ಚಿಂತಾಮಣಿ: ನೀರಿನ ಸಂಪ್ ಇರುವ ಶೆಡ್‌ನ ಬೀಗ ತೆಗೆಯುವ ವಿಚಾರಕ್ಕೆ ಆರಂಭವಾದ ಗಲಾಟೆ, ಮನೆ ಮಾಲಿಕನ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದಲ್ಲಿ ನಡೆದಿದೆ. ನಿವೃತ್ತ ಎಂಜನಿಯರ್ ಶಂಕರಾಚಾರಿ ಮೃತರು.
ನಾರಾಯಣಸ್ವಾಮಿ, ಅರುಣ ಆರೋಪಿಗಳು. ನಗರದ ಎನ್.ಆರ್. ಬಡಾವಣೆಯಲ್ಲಿ, ಸ್ವಂತ ಮನೆ ಕಟ್ಟಿಕೊಂಡು ನಿವೃತ್ತ ಸರ್ಕಾರಿ ಎಂಜಿನಿಯರ್ ಶಂಕರಾಚಾರಿ, ಕುಟುಂಬ ಸಮೇತರಾಗಿ ವಾಸವಾಗಿದ್ದರು. ತನ್ನದೇ ಮನೆಯ ಕೆಳ ಅಂತಸ್ತಿನಲ್ಲಿದ್ದ ಮನೆಯನ್ನು ನಾರಾಯಣಸ್ವಾಮಿ ಹಾಗೂ ಅರುಣಾ ದಂಪತಿಗೆ ಮೂರು ವರ್ಷಕ್ಕೆ ಮೂರು ಲಕ್ಷ ರೂ. ಹಣ ಪಡೆದು ಲೀಸ್‌ಗೆ ನೀಡಿದ್ದ ಎನ್ನಲಾಗಿದೆ.
ಇದನ್ನೂ ಓದಿ:- ಹಿರಿಯರ ಆಶ್ರಯದಲ್ಲಿ ನೆಮ್ಮದಿ ಜೀವನ ಕಾಣಿರಿ
ಪ್ರತಿದಿನ ಬೆಳಗ್ಗೆ ಮನೆ ಪಕ್ಕದ ಶೆಡ್‌ನಲ್ಲಿದ್ದ ನೀರಿನ ಸಂಪ್‌ನಲ್ಲಿ ಬಾಡಿಗೆ ಇದ್ದ ಅರಣಾ ಬಿಂದಿಗೆಯಲ್ಲಿ ನೀರು ತುಂಬಿಕೊಳ್ಳುತ್ತಿದ್ದರು. ಮನೆ ಮಾಲಿಕ ಶಂಕರಾಚಾರಿ ರಾತ್ರಿ ವೇಳೆ ಶೆಡ್‌ಗೆ ಬೀಗ ಹಾಕುತ್ತಿದ್ದರು. ಎರಡು ದಿನಗಳ ಹಿಂದೆ ಶೆಡ್ ಬೀಗ ತೆಗೆಯಲು ತಡವಾಗಿದ್ದರಿಂದ ಕೋಪಿತಗೊಂಡ ಅರುಣಾ ಬೀದಿಯಲ್ಲಿ ನಿಂತು ಮನೆ ಮಾಲಿಕನನ್ನು ಬೈಯ್ದುಕೊಂಡಿ ದ್ದಾರೆ.
ಇದನ್ನು ಕೇಳಿಸಿಕೊಂಡ ಮಾಲಿಕ ಶಂಕರಾಚಾರಿ ಅರುಣಾ ಅವರನ್ನು ಪ್ರಶ್ನಿಸಿದ್ದಾರೆ. ಆಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಪರಸ್ಪರ ತಳ್ಳಾಡಿಕೊಂಡಿದ್ದಾರೆ. ಈ ವೇಳೆ ಶಂಕರಾಚಾರಿ ಕೆಳಗೆ ಬಿದಿದ್ದಾರೆ. ಬಿದ್ದರಭಸಕ್ಕೆ ತಲೆಗೆ ಪೆಟ್ಟಾಗಿ ಆಸ್ಪತ್ರೆ ಸೇರಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಇನ್ನು ತಾಯಿ ಮಾತನಾಡಿ, ಶಂಕರಾಚಾರಿ ಕಂಠಪೂರ್ತಿ ಕುಡಿದಿದ್ದ, ಬೀಗ ಕೊಟ್ಟು, ನಂತರ ಮೇಲೆ ಹೋದ ಮೇಲೆ ಬಿದ್ದಿದ್ದಾರೆ. ಅವರ ಸಾವಿಗೂ ನಮ್ಮ ಮಗಳಿಗೂ ಸಂಬಂಧವೇ ಇಲ್ಲ ಎನ್ನುತ್ತಿರುವುದು ಪ್ರಕರಣಕ್ಕೆ ತಿರುವು ಪಡೆಯುವಂತಾಗಿದೆ.
ತಲೆಗೆ ಗಂಭೀರ ಗಾಯವಾಗಿದ್ದ ನಿವೃತ್ತ ಎಂಜಿನಿಯರ್ ಶಂಕರಾಚಾರಿ, ಆಸ್ಪತ್ರೆಯಲ್ಲಿ ಮೃತಪಡುತ್ತಿದ್ದಂತೆ, ಎಚ್ಚೆತ್ತ ಚಿಂತಾಮಣಿ ನಗರ ಠಾಣೆ ಪೊಲೀಸರು, ಆರೋಪಿ ಅರುಣಾ ಹಾಗೂ ಆಕೆಯ ಪತಿ ನಾರಾಯಣಸ್ವಾಮಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.