Advertisement
ಅವರು ಬುಧವಾರ ಸಮೀಪದ ಆಸಂಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಿರ್ಮಾಣ ಮಾಡಲಾದ ಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಕಾಳಜಿ ಕೇಂದ್ರದಲ್ಲಿರುವ ಜನರಿಗೆ ಶಾಲೆಯ ಬಿಸಿಯೂಟದ ಅಡುಗೆಯವರು ಊಟ ತಯಾರು ಮಾಡುತ್ತಿದ್ದಾರೆ. ಅದೇ ರೀತಿಯಾಗಿ ಇಲ್ಲಿ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ, ವೈದ್ಯರು, ಪಶು ವೈದ್ಯರು, ವಿದ್ಯುತ್ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಕಾಳಜಿ ಕೇಂದ್ರದಲ್ಲಿರುವ ಜನರಿಗೆ ಯಾವುದೆ ತೊಂದರೆಯಾಗದಂತೆ ಅಧಿಕಾರಿಗಳು ಗಮನ ನೀಡುತ್ತಿದ್ದಾರೆ.
Related Articles
Advertisement
ತೇರದಾಳ ಹಳಿಂಗಳಿ, ಮದನಮಟ್ಟಿ ಅಸ್ಕಿ, ರಬಕವಿ ಮದನಮಟ್ಟಿ ಹಳಿಂಗಳಿ ರಸ್ತೆ, ಕುಲಹಳ್ಳಿ ಹಿಪ್ಪರಗಿ ತೋಟದ, ಕುಲಹಳ್ಳಿ ಗೊಂಬಿಗುಡ್ಡ ಅಸ್ಕಿ ರಸ್ತೆಗಳು ಹಾಗೂ ರಬಕವಿ ಬನಹಟ್ಟಿ ಜಾಕವೆಲ್ಗೆ ಹೋಗುವ ರಸ್ತೆ ಕೂಡಾ ಜಲಾವೃತಗೊಂಡಿವೆ ಎಂದು ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ, ನೋಡಲ್ ಅಧಿಕಾರಿ ಶ್ರೀನಿವಾಸ ಜಾಧವ, ಗ್ರೇಡ್-2 ತಹಶೀಲ್ದಾರ್ ಎಸ್.ಬಿ.ಕಾಂಬಳೆ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪ್ರವೀಣ ಶಿರಬೂರ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.