Advertisement

Belman: ಧಾರ್ಮಿಕ ಸಭೆ, ಸರ್ವ ಕಾರ್ಯಕ್ರಮಗಳ ಉದ್ಘಾಟನೆ, ದಾನಿಗಳಿಗೆ ಸಮ್ಮಾನ

12:55 PM Feb 24, 2024 | Team Udayavani |

ಬೆಳ್ಮಣ್‌: ಮುಂಡ್ಕೂರು ಕಜೆ ಕುಕ್ಕುದಡಿ ಕ್ಷೇತ್ರ ತನ್ನ ಕಾರಣಿಕದ ಮೂಲಕ ಜಗತ್ಪ್ರಸಿದ್ಧವಾಗಿದ್ದು ಮುಂದಿನ ದಿನಗಳಲ್ಲಿ ಇಲ್ಲಿನ ಆಡಳಿತ ಮಂಡಳಿ ಈ ಕ್ಷೇತ್ರವನ್ನು ಪ್ರವಾಸಿ ಕೇಂದ್ರವನ್ನಾಗಿಸು ವಲ್ಲಿ ಪ್ರಯತ್ನಿಸಬೇಕೆಂದು ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುಂಡ್ಕೂರು ಸಾಂತ್ರಾಲಗುತ್ತು ವಾದಿರಾಜ ಶೆಟ್ಟಿ ಹೇಳಿದರು.

Advertisement

ಗುರುವಾರ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯಗೊಂಡು ಫೆ. 26ರಂದು ಬ್ರಹ್ಮಕಲಶೋತ್ಸವ ನಡೆಯಲಿರುವ ಐತಿಹಾಸಿಕ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಸರ್ವ ಕಾರ್ಯಕ್ರಮಗಳ ಉದ್ಘಾಟನೆ, ಧಾರ್ಮಿಕ ಸಭೆ, ದಾನಿಗಳಿಗೆ ಗೌರವಾರ್ಪಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂಬಯಿ ಉದ್ಯಮಿ, ಕ್ಷೇತ್ರದ ಮಹಾದಾನಿ ಏಕನಾಥ ಪ್ರಭು ಹಾಗೂ ಮುಂಬೈ ಹೈಕೋರ್ಟ್‌ನ ಅಡ್ವಕೇಟ್‌ ಅಕ್ಷತಾ ಏಕನಾಥ್‌ ಪ್ರಭು ಉದ್ಘಾಟನೆ ನೆರವೇರಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ಅನಂತಕೃಷ್ಣ ಆಚಾರ್ಯರ ಉಪಸ್ಥಿತಿಯಲ್ಲಿ ವಿದ್ವಾನ್‌ ಪಂಜ ಭಾಸ್ಕರ ಭಟ್‌ ಧಾರ್ಮಿಕ ಉಪನ್ಯಾಸ ನೀಡಿದರು.

