ಬಸವನಬಾಗೇವಾಡಿ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಜಿ+1 ಆಸರೆ ಯೋಜನೆಯ ಮನೆಗಳ ವಂತಿಕೆ ಹಣ ಕಟ್ಟದಿದ್ದರೆ ಅಂಥವರ ಹೆಸರನ್ನು ಕೈ ಬಿಡಲಾಗುತ್ತದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಸಾಮಾಜಿಕ ಅಭಿವೃದ್ಧಿ ಅ ಧಿಕಾರಿ ಬಸವರಾಜ ಗೋಲಾಯಿ ಹೇಳಿದರು.
ಪುರಸಭೆಗೆ ಭೇಟಿ ನೀಡಿ ಮುಖ್ಯಾಧಿ ಕಾರಿಗಳೊಂದಿಗೆ ಜಿ+1 ಆಸರೆ ಯೋಜನೆಯ ಮನೆಗಳ ವಂತಿಕೆ ಹಣ ಕಟ್ಟುವ ಬಗ್ಗೆ ಚರ್ಚಿಸಿ ನಂತರ ಮಾತನಾಡಿದ ಅವರು, ರಾಜ್ಯ ಸರಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವುದರಿಂದ ಫಲಾನುಭವಿಗಳು ಸರಕಾರದ ಆದೇಶದ ಪ್ರಕಾರ ಫಲಾನುಭವಿಗಳು ತಮ್ಮ ಮನೆಯ ವಂತಿಕೆ ಹಣ ಕಡ್ಡಾಯವಾಗಿ ತುಂಬಬೇಕು. ಒಂದು ವೇಳೆ ತುಂಬದೆ ಹೊದಲ್ಲಿ ಹಂತ ಫಲಾನುಬಾವಿಗಳ ಹೆಸರನ್ನು ಕೈ ಬಿಡಲಾಗುತ್ತದೆ ಎಂದು ಹೇಳಿದರು.
ಫಲಾನುಬಾವಿಗಳು ಆರ್ಥಿಕ ಸದೃಢವಾಗಿ ಇರದೇ ಇದ್ದಲ್ಲಿ ಅಂಥ ಫಲಾನುಭವಿಗಳು ಪುರಸಭೆಗೆ ಭೇಟಿ ನೀಡಿ ಮುಖ್ಯಾ ಧಿಕಾರಿಗಳೊಂದಿಗೆ ಚರ್ಚಿಸಿದಲ್ಲಿ ಅಂತಹ ಫಲಾನುಭವಿಗಳಿಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಒದಗಿಸಿಕೊಡಲಾಗುವುದು ಎಂದು ಹೇಳಿದರು. ಹೌಸಿಂಗ್ ಬೋರ್ಡ್ ಇಂಜನಿಯರ್ ಅಮರನಾಥ ಪುಠಾಣೆ ಮಾತನಾಡಿ, ರಾಜ್ಯ ಸರಕಾರದ ಜಿ+ 1 ಆಸರೆ ಮನೆಗಳ ಯೋಜನೆಯ ಲಾಭವನ್ನು ಫಲಾನುಬಾವಿಗಳು ಪಡೆದುಕೊಳ್ಳಬೇಕು.
ಒಂದು ವೇಳೆ ಈ ಯೋಜನೆ ಲಾಭ ಪಡೆಯದೆ ಹೋದಲ್ಲಿ ಇಂತಹ ಯೋಜನೆಗಳು ಮರಳಿ ನಿಮ್ಮ ಪಟ್ಟಣಕ್ಕೆ ಬರುವುದಿಲ್ಲ. ಸರಕಾರದ ಸೌಲಭ್ಯದಿಂದ ಬಡವರು ವಂಚಿವಾಗುವುದು ನಿಶ್ಚಿತ ಎಂದು ಹೇಳಿದರು. ಪುರಸಭೆ ಮುಖ್ಯಾ ಧಿಕಾರಿ ಬಿ.ಎ. ಸೌದಾಗಾರ ಮಾತನಾಡಿ, ಈಗಾಗಲೇ ಫಲಾನುಭವಿಗಳಿಗೆ ವಂತಿಕೆ ಹಣ ಕಟ್ಟುವಂತೆ ತಿಳಿಸಲಾಗಿದೆ. ಹಲವಾರು ಬಾರಿ ನೋಟಿಸ್ ನೀಡಿದ್ದೇವೆ. ಆದರೆ ಕೆಲವರು ಮಾತ್ರ ಪುರಸಭೆಗೆ ಬಂದು ಭೇಟಿ ನೀಡಿದ್ದು, ಕೆಲವರು ಬ್ಯಾಂಕ್ ಸಹಕಾರ ಪಡೆಯಲು ಮುಂದೆ ಬಂದಿದ್ದಾರೆ. ಅಂತಹವರನ್ನು ಹೊರತುಪಡಿಸಿ ಉಳಿದವರು ಒಂದು ವಾರದೊಳಗೆ ಪುರಸಭೆಗೆ ಬಂದು ಭೇಟಿ ನೀಡದಿದ್ದರೆ ಸರಕಾರದ ನಿಯಮಾನುಸಾರ ಫಲಾನುಭವಿಗಳ ಪಟ್ಟಿಯಿಂದ ತೆಗೆದು ಹಾಕಲಾಗುವುದು ಎಂದು ಹೇಳಿದರು. ಶಿವಾನಂದ ಹಂಚಲಿ ಉಪಸ್ಥಿತರಿದ್ದರು.