Advertisement

ಧಾರ್ಮಿಕ ಉಪನ್ಯಾಸಗಳು: ಸತ್ಸಂಗ ಫ‌ಲ

08:55 PM May 31, 2019 | Lakshmi GovindaRaj |

1. ವಿಶ್ವೇಶ್ವರಪುರಂನ ಪರಮಾರ್ಥ ವಿಚಾರ ಟ್ರಸ್ಟ್‌ ವತಿಯಿಂದ ಧಾರ್ಮಿಕ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಡಾ.ಕೆ.ಜಿ. ಸುಬ್ರಾಯ ಶರ್ಮಾ ಅವರು ಉಪನ್ಯಾಸ ನೀಡಲಿದ್ದಾರೆ. ವಿದ್ಯಾಸಹಿತಂ (ಶನಿವಾರ), ಕರ್ಮಾಂಗಂ (ಭಾನುವಾರ) ವಿವಿದಿಷಾ (ಸೋಮವಾರ) ಅಗ್ನಿಹೋತ್ರಂ (ಮಂಗಳವಾರ) ಬುದ್ಧಿಯೋಗ (ಬುಧವಾರ) ಕರ್ಮಪಲಂ (ಗುರುವಾರ) ವಿದ್ಯಾವಿಹೀನಂ (ಶುಕ್ರವಾರ) ಕುರಿತು ಉಪನ್ಯಾಸ ನಡೆಯಲಿದೆ.

Advertisement

ಎಲ್ಲಿ?: ಅಧ್ಯಾತ್ಮ ಮಂದಿರ, ನ್ಯಾಷನಲ್‌ ಹೈಸ್ಕೂಲ್‌ ರಸ್ತೆ, ವಿಶ್ವೇಶ್ವರಪುರ
ಯಾವಾಗ?: ಜೂ.1-7, ಪ್ರತಿದಿನ ಬೆಳಗ್ಗೆ 7.45

2. ಬಸವನಗುಡಿಯ ವೇದಾಂತ ಸತ್ಸಂಗ ಕೇಂದ್ರ ಹಮ್ಮಿಕೊಂಡಿರುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ, ಡಾ.ಕೆ.ಜಿ. ಸುಬ್ರಾಯಶರ್ಮಾ ಉಪನ್ಯಾಸ ನೀಡುವರು. ಧರ್ಮವಿಲಕ್ಷಣಂ ಬ್ರಹ್ಮ (ಶನಿವಾರ) ಕಾಲಾತೀತಂ ಬ್ರಹ್ಮ (ಭಾನುವಾರ) ಪಾಪವಿದೂರಂ ಬ್ರಹ್ಮ (ಸೋಮವಾರ) ತಪಃಫ‌ಲಂ (ಮಂಗಳವಾರ) ವೇದಾಧ್ಯಯನಫ‌ಲಂ (ಬುಧವಾರ), ಪರಬ್ರಹ್ಮಪ್ರಾಪ್ತಿ (ಗುರುವಾರ) ಅಕ್ಷರಂ ಬ್ರಹ್ಮ (ಶುಕ್ರವಾರ) ಕುರಿತು ಉಪನ್ಯಾಸ ನಡೆಯಲಿದೆ.

ಎಲ್ಲಿ?: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್‌, ಬಸವನಗುಡಿ
ಯಾವಾಗ?: ಜೂ.1-7, ಪ್ರತಿದಿನ ಬೆಳಗ್ಗೆ 9ರಿಂದ

3. ಅಧ್ಯಾತ್ಮ ಪ್ರಕಾಶ ಕಾರ್ಯಾಲಯದಿಂದ ಉಪನ್ಯಾಸ ಮಾಲೆ ಹಮ್ಮಿಕೊಳ್ಳಲಾಗಿದೆ. ಶನಿವಾರ, “ಸಚ್ಚಿದಾನಂದ ಸೂಕ್ತಿಗಳು’ ಕುರಿತು ಡಾ. ಎಸ್‌. ನಾಗರಾಜು ಉಪನ್ಯಾಸ ನೀಡುವರು. ಸೋಮವಾರದಿಂದ ಶನಿವಾರದವರೆಗೆ, “ಚತುಸ್ಸೂತ್ರೀ ಶಾಂಕರಭಾಷ್ಯಮ್‌’ ಕುರಿತು, ಪ್ರೊ. ಶಿವರಾಮ ಅಗ್ನಿಹೋತ್ರಿಯವರು ಉಪನ್ಯಾಸ ನೀಡುವರು.

Advertisement

ಎಲ್ಲಿ?: ಅಧ್ಯಾತ್ಮ ಪ್ರಕಾಶ ಕಾರ್ಯಾಲಯ, 6ನೇ ಮುಖ್ಯರಸ್ತೆ, 2ನೇ ವಿಭಾಗ, ತ್ಯಾಗರಾಜನಗರ
ಯಾವಾಗ?: ಜೂ.1-8, ಬೆಳಗ್ಗೆ 9.30-10.30

Advertisement

Udayavani is now on Telegram. Click here to join our channel and stay updated with the latest news.

Next