ತೆಕ್ಕಟ್ಟೆ : ಊರಿನ ಭಗವದ್ಭಕ್ತರ ಸಂಘಟನಾತ್ಮಕ ಶಕ್ತಿಯಿಂದಾಗಿ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸುಂದರ ಶಿಲಾಮಯ ದೇಗುಲ ನಿರ್ಮಾಣ ಗೊಂಡಿದ್ದು ಗ್ರಾಮದ ದೇಗುಲವನ್ನು ಪುನರುತ್ಥಾನ ಮಾಡಿಕೊಡುವಲ್ಲಿ ಗ್ರಾಮಸ್ಥರು ಸಹಕಾರದೊಂದಿಗೆ ನಮ್ಮ ಅಭಿವೃದ್ಧಿಯನ್ನು ನಾವು ಮಾಡಿಕೊಳ್ಳುವ ಜತೆಗೆ ಭಗವಂತನು ಕೊಟ್ಟಿರುವುದರಲ್ಲಿ ಬಂದ ಅಲ್ಪಸ್ವಲ್ಪವನ್ನು ಉಳಿತಾಯ ಮಾಡಿ ಧರ್ಮಕಾರ್ಯಕ್ಕೆ ವಿನಿಯೋಗವಾಗಬೇಕು ಎಂದು ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.
ಅವರು ಮಾ. 27ರಂದು ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರು ಪ್ರತಿಷ್ಠಾಪನೆಗೊಂಡ 48ನೇ ದಿನವಾದ ಹಿನ್ನೆಲೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಸಂಪೂರ್ಣ ಲೆಕ್ಕಾಚಾರ ಹಾಗೂ ಮುಂದಿನ ಕಾರ್ಯ ಯೋಜನೆಯ ಬಗ್ಗೆ ತಿಳಿಸಲು ಗ್ರಾಮಸ್ಥರೊಂದಿಗೆ ನಡೆಸಿದ ಸಮಾಲೋಚನಾ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ದೇಗುಲ ವತಿಯಿಂದ ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ, ಮಹಾದ್ವಾರವನ್ನು ನಿರ್ಮಿಸಿಕೊಟ್ಟ ದಾನಿಗಳಾದ ಕಸ್ತೂರಿ ಶೆಟ್ಟಿ, ನಾಗೇಶ್ ಶೆಟ್ಟಿ ಹಾಗೂ ಲೆಕ್ಕ ಪರಿಶೋಧಕ ಮಲ್ಯಾಡಿ ರಾಜೀವ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಉಳ್ತೂರು ಮೋಹನದಾಸ್ ಶೆಟ್ಟಿ ಕಟ್ಟೆಮನೆ ಇತಿಹಾಸ ಪ್ರಸಿದ್ಧ ಶಿಲಾಮಯ ದೇಗುಲದಲ್ಲಿ ಎರಡು ಪ್ರಧಾನ ಅರ್ಚಕ ಮನೆತನದಿಂದ ನಿತ್ಯ ಪೂಜಾ ವಿಧಿ ವಿಧಾನಗಳು ಅತ್ಯಂತ ಶಾಸ್ತàಕ್ತವಾಗಿ ನಡೆದುಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ನಂಬಿದ ಭಕ್ತರಿಗೆ ಶ್ರೀ ದೇವರ ನಿತ್ಯ ದರ್ಶನ, ಹಣ್ಣುಕಾಯಿ ಹಾಗೂ ಪ್ರಸಾದ ವಿತರಣೆ ಪೂರ್ಣಕಾಲಿಕವಾಗಿ ದೊರ ಕುವ ನಿಟ್ಟಿನಿಂದ ಪೂರ್ಣಕಾಲಿಕವಾಗಿ ಅರ್ಚಕರನ್ನು ನೇಮಿಸುವ ಬಗ್ಗೆ ಚಿಂತನೆ ಮಾಡಬೇಕಾದ ಅಗತ್ಯ ಇದೆ. ಮುಂದಿನ ಮಹತ್ವದ ಯೋಜನೆಯಲ್ಲಿ ಒಂದಾದ ದೇಗುಲದ ಹೆಬ್ಟಾಗಿಲು ಹಾಗೂ ಸುತ್ತುಪೌಳಿಯು ಸುಮಾರು ರೂ.1.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ ಹಾಗೂ ಪ್ರತಿ ಸೋಮವಾರದಂದು ಭಕ್ತರಿಗೆ ಅನ್ನ ಪ್ರಸಾದ ವಿತರಣೆಗೆ ತಗಲುವ ವೆಚ್ಚವನ್ನು ನಾನೇ ಭರಿಸುವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎಚ್. ಸುರೇಂದ್ರ ಹೆಗ್ಡೆ ಹಲ್ತೂರು ಮೇಲ್ಮನೆ, ಲೆಕ್ಕ ಪರಿಶೋಧಕ ಮಲ್ಯಾಡಿ ರಾಜೀವ ಶೆಟ್ಟಿ, ಉಳೂ¤ರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಯು. ಸೀತಾರಾಮ ಅಡಿಗ, ಯು.ಚೆನ್ನ ಕೇಶವ ಅಡಿಗ ಹಾಗೂ ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರು ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಉಳ್ತೂರು ಮೋಹನದಾಸ್ ಶೆಟ್ಟಿ ಕಟ್ಟೆಮನೆ ಸ್ವಾಗತಿಸಿ, ಲೆಕ್ಕ ಪರಿಶೋಧಕ ಮಲ್ಯಾಡಿ ರಾಜೀವ ಶೆಟ್ಟಿ ಲೆಕ್ಕಪತ್ರ ಮಂಡಿಸಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಯು. ಭೋಜರಾಜ ಶೆಟ್ಟಿ ನಿರೂಪಿಸಿ, ವಂದಿಸಿದರು.