು ಹೇಳಿದ್ದರು ಎಂದು ಪೊಲೀಸರ ಎದುರು ಸತ್ಯ ಹೇಳಿಕೊಂಡಿದ್ದಾನೆ ಅದರಂತೆ ಪೊಲೀಸರು ಸುಮಿತ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತಾನು ಹಾಗೂ ನಿಧಿ ಪರಸ್ಪರ ಪ್ರೀತಿಸುತ್ತಿದ್ದು ಇದರಿಂದ ಇಬ್ಬರು ಸೇರಿ ವಿನೋದ್ ನನ್ನ ಹತ್ಯೆ ನಡೆಸಲು ಸಂಚು ರೂಪಿಸಿದೆವು ಎಂದು ಹೇಳಿದ್ದಾನೆ ಅದರಂತೆ ವಾಹನ ಚಾಲಕನಿಗೆ ಹಣ ನೀಡಿ ಅಪಘಾತ ನಡೆಸಿ ಕೊಳ್ಳುವಂತೆ ಹೇಳಿದ್ದು ಇದರಿಂದ ವಿನೋದ್ ಸಾಯದೆ ಇದ್ದಾಗ ನಾನೆ ಮನೆಗೆ ಪ್ರವೇಶಿಸಿ ವಿನೋದ್ ಮೇಲೆ ಗುಂಡು ಹಾರಿಸಿ ಹತ್ಯೆಗೈದಿರುವುದಾಗಿ ಹೇಳಿಕೊಂಡಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿ ವಿನೋದ್ ಪತ್ನಿ ನಿಧಿ ಹಾಗೂ ಪ್ರಿಯಕರ ಸುಮಿತ್ ಜೈಲು ಕಂಬಿ ಎಣಿಸುತ್ತಿದ್ದಾರೆ.

ಇದನ್ನೂ ಓದಿ: Udupi: ಹಿರಿಯ ನ್ಯಾಯವಾದಿ, ಕಾಂಗ್ರೆಸ್ ಪಕ್ಷದ ಮುಖಂಡ ಚೇರ್ಕಾಡಿ ವಿಜಯ್ ಹೆಗ್ಡೆ ನಿಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next