Advertisement

 ಅಸಲ್ಫಾ ಕನ್ನಡ ವಿದ್ಯಾ ಭವನದ ನವೀಕೃತ ಶಾಲಾ ಕೊಠಡಿ ಉದ್ಘಾಟನೆ

05:14 PM Dec 12, 2018 | |

ಮುಂಬಯಿ: ನಾವು ಹುಟ್ಟಿ ಬೆಳೆದು ಸಾಧಕರಾಗಿ ಮೆರೆಯಲು ಪ್ರೇರಣಾಶಕ್ತಿಯಾದ ಕನ್ನಡ ಭಾಷೆಯ ಉಳಿವು ನಮ್ಮ ಪರ ಕರ್ತವ್ಯವಾಗಿದೆ. ಇದು ನಮ್ಮರಾಜ್ಯ ಭಾಷೆಯಾಗಿದ್ದು, ಎಂಟನೇ ಪರಿಚ್ಛೇದದಲ್ಲಿ ಮೇರು ಭಾಷೆಯಾಗಿ ವಿಶ್ವಾದ್ಯಂತ ಪಸರಿಸಿ ಕಂಗೊಳಿಸುತ್ತಿದೆ. ಹೊರನಾಡಿನಲ್ಲಿ ಇಂತಹ ಕನ್ನಡದ ಭಾಷೆ ಬಗ್ಗೆ ಕೀಳರಿಮೆ ಸಲ್ಲದು. ಒಳನಾಡ ಕರ್ನಾಟಕ ಬಿಟ್ಟರೆ, ಹೊರನಾಡ ಮಹಾರಾಷ್ಟ್ರದಾದ್ಯಂತ ಲಕ್ಷಾಂತರ ಕನ್ನಡಿಗರಿದ್ದು ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕರ್ನಾಟಕ ಸಂಘ ಅಸಲ್ಪಾ ಇಂತಹ ಸಂಸ್ಥೆಗಳ ಕೊಡುಗೆಯೂ ಅನುಪಮವಾಗಿದೆ. ಆದ್ದರಿಂದ ವ್ಯವ ಹಾರಿಕವಾಗಿ ಅಲ್ಲದಿದ್ದರೂ ಬದುಕಿನ ಭಾಗವಾಗಿ ಮಕ್ಕಳಲ್ಲಿ ಕನ್ನಡವನ್ನು ಬೆಳೆಸುವಲ್ಲಿ ಪಾಲಕರು, ಶಿಕ್ಷಕರು ಪ್ರಯತ್ನಿಸಬೇಕು ಎಂದು ನಾಡಿನ ಕನ್ನಡಾಭಿಮಾನಿ, ಕರ್ನಾಟಕ ಸಂಘ ಅಸಲ್ಪಾ ಇದರ ಅಧ್ಯಕ್ಷ ಕಡಂದಲೆ ಸುರೇಶ್‌ ಎಸ್‌. ಭಂಡಾರಿ ಕರೆ ನೀಡಿದರು.

Advertisement

ಘಾಟ್ಕೊàಪರ್‌ ಪಶ್ಚಿಮದ ಅಸ ಲ್ಪಾದ ಎನ್‌ಎಸ್‌ಎಸ್‌ ರಸ್ತೆಯ ಕನ್ನಡ ವಿದ್ಯಾ ಭವನದ ನವೀಕೃತ ಶಾಲಾ ಕೊಠಡಿಯನ್ನು  ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಸಂಘಸಂಸ್ಥೆ,  ಶಾಲೆಗಳನ್ನು ಆರಂಭಿಸುವುದು ಅತೀ ಸುಲಭ. ಆದರೆ ಸಮಯಕ್ಕನುಸಾರವಾಗಿ ಪರಿವರ್ತಿಸುತ್ತಾ ಮುನ್ನಡೆಸುವುದು ಬಹಳ ಕಷ್ಟ. ಅಸಲ್ಪಾ  ಕ್ಷೇತ್ರದಲ್ಲಿ 1965 ರಲ್ಲಿ ಆರಂಭವಾದ ಕನ್ನಡ ಶಾಲೆಯಲ್ಲಿ  ಸುಮಾರು 800 ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು.  ಶಾಲೆಯಲ್ಲಿ ಇಂದು ಕೇವಲ 75 ವಿದ್ಯಾರ್ಥಿಗಳು ಅಭ್ಯಾಸ ನಿರತರಾಗಿದ್ದಾರೆ. ಕಟ್ಟಡದಲ್ಲಿ ನಾಲ್ಕು ತರಗತಿಗಳು ಸುಮಾರು 2000 ಚದರಡಿಯ ಶಾಲಾ ಕಟ್ಟಡವನ್ನು ವಿದ್ಯಾ ಕೇಂದ್ರವನ್ನಾಗಿಸಿಯೇ ಉಳಿಸಿಕೊಳ್ಳಬೇಕಾದರೆ  ಕನ್ನಡ ಮಾಧ್ಯಮ ದೊಂದಿಗೆ ಇಂಗ್ಲೀಷ್‌ ಮಾಧ್ಯಮ ಶಾಲೆ ಆರಂಭಿಸಿದರೆ ಕಟ್ಟಡವು ತುಳು ಕನ್ನಡಿಗರ ಅಧೀನ ದಲ್ಲಿಯೇ ಇರಲು ಸಾಧ್ಯವಿದೆ ಎಂದರು.

