Advertisement
ಅವರು ಬಾರ್ಕೂರು ಸಂಸ್ಥಾನದಲ್ಲಿ ಮಾತನಾಡಿ ಸೇವೆ, ವ್ಯಕ್ತಿತ್ವವನ್ನು ಗಮನಿಸಬೇಕೇ ಹೊರತು ಜಾತಿಯನ್ನು ಅಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಲ್ಕಿ ಸುಂದರರಾಮ್ ಶೆಟ್ಟಿಯವರ ಸೇವೆ ಅಪಾರವಾದುದು. ಅವರ ಹೆಸರನ್ನು ರಸ್ತೆಗಿಡುವುದು ಸೂಕ್ತವಾದ ಆಯ್ಕೆಯಾಗಿದೆ. ಅವರು ಕರಾವಳಿಗೆ ಜಾತಿ ಧರ್ಮವನ್ನು ಮೀರಿ ಸೇವೆ ಸಲ್ಲಿಸಿದ್ದಾರೆ. ಈ ವಿಚಾರವಾಗಿ ಜಾತಿ ರಾಜಕಾರಣ ಮಾಡುವುದಕ್ಕೆ ಶ್ರೀ ಸಂಸ್ಥಾನ ವಿಷಾದ ವ್ಯಕ್ತಪಡಿಸುತ್ತದೆ ಎಂದು ಹೇಳಿದರು.
ಕಾಪುವಿನಲ್ಲಿ ಬಂಟ ಕುಟುಂಬವೊಂದು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿರುವುದನ್ನು ಬಾರ್ಕೂರು ಶ್ರೀ ಸಂಸ್ಥಾನವು ಖಂಡಿಸುತ್ತದೆ. ಆ ಕುಟುಂಬವನ್ನು ಮತ್ತೆ ಬಂಟ ಸಮುದಾಯಕ್ಕೆ ಕರೆತರುವಲ್ಲಿ ಸಂಸ್ಥಾನವು ಪ್ರಯತ್ನ ಮಾಡಲಿದೆ ಎಂದು ಡಾ| ವಿಶ್ವಸಂತೋಷ ಭಾರತೀ ಶ್ರೀಗಳು ಹೇಳಿದರು. ಹಿಂದೂ ಸಮುದಾಯದವರ ಬಡತನದಂತಹ ಕೆಲವು ನ್ಯೂನತೆಗಳನ್ನು ಅಸ್ತ್ರವನ್ನಾಗಿಸಿಕೊಂಡು ಮತಾಂತರ ಮಾಡುವ ಜಾಲವಿದ್ದು ಇದರ ವಿರುದ್ಧ ಸಂಸ್ಥಾನವು ಧ್ವನಿ ಎತ್ತಲಿದೆ. ಕಾಪುವಿನ ಕುಟುಂಬ ಹಿಂದೂ ಸಮುದಾಯಕ್ಕೆ ಮರಳುವಲ್ಲಿ ಖುದ್ದು ಗಮನಹರಿಸುತ್ತೇನೆ. ಕೇವಲ ಬಂಟ ಸಮುದಾಯದವರಲ್ಲದೆ ಯಾವುದೇ ಹಿಂದೂ ಸಮುದಾಯದವರು ಮತಾಂತರಗೊಂಡಾಗ ಅವರನ್ನು ಮರಳಿ ಹಿಂದು ಧರ್ಮಕ್ಕೆ ಕರೆತರುವಲ್ಲಿ ಸಂಸ್ಥಾನವು ಕ್ರಮ ಕೈಗೊಳ್ಳಲಿದ್ದು, ಸಮಸ್ತ ಹಿಂದೂ ಸಂಘಟನೆಗಳು ಕೈಜೋಡಿಸಬೇಕು ಎಂದು ಹೇಳಿದರು.