Advertisement
ಉಜಿರೆಯ ಕೆ. ಮೋಹನ್ ಕುಮಾರ್, ರಾಜೇಶ್ ಪೈ ಸಹಿತ 40ಕ್ಕೂ ಹೆಚ್ಚು ಉದ್ಯಮಿಗಳ ತಂಡ ಕೊಳಂಬೆಯ ಪುನರ್‌ನಿರ್ಮಾಣಕ್ಕೆ ಆ. 15ರಂದು ಚಾಲನೆ ನೀಡುವ ಕುರಿತು “ಉದಯವಾಣಿ’ ವರದಿ ಪ್ರಕಟಿಸಿತ್ತು.
Related Articles
Advertisement
ಉದ್ಯಮಿ ರಾಜೇಶ್ ಪೈ ಮಾತನಾಡಿ, ಪತ್ರಿಕೆಯ ವರದಿ ಆಧರಿಸಿ ಉಜಿರೆ ಆಸುಪಾಸಿನ ಸಂಘ ಸಂಸ್ಥೆಗಳು ನಮ್ಮ ಕೈಹಿಡಿದಿವೆ. ಸಂತ್ರಸ್ತರ ಮನೆ ಸ್ವತ್ಛ, ಕೃಷಿ ಪ್ರದೇಶ ಪುನಃರೂಪಿಸುವ ಕೆಲಸಕ್ಕೆ ಶಾಸಕರು ಚಾಲನೆ ನೀಡಿದರು.ಹಂತ ಹಂತವಾಗಿ ಊರು ಅಭಿವೃದ್ಧಿ ಕಾಣುತ್ತಿದೆ. 2020ರ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಮಾದರಿ ಪರಿಸರ ನಿರ್ಮಿಸುವ ಗುರಿ ನಮ್ಮದು ಎಂದರು.
ಬದಲಾಗುತ್ತಿದೆ ಕೊಳಂಬೆ ಚಿತ್ರಣಉದ್ಯಮಿಗಳ ಕೈಹಿಡಿದ ಸಂಘ-ಸಂಸ್ಥೆಗಳಿಂದಾಗಿ ಪ್ರತಿ ದಿನ ಶ್ರಮದಾನ ಸಾಗುತ್ತಿದೆ. ಕೊಳಂಬೆಯಲ್ಲಿ ಹಾನಿ ಗೀಡಾದ 22 ಮನೆಗಳ ಪೈಕಿ 4 ಸಂಪೂರ್ಣ ಕುಸಿದಿವೆ. ಉಳಿದ 18 ಮನೆಗಳ ಕೆಸರು, ಮಣ್ಣು ಸ್ವತ್ಛಗೊಳಿಸಲಾಗಿದೆ. ಬಾವಿಯಿಂದ ಕೆಸರು ತೆಗೆದು ನೀರನ್ನು ಕುಡಿಯಲು ಯೋಗ್ಯವಾಗಿಸಲಾಗಿದೆ. ಪ್ರವಾಹದ ಆಘಾತಕ್ಕೆ ಒಳಗಾದವರಿಗೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಪಶುಗಳಿಗೆ ಮೇವು ವಿತರಣೆ, ಅಡಿಕೆ ತೋಟದ ಮರಳು ತೆರವುಗೊಳಿಸಲಾಗುತ್ತಿದೆ. ಸಂಘ ಸಂಸ್ಥೆ, ಶಾಲೆಗಳು ಪ್ರತಿದಿನ ಶ್ರಮದಾನಿಗಳಿಗೆ ಊಟ, ತಿಂಡಿ ವ್ಯವಸ್ಥೆ ಕಲ್ಪಿಸಿವೆ. “ಬನ್ನಿ ಬದುಕು ಕಟ್ಟೋಣ’ ಮಾಹಿತಿ ಕಚೇರಿಯನ್ನೂ ತೆರೆಯಲಾಗಿದೆ.