ಕ್ಷೇತ್ರದ ನಗರ ಸೇವಕ ಕಿರಣ್‌ ಲಾಂಡೆY ಅವರು ಅತಿಥಿಯಾಗಿ  ಮಾತನಾಡಿ,  ತಾನು ಬಾಲ್ಯದಲ್ಲಿ ತುಂಟಾಟ ಮಾಡುತ್ತಾ ಬೆಳೆದ ಈ ವಠಾರದ ಅಭಿವೃದ್ಧಿಗಾಗಿ ಸಹಕಾರ ನೀಡುವೆ ಎಂದು  ಭರವಸೆ ನೀಡಿದರು. ನಿಧಿ ಸಂಗ್ರಹಕ್ಕಾಗಿ ಬಿಡುಗಡೆ ಮಾಡಲಾದ ಲಕ್ಕೀಡಿಪ್‌ ಉದ್ದೇಶವನ್ನು ವಿವರಿಸಿ ಇನ್ನೂ ಮೂರು ವರ್ಗಗಳ ಸುಶೋಭಿಕರಣದ ಕಾರ್ಯವನ್ನು ಶೀಘ್ರದಲ್ಲಿ ಮಾಡಲು ಸಹಕರಿಸ ಬೇಕು. ಸಂಘದ ಕನ್ನಡ ಶಾಲೆಯ ಕಟ್ಟಡದಲ್ಲಿ ಇಂಗ್ಲೀಷ್‌ ಮಾಧ್ಯಮ ಶಾಲೆಯನ್ನು ಆರಂಭಿಸುವರೇ ಮುಂಬುನ ಆಸಕ್ತ ಮತ್ತು ನುರಿತ  ವಿದ್ಯಾಭಿಮಾನಿ ಆಡಳಿತಗಾರರು ಸಂಘದ ಪದಾಧಿಕಾರಿಗಳನ್ನು ಭೇಟಿಯಾಗಬಹುದು ಎಂದು ಕಾರ್ಯದರ್ಶಿ ಎಂ. ಪದ್ಮನಾಭ ಸಫಲಿಗ ವಿನಂತಿಸಿದರು.

ಕನ್ನಡ ಶಾಲೆಯ ನಿವೃತ್ತ ಪ್ರಾಧ್ಯಾಪಕಿ ಹಾಗೂ ಸಂಘದ ಉಪಾಧ್ಯಕ್ಷೆ ಯಶೋಧಾ ಬಟ್ಟಪಾಡಿ ಕಾರ್ಯ ಕರ್ತರ ಪರಿಶ್ರಮವನ್ನು ಶ್ಲಾಘಿಸಿದರು. ಅಧ್ಯಕ್ಷ ಸುರೇಶ್‌ ಭಂಡಾರಿ ಅವರ ನೇತೃತ್ವದಲ್ಲಿ ಈ ವಿದ್ಯಾಭವನದಲ್ಲಿ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸುವ ಪ್ರಕ್ರಿಯೆ ಶೀಘ್ರಗತಿಯಲ್ಲಿ ಆಗಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

ಸರಸ್ವತಿ ಮಾತೆಗೆ ಪೂಜೆ ನೆರವೇರಿಸಿ ದೀಪ ಪ್ರಜ್ವಲಿಸಿ  ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪುಟ್ಟ ಮಕ್ಕಳ ಹಸ್ತದಿಂದ ಅಧ್ಯಕ್ಷರು ಲಕ್ಕಿ ಕೂಪನ್‌ ಡ್ರಾಗೊಳಿಸಿ ವಿಜೇತರ ಹೆಸರುಗಳನ್ನು ಪ್ರಕಟಿಸಿ ಶುಭ ಹಾರೈಸಿದರು. ಹಾಗೂ ಧನ ಸಂಗ್ರಹದ ಕಾರ್ಯದಲ್ಲಿ  ಶ್ರಮಿಸಿದ ಕಾರ್ಯಕರ್ತರು, ನವೀ ಕರಣ ಕಾರ್ಯದಲ್ಲಿ ಸಹಕರಿಸಿದ  ಸುಧಾಕರ್‌ ಶೆಟ್ಟಿ, ಸತೀಶ್‌ ಶೆಟ್ಟಿ, ವಿಶ್ವನಾಥ ದೊಡ್ಮನೆ, ರಾಜವರ್ಮ ಜೈನ್‌, ಶ್ರೀಕಾಂತ್‌ ಸಫಲಿಗ ಅವರನ್ನು  ಪುಷ್ಪಗುಚ್ಚವನ್ನಿತ್ತು ಸಮ್ಮಾನಿಸಿದರು. ಪದ್ಮನಾಭ ಸಫಲಿಗ ಕಾರ್ಯ ಚಟುವಟಿಕೆಗಳನ್ನು ಸ್ಥೂಲವಾಗಿ ತಿಳಿಸಿ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ   ಜಯರಾಂ ಜಿ. ರೈ   ಸ್ವಾಗತಿಸಿ ವಂದಿಸಿದರು. 

Advertisement

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next