Advertisement

ಪ್ರಾಣ ತ್ಯಾಗ ಮಾಡಿದ ಯೋಧರನ್ನು ಸ್ಮರಿಸಿ

11:58 AM Jul 27, 2019 | Suhan S |

ರಾಮನಗರ: ದೇಶಕ್ಕಾಗಿ, ದೇಶದ ಜನರ ರಕ್ಷಣೆಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಯೋಧರನ್ನು ಸ್ಮರಿಸಿಸುವುದರ ಮೂಲಕ ಅವರಿಗೆ ಕೃತಜ್ಞತೆ ಅರ್ಪಿಸುವುದು ದೇಶವಾಸಿಗಳ ಕರ್ತವ್ಯ ಎಂದು ಪಟೇಲ್ ಆಂಗ್ಲ ಶಾಲೆಯ ಕಾರ್ಯದರ್ಶಿ ಪಟೇಲ್ ಸಿ ರಾಜು ಅಭಿಪ್ರಾಯಪಟ್ಟರು.

Advertisement

ನಗರದ ಪಟೇಲ್ ಆಂಗ್ಲ ಶಾಲೆಯ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, 20 ವರ್ಷಗಳ ಹಿಂದೆ ನೆರೆ ರಾಷ್ಟ್ರ ಪಾಕಿಸ್ತಾನ ವಶಪಡಿಸಿಕೊಂಡಿದ್ದ ಭಾರತದ ಕಾರ್ಗಿಲ್ ಪ್ರದೇಶವನ್ನು ಭಾರತದ ಸುಮಾರು 500ಕ್ಕೂ ಹೆಚ್ಚು ಯೋಧರು ಪ್ರಾಣ ತೆತ್ತು ವಶಕ್ಕೆ ಪಡೆದುಕೊಂಡರು. ಕಡಿದಾದ ಕಾರ್ಗಿಲ್ ಬೆಟ್ಟವನ್ನು ಹತ್ತಿ ಪಾಕಿಸ್ತಾನದ ಆಕ್ರಮಣಕಾರರನ್ನು ಸದೆಬಡಿದು ದೇಶದ ಗಡಿಯನ್ನು ರಕ್ಷಿಸಿದ್ದಾರೆ. ಈ ಯುದ್ಧದಲ್ಲಿ ಮೇಜರ್‌ ಮನೋಜ್‌ ಕುಮಾರ್‌ ಪಾಂಡೆ, ಕ್ಯಾಪ್ಟನ್‌ ವಿಕ್ರಮ್‌ ಮುಂತಾದ ಯೋಧರ ಶ್ರಮ ಸಾರ್ಥಕವಾಗಿದೆ ಎಂದು ಸ್ಮರಿಸಿದರು.

ಆರೋಗ್ಯ ಭಾರತಿ ಸಂಘಟನೆಯ ನಗರ ಸಂಘಟನಾ ಕಾರ್ಯದರ್ಶಿ ಸತೀಶ್‌ ಕಾರ್ಗಿಲ್ ಯುದ್ಧ, ಭಾರತದ ನಿಲುವು, ಭಾರತೀಯ ಸೇನೆಯ ಹೋರಾಟ ಮುಂತಾದ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳ ಗಮನ ಸೆಳೆದರು.

ಪರಿಸರ ಮಾಲಿನ್ಯದಿಂದ ರಕ್ಷಣೆ ಅನಿವಾರ್ಯ: ಆರೋಗ್ಯ ಭಾರತಿ ತುಮಕೂರು ವಿಭಾಗದ ಪ್ರಮುಖರಾದ ಮಂಜುನಾಥ್‌ ಮಾತನಾಡಿ, ಪರಿಸರವನ್ನು ಉಳಿಸಿಕೊಳ್ಳವ ಮೂಲಕವೂ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಕೃತಜ್ಞತೆ ಸಲ್ಲಿಸಬಹುದು ಎಂದರು.

ಭಯೋತ್ಪಾದಕರಿಂದ ದೇಶ ರಕ್ಷಸಿಕೊಳ್ಳುವ ಜೊತೆಗೆ ಪರಿಸರ ಮಾಲಿನ್ಯದಿಂದ ರಕ್ಷಿಸಿಕೊಳ್ಳುವುದು ಅನಿವಾರ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಗಿಡವನ್ನಾದರು ನೆಟ್ಟು ಪೋಷಿಸಬೇಕು ಎಂದು ಹೇಳಿದರು. ಈ ವೇಳೆ ವಿದ್ಯಾರ್ಥಿಗಳಿಗೆ ಸೀಡ್‌ಬಾಲ್ಗಳನ್ನು ವಿತರಣೆ ಮಾಡಲಾಯಿತು.

Advertisement

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಭಾರತಿಯ ಅಧ್ಯಕ್ಷ ಎಂ.ಡಿ.ಶಿವಕುಮಾರ್‌ ಮತ್ತು ಮುಖ್ಯಶಿಕ್ಷಕರಾದ ವಿನೋದ್‌ ಜಿ.ಆರ್‌. ಮತ್ತು ರತ್ನ, ಸಹ ಶಿಕ್ಷಕಿಯಾದ ನಾಗಲಕ್ಷ್ಮಮ್ಮ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next