Advertisement

ತುಳುನಾಡಿನಲ್ಲಿ ಸರಳ “ಬಿಸು ಪರ್ಬ’

02:19 PM Apr 15, 2020 | sudhir |

ಮಂಗಳೂರು: ತುಳುನಾಡಿನಲ್ಲಿ “ಬಿಸು ಪರ್ಬ’ ಎಂದೇ ಮನೆಮಾತಾದ ವಿಷು ಹಬ್ಬವನ್ನು ಈ ಬಾರಿ ಕೊರೊನಾ ಹಿನ್ನೆಲೆಯೆಲ್ಲಿ ಮನೆಗಳಲ್ಲಿಯೇ ಅತ್ಯಂತ ಸರಳವಾಗಿ ಆಚರಿಸಲಾಯಿತು,

Advertisement

ನಗರದ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿಷು ಸಂಕ್ರಮಣದ ಅಂಗ ವಾಗಿ ವಿಷುಕಣಿ ಪೂಜೆ ಭಕ್ತರಿಲ್ಲದೆ ಸರಳವಾಗಿ ಸೋಮವಾರ ರಾತ್ರಿ ಆಚರಿಸ ಲಾಯಿತು. ಶರವು ಶ್ರೀ ರಾಘವೇಂದ್ರ ಶಾಸ್ತ್ರಿ ನೇತೃತ್ವದಲ್ಲಿ ವಿಷು ಕಣಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಸಂಜೆ ದೇವರ ಉತ್ಸವ ಮೂರ್ತಿಯನ್ನು ಪಲ್ಲಕಿ ಯಲ್ಲಿಟ್ಟು ದೇವಸ್ಥಾನದೊಳಗೆ ಪ್ರದ ಕ್ಷಿಣೆ ಹಾಕಲಾಯಿತು. ಬಳಿಕ ದೇವರ ಮೂರ್ತಿ ಯನ್ನು ಉಯ್ನಾಲೆಯಲ್ಲಿ ತೂಗಿ ಅನಂತರ ಪೂಜೆ ನಡೆದು ಗರ್ಭಗುಡಿಗೆ ತರಲಾಯಿತು. ಅರ್ಚಕರು ವಿಷುಕಣಿಯನ್ನಿಟ್ಟು ಅದರ ಸುತ್ತ ಬಾಳೆಹಣ್ಣು, ಸೀಯಾಳ, ಹೂವಿನಿಂದ ಅಲಂಕರಿಸಿದ್ದರು.

ಮಹತೋಭಾರ ಶ್ರೀ ಮಂಗಳಾದೇವಿ ದೇಗುಲದಲ್ಲಿ ಮಂಗಳವಾರದಂದು ಶ್ರೀ ಮಾತೆಗೆ ವಿಷುಕಣಿ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಬಾರಿ ವಿಷು ಹಬ್ಬದ ಸಡಗರಕ್ಕೆ ಕೊರೊನಾ ಆತಂಕ ಮನೆಮಾಡಿತ್ತು. ಸಾಮಾನ್ಯವಾಗಿ ವಿಷು ಹಬ್ಬದಂದು ಭಕ್ತರು ಹತ್ತಿರದ ದೇವಾಲ ಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಕಾರಣದಿಂದ ಎಲ್ಲ ದೇಗುಲಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧವಿತ್ತು. ಇದೇ ಕಾರಣಕ್ಕೆ ಈ ಬಾರಿ ಮನೆಮಂದಿ ಒಟ್ಟಾಗಿ ಹಬ್ಬ ಆಚರಿಸಿದ್ದು ವಿಶೇಷ. ತುಳು ನಾಡಿನಲ್ಲಿ ವಿಶೇಷವಾಗಿ ಭಕ್ತರು ಫಲ- ಪುಷ್ಪಗಳನ್ನು, ದವಸ ಧಾನ್ಯ, ತರಕಾರಿ, ಹಣ, ಚಿನ್ನವನ್ನು ದೇವರ ಎದುರು ಇಟ್ಟು ಪೂಜಿಸಿದರು.

