Advertisement
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾಹಿತ್ಯವೆಂದರೆ ಎಲ್ಲರನ್ನೂ ತನ್ನೊಳಗೆ ತಂದು ಎಲ್ಲರಿಗೂ ಸಂತೋಷ, ಆನಂದ ಹಂಚುವುದು. ಸಾಹಿತ್ಯ ಒಂದು ಸಂಸ್ಕೃತಿಯ ಭಾಷೆ. ಅದು ಭಾಷಾ ಪ್ರಪಂಚ. ಭಾಷೆಗೂ-ಸಂಸ್ಕೃತಿಗೂ ನಿಕಟ ಸಂಬಂಧವಿದೆ. ಚಿತ್ರಕಲೆ, ನೃತ್ಯ ವೈವಿಧ್ಯ, ಗ್ರಾಮೀಣ ಹಾಡುಗಳು, ಪಾಡªನ, ಯಕ್ಷಗಾನ, ಜನಪದ ಸಾಹಿತ್ಯ ಇತ್ಯಾದಿ ಚಿಂತನೆಗಳನ್ನು ತೆರೆದಿಡುವುದು ಸಾಹಿತ್ಯದ ಮೂಲಕವೇ ಎಂದು ಹೇಳಿದರು.
ಜಗತ್ತಿನ ಬೇರೆ ಬೇರೆ ಭಾಷೆಗಳ ಪುಸ್ತಕಗಳು ಎಷ್ಟೇ ಚೆನ್ನಾಗಿದ್ದರೂ, ಆ ಭಾಷೆ ತಿಳಿಯದ ಓದುಗರಿಗೆ ಅವು ಕಬ್ಬಿಣದ ಕಡಲೆ. ಅನುವಾದವಾದರೆ ಮಾತ್ರ ಆ ಪುಸ್ತಕವನ್ನು ಓದಲು ಸಾಧ್ಯವಾಗುತ್ತದೆ. ಸಾಹಿತ್ಯದ ಓದಿಗೆ ಭಾಷೆ ಮುಖ್ಯ ಅಲ್ಲ. ಆ ಓದು ನಮ್ಮ ಸಾಹಿತ್ಯದ ಹಸಿವನ್ನು ಹಿಂಗಿಸಿ, ಜ್ಞಾನ ಹೆಚ್ಚಿಸಿ ಮತ್ತಷ್ಟು ಓದಿಗೆ ಪ್ರೇರಣೆ ನೀಡುವಂತಿರಬೇಕು. ಅನುವಾದ ಮಾಡುವವರಿಗೆ ಭಾಷಾ ಜ್ಞಾನದಲ್ಲಿ ಕೃತಿಯ ವಸ್ತುವಿನ ಬಗ್ಗೆ ಪೂರ್ಣ ಮಾಹಿತಿಯಿದ್ದು, ಸೃಜನಶೀಲ ಮನಸ್ಸಿನಿಂದ ಮೂಲ ಲೇಖಕನ ಕಲ್ಪನೆಗೆ ಸ್ಪಂದಿಸುವ ಮನೋಭಾವ ಆವಶ್ಯಕ ಎಂದು ವಿಶ್ಲೇಷಿಸಿದರು.
Related Articles
Advertisement
ಕಿರಣ್ ಪ್ರಸಾದ್ ಕುಂಡಡ್ಕ