Advertisement
ಸಾಮಾನ್ಯವಾಗಿ ಆಫೀಸಿನ ಕೆಲಸ ಮಾಡುವಾಗ ಏನಾದರೂ ಒತ್ತಡ ಇದ್ದೇ ಇರುತ್ತದೆ. ಆದರೆ ಆ ಒತ್ತಡ ನಿವಾರಣೆಗೆ ಹಸುರು ಪುಟ್ಟ ಸಸ್ಯಗಳು ನಿಮ್ಮ ಡೆಸ್ಕ್ ಮೇಲಿದ್ದರೆ ಕೊಂಚ ರಿಲೀಫ್ ಪಡೆಯಬಹುದಂತೆ. ಇದು ನಿಮ್ಮಲ್ಲಿ ಮಾನಸಿಕ ಸದೃಢತೆ ತುಂಬುವುದರೊಂದಿಗೆ ಕೆಲಸದ ಒತ್ತಡ ಭಾವನೆಯನ್ನು ತೊಡೆದು ಹಾಕುತ್ತದೆ. ಜಪಾನ್ ಮೂಲದ ಸಂಶೋಧನೆಯಲ್ಲಿ ಈ ಡೆಸ್ಕ್ ಪ್ಲಾಂಟ್ ಹಾಕುವ ಮೊದಲು ಮತ್ತು ಅನಂತರದ ಸ್ಥಿತಿಯನ್ನು ತುಲನಾತ್ಮಕವಾಗಿ ಪರಿಗಣಿಸಿ ಈ ಹವ್ಯಾಸ ಒತ್ತಡವನ್ನು ನಿವಾರಿಸುತ್ತದೆ ಎಂದು ತಿಳಿಸಿದ್ದಾರೆ.ಎಲ್ಲ ಗಿಡಗಳನ್ನು ನೆಡಲು ಸಾಧ್ಯವಿಲ್ಲ. ಅದೇ ರೀತಿ ಆಫೀಸ್ ಎಂದ ಮೇಲೆ ಸ್ವಲ್ಪ ಶಿಸ್ತು ಕೂಡಾ ಇರಬೇಕಾಗುತ್ತದೆ. ಡೆಸ್ಕ್ ಪ್ಲಾಂಟ್‌ನಲ್ಲಿ ನೀವು ಸಾಮಾನ್ಯವಾಗಿ ಬೋನ್ಸೆ„, ಏರ್ ಪ್ಲಾಂಟ್, ಫಾಲಿಗ್ ಪ್ಲಾಂಟ್, ಕೊಕೆಡಮ್, ಸ್ಯಾನ್ ಪೆಡ್ರೋಕೆಟಸ್ ಅನ್ನು ನೀವು ನೆಡಬಹುದಾಗಿದೆ. ಇಂತಹ ಗಿಡಗಳ ಆಕೃತಿ ಚಿಕ್ಕದಾಗಿದ್ದು, ನಿಮ್ಮ ಡೆಸ್ಕ್ನ ಅಂದವನ್ನು ಉಳಿಸುವು¨ ರೊಂದಿಗೆ ಮಾನಸಿಕ ಆರೋಗ್ಯವೃದ್ಧಿ ಯನ್ನೂ ಮಾಡುತ್ತದೆ. ಈ ಡೆಸ್ಕ್ ಪ್ಲಾಂಟ್ ಹವ್ಯಾಸವು ನಿಮ್ಮಲ್ಲಿ ಗಿಡಗಳ ಕುರಿತು ಪ್ರೀತಿಯ ಭಾವನೆಯನ್ನು ಮೂಡಿಸುತ್ತದೆ. ಗಿಡಗಳನ್ನು ಮಕ್ಕಳಂತೆ ಪೋಷಿಸುವ ಮನಸ್ಸನ್ನು ನಿಮ್ಮಲ್ಲಿ ಮೂಡಿ ನಮ್ಮ ಒತ್ತಡದ ನಡುವೆ ಒಮ್ಮೆ ನೆಚ್ಚಿನ ಡೆಸ್ಕ್ ಪ್ಲಾಂಟ್ ಬಳಿ ಕಣ್ಣಾಡಿಸಿದರೆ ಕನಿಷ್ಠ ಮೂರು ನಿಮಿಷವಾದರೂ ನೆಮ್ಮದಿ ದೊರೆಯುತ್ತದೆ. ಫಿಶಿಂಗ್ ಪಾಟ್‌ನಲ್ಲಿ ಗೋಲ್ಡ್ ಫಿಶ್ ಸಾಕುವುದರಿಂದ ನಮ್ಮಲ್ಲಿರುವ ಯೋಚನಾ ಶೈಲಿ ಬದಲಾಗುತ್ತದೆ. ಋಣಾತ್ಮಕ ಯೋಚನೆ ನಮ್ಮ ಬಳಿ ಸುಳಿಯದಂತೆ ನಮ್ಮ ಮನಸ್ಸು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ವಿಚಿತ್ರವೆನಿಸಿದರೂ ನಿಜ
ತುಂಬಾ ನಿರಾಸೆಯಾದಾಗ ಅಥವಾ ಹೇಳಿಕೊಳ್ಳಲಾಗದ ದುಃಖವಿದ್ದರೆ ಅದನ್ನು ಡೆಸ್ಕ್ ಪ್ಲಾಂಟ್ ಅಥವಾ ಫಿಶಿಂಗ್ ಪಾಟ್ ಮುಂದೆ ಹೇಳಿಕೊಂಡರೆ ಮನಸ್ಸಿನ ಭಾರ ಕಡಿಮೆಯಾಗುತ್ತದೆ. ಇನ್ನೂ ಕೆಲವರು ಅದರೊಂದಿಗೆ ಮಾತನಾಡುವುದು ಅದು ತನ್ನೊಂದಿಗೆ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ ಎಂದು ಅದರೊಂದಿಗೆ ಆತ್ಮೀಯ ಸಂಬಂಧ ಇಟ್ಟುಕೊಳ್ಳುತ್ತಾರೆ. ಹಲವು ಬಾರಿ ನಿಮ್ಮಲ್ಲಿ ಏಕಾಂಗಿತನ (ಒಬ್ಬಂಟಿಯ) ಕೊರಗಿದ್ದರೆ ಅದರ ನಿವಾರಣೆಗೂ ಈ ಹವ್ಯಾಸ ಬಹಳ ಉಪಯುಕ್ತವಾದದು.
Related Articles
Advertisement