Advertisement

ನೀಲಿಜಿನ್‌ ರಸ್ತೆಗೆ ಮರು ನಾಮಕರಣ!

09:47 AM Oct 15, 2019 | Team Udayavani |

ಹುಬ್ಬಳ್ಳಿ: ಹಾಳಾದ ರಸ್ತೆಗೆ “ಅನಾಥ ರಸ್ತೆ’ ಎಂದು ನಾಮಕರಣ ಮಾಡುವ ಮೂಲಕ ಹುಬ್ಬಳ್ಳಿ ಆಟೋ ರಿಕ್ಷಾ ಚಾಲಕರು ಹಾಗೂ ಮಾಲೀಕರ ಸಂಘದಿಂದ ಸೋಮವಾರ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

Advertisement

ಮಹಾನಗರದ ಪ್ರಮುಖ ರಸ್ತೆಗಳು, ಪ್ರಮುಖ ವೃತ್ತಗಳು ಸಂಪೂರ್ಣವಾಗಿ ಹಾಳಾಗಿದ್ದು, ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವ ಮೂಲಕ ವಾಹನ ಸವಾರರನ್ನು ರಕ್ಷಿಸಬೇಕು ಎಂದು ನೀಲಿಜಿನ್‌ ರಸ್ತೆಗೆ “ಅನಾಥ ರಸ್ತೆ’ ಎಂದು ನಾಮಕರಣ ಮಾಡಿ ಕರ್ಪೂರ ಬೆಳಗಿ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ನಡೆಸಿದಾಗೊಮ್ಮೆ ಪಾಲಿಕೆಯಿಂದ ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಕೆಲವೇ ದಿನಗಳಲ್ಲಿ ರಸ್ತೆ ಮತ್ತೆ ಗುಂಡಿಮಯವಾಗುತ್ತದೆ. ಹಲವು ಬಾರಿ ಪ್ರತಿಭಟನೆ ಮಾಡಿದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ಆದ್ದರಿಂದ ರಸ್ತೆಗೆ ಅನಾಥ ರಸ್ತೆ ಎಂದು ನಾಮಕರಣ ಮಾಡಿ ಪ್ರತಿಭಟಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಆಕ್ರೋಶ ವ್ಯಕ್ತಪಡಿಸಿದರು.

ಪುಂಡಲೀಕ ಬಡಿಗೇರ, ಚಿದಾನಂದ ಸವದತ್ತಿ, ಮುಸ್ತಾಕ ಕರ್ಜಗಿ, ಬಸವರಾಜ ಉಣಕಲ್ಲ, ಜಾರ್ಪಸಾಬ್‌ ಕೇರೂರ, ಮಹಾವೀರ ಬಿಲಾನಾ, ಗುರು ಬೆಟಗೇರಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next