Advertisement

ನಿವಾರಣಾ ಕೇಂದ್ರಗಳಾಗಲಿ: ಡಾ|ವೀರೇಂದ್ರ ಹೆಗ್ಗಡೆ

11:14 PM Apr 30, 2022 | Team Udayavani |

ಚಾಮರಾಜನಗರ: ಪುಣ್ಯ ಅಥವಾ ತೀರ್ಥ ಕ್ಷೇತ್ರಗಳು ಸಾಮಾಜಿಕ ದೋಷಗಳನ್ನು ನಿವಾರಣೆ ಮಾಡುವ ಕೇಂದ್ರಗಳಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಆಶಯ ವ್ಯಕ್ತಪಡಿಸಿದರು.

Advertisement

ತಾಲೂಕಿನ ಮಲೆಯೂರು ಸಮೀಪದ ಜೈನ ಕ್ಷೇತ್ರ ಕನಕಗಿರಿಯಲ್ಲಿ ಶನಿವಾರ ಆಯೋಜಿಸಿದ್ದ ಅತಿಶಯ ಮಹೋತ್ಸವ ಸಮಾರಂಭದಲ್ಲಿ ಜೈನೆಂದ್ರ ಸಿದ್ದಾಂತ ಕೋಶ ಗ್ರಂಥವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಜ್ಞಾನ ಎಂಬುದು ಭಾರತದಲ್ಲಿ ಆರಂಭವಾಯಿತು ಎಂದೇ ಹೇಳಬಹುದು. ನಮ್ಮಲ್ಲಿ ವಿಜ್ಞಾನಿಗಳು, ಸಂಶೋಧಕರು, ಖಗೋಳ ಮತ್ತು ಜೋತಿಷ್ಯವಿತ್ತು. ಸಾಧಕರು, ಸಂಶೋಧನೆಯೂ ಇತ್ತು. ಆದರೆ, ಅವುಗಳನ್ನು ಗುರುತಿಸುವ ವೇದಿಕೆಗಳು ಇಲ್ಲದೆ ನಶಿಸಿ ಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಲಲೀತಕೀರ್ತಿ ಭಟ್ಟಾರಕ ಸ್ವಾಮೀಜಿ, ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡುಬಿದರಿಯ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.

ಜೈನ ಸಾಹಿತ್ಯದ ಜೈನೇಂದ್ರ ವ್ಯಾಕರಣ ಕೋಶ, ಜೈನೇಂದ್ರ ಸುದಾಂತ ಕೋಶ ಹಾಗೂ ಜೈನೇಂದ್ರ ಸಿದ್ದಾಂತ ಕೋಶ ಕೃತಿಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಕೃತಿಗಳನ್ನು ರಚಿಸಿದ ಕೌಶಲ್ಯ ಧರಣೇಂದ್ರ ಹಾಗೂ ಸರಸ್ವತಿ ವಿಜಯಕುಮಾರ್‌ ಅವರನ್ನು ಸಮ್ಮಾನಿಸಲಾಯಿತು. ಶ್ರೀ ಕ್ಷೇತ್ರ ಕನಕಗಿರಿಯ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಧರ್ಮಸ್ಥಳದ ರಾಜಶ್ರೀ ವಿರೇಂದ್ರ ಹೆಗ್ಗಡೆ ಅವರನ್ನು ಸರಕಾರದ ವತಿಯಿಂದ ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next