Advertisement

ಪರಾಕ್ರಮ, ಚಾಣಾಕ್ಷ ನಡೆಯನ್ನು ಕಲಿಸುವ ಬೇಟೆಯ ನೆನಪು

11:10 PM May 28, 2019 | mahesh |

‘ಬೇಟೆಯ ನೆನಪುಗಳು’ ಇದು ದಕ್ಷಿಣ ಕನ್ನಡದ ಪುತ್ತೂರಿನವರಾದ ಕೆದಂಬಾಡಿ ಜತ್ತಪ್ಪ ರೈ ಅವರ ಕ‌ೃತಿ. ಹಲವು ಕುತೂಹಲಕಾರಿ ಅಂಶಗಳನ್ನು ಹೊಂದಿರುವ ಈ ಕೃತಿ ಓದುಗರ ಮನಸೂರೆಗೊಳ್ಳುವಂತೆ ಮಾಡುವುದರಲ್ಲಿ ಸಂದೇಹವಿಲ್ಲ.

Advertisement

••ಘಟನೆ: 1
ಕೆದಂಬಾಡಿ ಜತ್ತಪ್ಪ ರೈ 15ನೇ ವಯಸ್ಸಿನಲ್ಲಿ ತಮ್ಮ ಅಜ್ಜನೊಂದಿಗೆ ಬೇಟೆಗೆ ಹೋಗುವ ಪ್ರತಿ ಹೆಜ್ಜೆ ಹೆಜ್ಜೆಯ ವಿವರಗಳನ್ನು ಬಿಚ್ಚಿಟ್ಟಿದ್ದಾರೆ. ಆ ಕಾಲದಲ್ಲಿನ ಕಾರ್ಯ ಚಟುವಟಿಕೆಗಳು, ಅವರ ಪರಾಕ್ರಮ, ಆಹಾರ ಶೈಲಿ, ಜಾತಿ ಪದ್ಧತಿ, ಉಪಚರಿಸುತ್ತಿದ್ದ ರೀತಿ ಇವೆಲ್ಲವೂ ಕಣ್ಣಿಗೆ ಕಟ್ಟುವಂತೆ ಸರಳ ಸಾಹಿತ್ಯದಿಂದ ಕೂಡಿದೆ.

••ಘಟನೆ: 2
ಜತ್ತಪ್ಪ ರೈಗಳು ತಮ್ಮ ಶಾಲಾ ಅವಧಿಯಲ್ಲಿ ಅವರ ಮುಂದಾಳತ್ವದಲ್ಲಿ ಸಹಪಾಠಿಗಳನ್ನು ಸೇರಿಸಿ ಬೇಟೆಗೆ ಹೋದ ಪ್ರಸಂಗ ಮತ್ತು ಅವರ ಮೊದಲ ಹುಲಿ ಬೇಟೆಯೆಂದಾಗ, ಶಾಲಾ ದಿನಗಳಲ್ಲೇ ಅವರಿಗಿರುವ ಧೈರ್ಯ ಸಾಹಸಗಳನ್ನು ಓದಿ ಎಂತಹ ಸಾಹಸಿ ವ್ಯಕ್ತಿ ಎಂದು ಅರಿವಾಗತೊಡಗುತ್ತದೆ. ತನ್ನ ಗೆಳೆಯರಿಗೆ ‘ನಾನು ಗುತ್ತಿನವ ನನ್ನ ಮಾತನ್ನು ನೀವು ಧಿಕ್ಕರಿಸಬಾರದು’ ಎಂದು ಹೇಳುವ ಮೂಲಕ ಅವರನ್ನೂ ಉಪಾಯವಾಗಿ ಹುಲಿ ಬೇಟೆಗೆ ಕೊಂಡೊಯ್ಯುವ ಚಾಣಾಕ್ಷ್ಯತನ ಮತ್ತು ಅವರಿಗೆ ಬೇಟೆಯಲ್ಲಿನ ಉತ್ಸಾಹವನ್ನು ತೋರಿಸುತ್ತದೆ.

••ಘಟನೆ: 3
‘ಕತ್ತಲಲ್ಲಿ ವಿಪತ್ತು’ ಬೇಟೆಯ ಭಯಾನಕತೆಯನ್ನು ತೋರಿಸುತ್ತದೆ. ಜತ್ತಪ್ಪ ರೈ ಅವರ ತಂದೆ ಪೇಟೆಗೆ ಹೋಗಲು ಹೇಳಿದಾಗ ಅವರು ಕೊಡುವ ಹಣ ಸಾಲದ್ದಕ್ಕೆ ಪೇಟೆಗೆ ಹೋಗಲು ಇನ್ನೂ ಹೆಚ್ಚಿನ ಖರ್ಚಿಗಾಗಿ ಹಿಂದಿನ ರಾತ್ರಿ ಮನೆಯವರ ಕಣ್ತಪ್ಪಿಸಿ ಮಳೆಗಾಲದ ಸಂದರ್ಭದಲ್ಲಿ ಬೇಟೆಗೆ ಹೋಗುತ್ತಾರೆ. ಆ ವೇಳೆ ಅವರಿಗೆ ಎದುರಾಗುವ ಸನ್ನಿವೇಶ ಯಾವುದೋ ಪ್ರಾಣಿಯೆಂದು ಊಹಿಸಿ ತುಂಬಾ ದೈತ್ಯ ಗಾತ್ರದ ಸರ್ಪವನ್ನು ತಮ್ಮ ಕೋವಿಯಿಂದ ಹೊಡೆದುರುಳಿಸಿದಾಗ ಅದು ಸರ್ಪ ಎಂದು ಗೊತ್ತಾದಾಗ ಯಾವ ಬೇಟೆಗೂ ಹೆದರದ ಜತ್ತಪ್ಪ ರೈಗಳು ಮತ್ತು ಅವರೊಂದಿಗೆ ಬಂದಿದ್ದ ಮತ್ತೂಬ್ಬ ಗೆಳೆಯರು ಓಡಿ ಹೋಗುವ ಭಯಾನಕ ಸನ್ನಿವೇಶ ಅದ್ಭುತ ಸಿನೆಮಾ ನೋಡಿದಂತಹ ಅನುಭವವನ್ನು ಕಟ್ಟಿಕೊಡುತ್ತದೆ.

•ವಿಶ್ವಾಸ್‌ ಅಡ್ಯಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next