Advertisement
ಇದೇ ವೇಳೆ ದರ್ಶನ್ ಆಪ್ತನಾಗಿರುವ ಆರೋಪಿ ದೀಪಕ್, ಪೊಲೀಸರಿಗೆ ಶರಣಾದ ನಾಲ್ವರಿಗೆ ತಲಾ 5 ಲಕ್ಷ ರೂ. ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶವ ಪತ್ತೆಯಾದ ಕೂಡಲೇ ದರ್ಶನ್ ಆಪ್ತ ದೀಪಕ್, ಚಿತ್ರದುರ್ಗದ ರಾಘವೇಂದ್ರ, ದರ್ಶನ್ ಕಾರು ಚಾಲಕ ಕಾರ್ತಿಕ್, ನಿಖೀಲ್ ನಾಯಕ್, ಕೇಶವ ಮೂರ್ತಿಗೆ ಕೊಲೆ ಪ್ರಕರಣದಲ್ಲಿ ಶರಣಾಗುವಂತೆ ಸೂಚಿಸಿದ್ದ. ಅಲ್ಲದೆ ಕೊಲೆಯಲ್ಲಿ ದರ್ಶನ್ ಹೆಸರು ಬರಬಾರದು. ಅದಕ್ಕಾಗಿ ತಲಾ 5 ಲಕ್ಷ ರೂ. ನೀಡುತ್ತೇನೆ ಎಂದಿದ್ದ. ಕೇಶವ ಮೂರ್ತಿ ಮತ್ತು ನಿಖೀಲ್‌ಗೆ ಸ್ಥಳದಲ್ಲೇ 5 ಲಕ್ಷ ರೂ. ಕೊಟ್ಟಿದ್ದಾನೆ. ರಾಘವೇಂದ್ರ ಮತ್ತು ಕಾರ್ತಿಕ್ ಜೈಲಿಗೆ ಹೋದ ಬಳಿಕ, ಅವರ ಮನೆಯವರಿಗೆ ಹಣ ತಲುಪಿಸುತ್ತೇನೆ. ವಕೀಲರ ಶುಲ್ಕ ಕೂಡ ನಾನೇ ಕೊಡುತ್ತೇನೆ ಎಂದು ಹೇಳಿದ್ದಾಗಿ ಶರಣಾದ ಆರೋಪಿಗಳು ಹೇಳಿದ್ದರು.
Related Articles
ರೇಣುಕಾಸ್ವಾಮಿ ಹತ್ಯೆ ಪ್ರಕರಣ ದಲ್ಲಿ 13 ಮಂದಿ ಆರೋಪಿಗಳಲ್ಲ, 17 ಮಂದಿ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತಲೆಮರೆಸಿಕೊಂಡಿರುವ ನಾಲ್ವರಿಗಾಗಿ ಶೋಧ ಮುಂದುವರಿ ದಿದೆ. 13 ಮಂದಿ ಬಂಧನವಾಗಿದೆ.
Advertisement
ದರ್ಶನ್ ಮಹೀಂದ್ರ ಜೀಪ್, ಸ್ಕಾರ್ಪಿಯೋ ಕಾರು ವಶಕ್ಕೆಬಂಧಿತ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೋ ಮತ್ತು ದರ್ಶನ್ ಓಡಾಟಕ್ಕೆ ಬಳಸಿದ್ದ ಮಹೀಂದ್ರ ಜೀಪನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸ್ಕಾರ್ಪಿಯೋ ಕಾರಿನಲ್ಲಿ ರೇಣುಕಾಸ್ವಾಮಿ ಮೃತದೇಹವನ್ನು ಸಾಗಿಸಲಾಗಿತ್ತು. ಕೊಲೆ ಮಾಡಿಲ್ಲ, ಆದರೆ ಹೊಡೆದಿದ್ದು ನಿಜ: ದರ್ಶನ್
ಪೊಲೀಸ್ ವಿಚಾರಣೆ ವೇಳೆ, ರೇಣುಕಾಸ್ವಾಮಿಗೆ ಒಂದೆರೆಡು ಬಾರಿ ಹೊಡೆದಿದ್ದೆ. ಆದರೆ ಆತನ ಕೊಲೆ ಮಾಡಿಲ್ಲ ಎಂದು ದರ್ಶನ್ ಹೇಳಿಕೊಂಡಿದ್ದಾರೆ. ಇನ್ನೊಮ್ಮೆ ಹೀಗೆ ಮಾಡಬೇಡ ಎಂದು ಎಚ್ಚರಿಕೆ ನೀಡಿ ಸುಮ್ಮನಾಗಿದ್ದೆ. ಆದರೆ ಆಪ್ತರು ಈ ರೀತಿ ಮಾಡಿದ್ದಾರೆ. ಬಳಿಕ ತಡರಾತ್ರಿ ಆತ ಮೃತಪಟ್ಟಿದ್ದಾನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ. ಚಪ್ಪಲಿಯಿಂದ ಹೊಡೆದಿದ್ದ ಪವಿತ್ರಾ ಗೌಡ
ದರ್ಶನ್ ಸೇರಿ ಆತನ ತಂಡ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುವಾಗ ಪವಿತ್ರಾ ಗೌಡ ಕೂಡ ಚಪ್ಪಲಿಯಿಂದ ಹೊಡೆದಿದ್ದಳು. ಅನಂತರ ದರ್ಶನ್ ಕೂಡ ಮರದ ಪಟ್ಟಿಯಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡಿದ್ದ ರೇಣುಕಾಸ್ವಾಮಿಗೆ ಎಚ್ಚ ರಿಕೆ ನೀಡಿ ದರ್ಶನ್ ತೆರಳಿದ್ದ. ಆಗಲೇ ರೇಣುಕಾ ಸ್ವಾಮಿ ಅರ್ಧಜೀವ ಕಳೆದುಕೊಂಡಿದ್ದ. ಅನಂತರ ಇತರ ಆರೋಪಿಗಳು ಹಲ್ಲೆ ನಡೆಸಿದ್ದರಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಿಬಿಐಗೆ ಕೊಡುವ ಅಗತ್ಯವಿಲ್ಲ
ಕೊಲೆಯಾದ ರೇಣುಕಾಸ್ವಾಮಿ ಕುಟುಂಬದ ಕುರಿತು ಮುಖ್ಯ ಮಂತ್ರಿ ಜತೆಗೆ ಚರ್ಚಿಸುತ್ತೇನೆ. ಪ್ರಕ ರಣದ ತನಿಖೆ ಮುಂದುವರಿದಿದ್ದು,13 ಆರೋಪಿಗಳನ್ನು ಈಗಾಗಲೇ ಬಂಧಿಸ ಲಾಗಿದೆ. ತನಿಖೆಯನ್ನು ಸಿಬಿಐಗೆ ಕೊಡುವ ಅಗತ್ಯ ಇಲ್ಲ. ತನಿಖೆ ಪೂರ್ಣಗೊಂಡ ಬಳಿಕ ಎಲ್ಲ ಮಾಹಿತಿ ಗೊತ್ತಾಗಲಿದೆ.
-ಜಿ. ಪರಮೇಶ್ವರ್, ಗೃಹ ಸಚಿವ