ಮಾಜಿ ಶಾಸಕ ಲಾಲಾಜಿ ಆರ್‌ ಮೆಂಡನ್‌ ಕಾರ್ಯಕ್ರಮಕ್ಕೆ ಶುಭಕೋರಿದರು. ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಮಾಜಿ ಆಡಳಿತ ಮೊಕ್ತೇಸರ ಮುಂಡ್ಕೂರು ನಡಿಗುತ್ತು ಜಗದೀಶ್ಚಂದ್ರ ಹೆಗ್ಡೆ, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಮುಲ್ಲಡ್ಕ ಪರಾರಿ, ಮುಂಡ್ಕೂರು ವಿಠೊಬ ದೇವಸ್ಥಾನದ ಆಡಳಿತ ಮೊಕ್ತೇಸರ ವೆಂಕಟೇಶ ಕಾಮತ್‌, ಮಂಗಳೂರಿನ ಲೆಕ್ಕಪರಿಶೋಧಕ ಜಗನ್ನಾಥ ಕಾಮತ್‌, ಬ್ರಹ್ಮ ಕಲಶೋತ್ಸವದ ಮುಂಬಯಿ ಸಮಿತಿಯ ಅಧ್ಯಕ್ಷ ಮುಂಡ್ಕೂರು ಮುಲ್ಲಡ್ಕ ಗುರುಪ್ರಸಾದ್‌ ಸುಧಾಕರ ಶೆಟ್ಟಿ ಹಾಗೂ ಸ್ಥಳೀಯ ಸಮಿತಿಯ ಅಧ್ಯಕ್ಷ ಮುಂಡ್ಕೂರು ನಡಿಗುತ್ತು ವಿನಯ ಕುಮಾರ್‌ ಶೆಟ್ಟಿ, ದೇವಳದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಎಂ.ಜಿ.ಕರ್ಕೇರ, ಅಧ್ಯಕ್ಷ ಕಜೆ ಹೊಸಮನೆ ಸುಂದರ ಸಪಳಿಗ, ಉಪಾಧ್ಯಕ್ಷ ಹೆಗ್ಗಡೆ ಕಜೆ ಚೆನ್ನಪ್ಪ ಸಪಳಿಗ, ಪ್ರಧಾನ ಕಾರ್ಯದರ್ಶಿ ಕಜೆ ಪಡುಬೈಲು ಸುರೇಂದ್ರ ಸಾಲ್ಯಾನ್‌, ಜತೆ ಕಾರ್ಯದರ್ಶಿ ಕಜೆ ಮಂಗಿಲ್‌ಮಾರ್‌ ನಾರಾಯಣ ಸಪಳಿಗ, ಕೋಶಾಧಿಕಾರಿ ಕಜೆ ಆಚೆಮನೆ ಉದಯ ಕುಮಾರ್‌, ಜತೆ ಕೋಶಾಧಿಕಾರಿ ಕಜೆ ಮನೆ ಭುಜಂಗ ಮೂಲ್ಯ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಸಾಯಿನಾಥ ಶೆಟ್ಟಿ, ಸತ್ಯಶಂಕರ ಶೆಟ್ಟಿ, ಕಾರ್ಯದರ್ಶಿ ಶರತ್‌ ಶೆಟ್ಟಿ, ಉಪಾಧ್ಯಕ್ಷರಾದ ಸಂದೀಪ್‌ ಶೆಟ್ಟಿ ಸಚ್ಚರಪರಾರಿ, ಪ್ರಕಾಶ್‌ ಸಪಳಿಗ, ಮುಂಡ್ಕೂರು ಗ್ರಾ.ಪಂ. ಅಧ್ಯಕ್ಷ ದೇವಪ್ಪ ಸಪಳಿಗ, ಶ್ರೀನಿವಾಸ ಕಾಮತ್‌, ಆಡಳಿತ ಸಮಿತಿಯ ಸದಸ್ಯರಾದ ಕಜೆ ಪಡುಬೈಲ್‌ ಜಯ ಸಾಲ್ಯಾನ್‌, ಕಜೆ ಆಚೆಮನೆ ಸಂಜೀವ ಶೇರಿಗಾರ್‌, ಕಜೆ ಹೊಸಮನೆ ಶೇಖರ ಮೆಂಡನ್‌, ಕಜೆ ಮಂಗಿಲ್‌ಮಾರ್‌ ದಯಾನಂದ ಸಪಳಿಗ, ಹೆಗ್ಗಡೆ ಕಜೆ ಸುಜಿತ್‌ ಕುಮಾರ್‌ ಸಪಳಿಗ, ಕಜೆಮನೆ ಸುರೇಶ್‌ ವಾಸು ವಿ.ಮೂಲ್ಯ, ಹೊರೆಕಾಣಿಕೆ ಸಮಿತಿಯ ಲಕ್ಷ್ಮೀನಾರಾಯಣ ಕಿಣಿ, ಪೇರೂರು ಕೃಷ್ಣ ಶೆಟ್ಟಿ, ಚಪ್ಪರ ಸಮಿತಿಯ ಪ್ರಸಾದ್‌ ಸಪಳಿಗ, ವಿದ್ಯುತ್‌ ನಿರ್ವಹಣೆಯ ಭಾಸ್ಕರ ಶೆಟ್ಟಿ, ನೀರು ಸರಬರಾಜು ಸಮಿತಿಯ ಪ್ರಭಾಕರ ಶೆಟ್ಟಿ, ಪಾರ್ಕಿಂಗ್‌ ವ್ಯವಸ್ಥೆಯ ಹೊನ್ನಪ್ಪ, ವೇದಿಕೆಯ ಪ್ರಮೋದ್‌ ಕಜೆ, ಮತ್ತಿತರರಿದ್ದರು.

ಇದೇ ಸಂದರ್ಭ ಮಂಗಿಲ್ಮಾರ್‌ ಹರಿಕಿರಣ್‌ ,ಆಶಾ ಹರಿಕಿರಣ್‌ ರವರ ನಿರ್ಮಾಣದ ಕೆ.ಪಿ. ಮಿಲನ್‌ ಹಾಗೂ ಸುಪ್ರೀತ್‌ ಸಪಳಿಗರವರ ಧ್ವನಿಯ ಮಹಾಮ್ಮಾಯೀ ವರಪ್ರಸಾದ ಭಕ್ತಿಗೀತೆ ಗೊಂಚಿಲ್‌ನ ಬಿಡುಗಡೆ ನಡೆಯಿತು.

Advertisement

ಕ್ಷೇತ್ರದ ಪುನರ್‌ ನಿರ್ಮಾಣದಲ್ಲಿ ಸಹಕರಿಸಿದ ದಾನಿಗಳಿಗೆ ಗೌರವಾರ್ಪಣೆ ನಡೆಯಿತು. ಎಂ.ಜಿ. ಕರ್ಕೇರ ಸ್ವಾಗತಿಸಿದರು. ಶರತ್‌ ಶೆಟ್ಟಿ ದಾನಿಗಳ ವಿವಿರ ನೀಡಿದರು. ಸಾಯಿನಾಥ ಶೆಟ್ಟಿ ವಂದಿಸಿ, ಅರುಣ್‌ ರಾವ್‌ ನಿರೂಪಿಸಿದರು.

ಬಳಿಕ ಕಜೆ ಮಹಾಮ್ಮಾಯಿ ಭಕ್ತರ ಪ್ರಾಯೋಜಕತ್ವದಲ್ಲಿ ಬಪ್ಪನಾಡು ಮೇಳದ ವರಿಂದ “ಕಾರ್ಣಿಕೊದ ಶನೀಶ್ವರೆ’ ಯಕ್ಷಗಾನ ಬಯಲಾಟ ನಡೆಯಿತು.

ಇಂದು ನಾಗಮಂಡಲ ಫೆಬ್ರವರಿ 28ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆಗಳು, ದಾನಿಗಳಿಗೆ ಗೌರವಾರ್ಪಣೆ ನಡೆಯಲಿದೆ. ಫೆ. 24ರಂದು ನಾಗ ಮಂಡಲೋತ್ಸವ, ಫೆ. 26ರಂದು ಬ್ರಹ್ಮ ಕಲಶೋತ್ಸವ, ಫೆ. 28ರಂದು ವಾರ್ಷಿಕ ಮಾರಿಪೂಜೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next