Advertisement

ಜೀವನದ ಒತ್ತಡ ನಿವಾರಿಸಿಕೊಳ್ಳಿ

07:34 AM Mar 11, 2019 | |

ಆಧುನಿಕ ಯುಗದಲ್ಲಿ ಶಾಂತಿ ನೆಮ್ಮದಿಯನ್ನು ಹುಡುಕಲೇಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ. ದೈನಂದಿನ ಕೆಲಸ ಕಾರ್ಯಗಳು, ಅಸೈನ್‌ಮೆಂಟ್‌ ಗಳು, ಕಚೇರಿ ಕೆಲಸಗಳು ಹೀಗೆ ಹತ್ತು ಹಲವು ಒತ್ತಡಗಳು ದಿನ ನಿತ್ಯ ಕಾಡುತ್ತಿರುತ್ತವೆ. ಸಹಜವಾಗಿ ಒಂದೆರಡು ಸಮಸ್ಯೆಗಳಿದ್ದರೂ ಅದು ಒತ್ತಡದ ಪರಿಧಿಯೊಳಗೆ ಬರುವುದಿಲ್ಲ. ಬದಲಾಗಿ ಸಮಸ್ಯೆಗಳ ಸರಮಾಲೆಗಳು ಬೆಳೆಯುತ್ತಾ ಹೋದಂತೆ ಮನುಷ್ಯ ಎಡವಲು ಆರಂಭಿಸುತ್ತಾನೆ.

Advertisement

ಒಂದು ಸಮಸ್ಯೆಯನ್ನು ಜಾಣ ನಡೆಯಿಂದ ಪರಿಹರಿಸಲು ಯತ್ನಿಸಿದರೆ, ಮುಂದಿನ ಸಮಸ್ಯೆಗಳಿಂದ ಪಾರಾಗಬಹುದು. ಹಾಗಾದರೆ ಈ ಒತ್ತಡವನ್ನು ನಿವಾರಿಸುವ ಬಗೆ ಹೇಗೆ? ದೈನಂದಿನ ಕೆಲಸವನ್ನು ಆದಷ್ಟು ಅಂದೇ ಮುಗಿಸುವತ್ತ ಚಿತ್ತ ಹರಿಸಬೇಕು. ಮನೆಯ ಒತ್ತಡ ಕಚೇರಿಗೆ ಅಥವಾ ಕಚೇರಿ ಒತ್ತಡವನ್ನು ಮನೆಗೆ ಕೊಂಡೊಯ್ಯವುದನ್ನು ಕಡಿಮೆ ಮಾಡಿದಾಗ ಒತ್ತಡದಿಂದ ‘ರಿಲೀಫ್’ ಸಿಗ ಲು ಸಾಧ್ಯ.  ಜೀವನವನ್ನು ಆಸ್ವಾಧಿಸಿ ಬದುಕುವ ಕಲೆಯನ್ನು ಕರಗತ ಮಾಡಿಕೊಳ್ಳಿ. ಕಷ್ಟ ಬಂದಾಗ ಕುಗ್ಗದೆ ಜಾಣತನದಿಂದ ಎದುರಿಸುವ ಕಲೆಯನ್ನು ಕಲಿತುಕೊಳ್ಳಿ.

ನೀವು ಒತ್ತಡಕ್ಕೆ ಸಿಲುಕಿದಾದ ಇದನ್ನು ಪ್ರಯತ್ನಿಸಿ ನೋಡಿ:

· ತುಸು ವಿಶ್ರಾಂತಿ ಪಡೆಯಿರಿ. ಯೋಗ, ಧ್ಯಾನ, ಸಂಗೀತಕ್ಕೆ ಕಿವಿಯಾಗಲು ಪ್ರಯತ್ನಿಸಿ.
· ಸಮತೋಲಿತ ಆಹಾರ ಸೇವಿಸಿ. ಯಾವುದೇ ಕಾರಣಕ್ಕೆ ಊಟ ಬಿಡಬೇಡಿ.
· ಮದ್ಯಪಾನ ಮಾಡಬೇಡಿ. ಇಂತಹ ಸೇವನೆ ಒತ್ತಡವನ್ನು ಬೇರೆ ಸ್ವರೂಪಕ್ಕೆ ಕೊಂಡೊಯ್ಯ
ಬಹುದಾಗಿದೆ. 
· ಚೆನ್ನಾಗಿ ನಿದ್ದೆ ಮಾಡಿ. ಒತ್ತಡದ ಸಂಧಿಗ್ಧತೆಯಲ್ಲಿ ನಿಮ್ಮ ಶರೀರ ವಿಶ್ರಾಂತಿಯನ್ನು ಬಯಸುತ್ತಿರುತ್ತದೆ.
· ನಿಧಾನವಾಗಿ ದೀರ್ಘ‌ ಉಸಿರು ತೆಗೆದು, ನಿಧಾನವಾಗಿ ಬಿಡಿ. 
· 1ರಿಂದ 20 ಅಂಕಿಯನ್ನು ಲೆಕ್ಕಹಾಕಿ. ನಿಮ್ಮ ಒತ್ತಡ ಕಡಿಮೆಯಾಗತೊಡಗುತ್ತದೆ.
·ಹಾಸ್ಯ ಭರಿತ ಸನ್ನಿವೇಶಗಳು ಅಥವಾ ನಿಮ್ಮ ಜೀವನದ ಸಂತೋಷದ ಸಂದರ್ಭವನ್ನು ಮೆಲುಕು ಹಾಕಿ. ಮನಸ್ಸು ಉಲ್ಲಸಿತವಾಗುತ್ತದೆ.
· ಧನಾತ್ಮಕ ಚಿಂತನೆಯನ್ನು ರೂಢಿಸಿಕೊಳ್ಳಿ. “ಐ ಕಾಂಟ್‌’ ಪದದ ಬದಲು ‘ಐ ಕ್ಯಾನ್‌’ ಪದ ನಿಮ್ಮ
ಡಿಕ್ಷನರಿಯಲ್ಲಿರುವಂತೆ ನೋಡಿಕೊಳ್ಳಿ.
ನಕಾರಾತ್ಮಕ ಚಿಂತನೆ ನಿಮ್ಮ ಒತ್ತಡವನ್ನು ಇಮ್ಮಡಿಗೊಳಿಸಬಹುದು.
·ನಿಮ್ಮ ಒತ್ತಡಕ್ಕೆ ಏನು ಕಾರಣ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಪುಸ್ತಕದಲ್ಲಿ ಏನಾದರೂ ಬರೆಯಲು ಪ್ರಯತ್ನಿಸಿ.
·ಒತ್ತಡದ ನಿವಾರಣೆಗೆ ಯಾರಾದರೂ ಪರಿಣತರನ್ನು ಭೇಟಿಯಾಗಿ ಮಾತುಕತೆ ನಡೆಸಿ. ಅವರ ಕೆಲವು ಸಲಹೆಗಳು ನಿಮಗೆ ಹೆಚ್ಚು ಪ್ರಯೋಜನವಾದೀತು.

ಕಾರ್ತಿಕ್‌ ಅಮೈ

Advertisement
Advertisement

Udayavani is now on Telegram. Click here to join our channel and stay updated with the latest news.

Next