ಹೊಸ ಉಡುಪು ಧರಿಸಿ, ವಿವಿಧ ಖಾದ್ಯಗಳನ್ನು ತಯಾರಿಸಿ ಮನೆಮಂದಿ ಒಟ್ಟಾಗಿ ಕುಳಿತು ವಿಷು ಭೋಜನ ಉಂಡು ಖುಷಿಪಟ್ಟರು. ಅದೇ ರೀತಿ ಕಿರಿಯರು, ಹಿರಿಯರ ಆಶೀರ್ವಾದ ಪಡೆದರು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಹೊಸ ಜೋಡಿಗಳು ಮೊದಲ ವಿಷು ಹಬ್ಬವನ್ನು ಎರಡು ಕುಟುಂಬಗಳನ್ನು ಬೆಸೆಯುವ ಹಬ್ಬವಾಗಿ ಆಚರಿಸುತ್ತಾರೆ. ಆದರೆ ಈ ಬಾರಿ ಕೊರೊನಾ ಆತಂಕದಿಂದ ಕೇವಲ ಮನೆ ಮಂದಿಯಷ್ಟೇ ಹಬ್ಬದ ಸಡಗರದಲ್ಲಿ ಭಾಗಿಯಾದರು.

ಸಾಂಕೇತಿಕ ಆಚರಣೆ
ಪುತ್ತೂರು ಮಹಾಲಿಂಗೇಶ್ವರ ದೇಗುಲವೂ ಸೇರಿದಂತೆ ತಾ|ನ ವಿವಿಧ ದೇಗುಲಗಳಲ್ಲಿ ವಿಷು ಹಬ್ಬವನ್ನು ಪೂರ್ವಶಿಷ್ಟ ಸಂಪ್ರದಾಯದಂತೆ ಸಾಂಕೇತಿಕ ವಾಗಿ ಆಚರಿಸ ಲಾಯಿತು. ಮಹಾಲಿಂಗೇಶ್ವರ ದೇಗುಲ ದಲ್ಲಿ “ಬಿಸುಕಣಿ’ (ಫ‌ಲವಸ್ತು ಗಳು)ಯನ್ನು ದೇವರಿಗೆ ಅರ್ಪಿಸ ಲಾಯಿತು. ಕೆಲವು ಭಾಗಗಳಲ್ಲಿ ಮನೆಗಳಲ್ಲಿನ ದೈವಗಳಿಗೆ ತಂಬಿಲ ಸೇವೆ ನಡೆಸಲಾಯಿತು. ಮನೆ ಮಂದಿ ಮಾತ್ರ ಸೇರಿಕೊಂಡು ಹಬ್ಬ ಆಚರಿಸಿದರು.

Advertisement

ಕಾಸರಗೋಡು
ಜಿಲ್ಲೆಯ ಜನರು ಕೂಡ ಮನೆಗಳ ಲ್ಲಿಯೇ ವಿಷು ಆಚರಣೆ ಮಾಡಿ ದರು. ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುತ್ತಿದ್ದ “ವಿಷು ಕಣಿ’ ಉತ್ಸವವನ್ನು ರದ್ದುಗೊಳಿಸಲಾಗಿತ್ತು. ಮನೆಗಳಲ್ಲಿ ವಿಷು ಕಣಿಯ ದರ್ಶನ ಮಾಡಿದ ಮೇಲೆ ಕಿರಿಯರೆಲ್ಲ ಹಿರಿಯರ ಆಶೀರ್ವಾದ ಪಡೆದರು. ಕಿರಿಯರಿಗೆ ಹಿರಿಯರು ನಾಣ್ಯ ನೀಡಿ ಹರಸಿದರು. ಇದಕ್ಕೆ ವಿಷು “ಕೈನೀಟ್ಟಂ’ ಎಂದು ಹೆಸರು.

Advertisement

Udayavani is now on Telegram. Click here to join our channel and stay updated with the latest news.

Next