Advertisement

ಕ್ಷೌರಿಕರು, ಅಗಸರಿಗೆ ಪರಿಹಾರ ಧನ ಯೋಜನೆ; ಬಿಪಿಎಲ್‌ ಮಾನದಂಡವೇ ಅಡ್ಡಿ ; “ಅನರ್ಹ’ರೇ ಅಧಿಕ !

01:34 AM Aug 27, 2020 | mahesh |

ಮಂಗಳೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಕ್ಷೌರಿಕರು ಮತ್ತು ಅಗಸರಿಗೆ ನೆರವಾಗಲು ಸರಕಾರ ಘೋಷಿಸಿದ ಪರಿಹಾರ ಪ್ಯಾಕೇಜ್‌ ಪಡೆಯಲು ಬಿಪಿಎಲ್‌ ಸಹಿತ ಹಲವು ಮಾನದಂಡಗಳು ಅಡ್ಡಿಯಾಗಿವೆ. ಅರ್ಜಿ ಸಲ್ಲಿಸಿದವರ ಪೈಕಿ ಅನೇಕ ಮಂದಿ ಪರಿಹಾರ ಧನಕ್ಕಾಗಿ ಕಾರ್ಮಿಕ ಇಲಾಖೆ, ಬ್ಯಾಂಕ್‌ಗಳಿಗೆ ಅಲೆಯುತ್ತಿದ್ದಾರೆ.

Advertisement

ದ.ಕ. ಜಿಲ್ಲೆಯಲ್ಲಿ 1,337 ಮಂದಿ ಕ್ಷೌರಿಕರು ಅರ್ಜಿ ಸಲ್ಲಿಸಿದ್ದು 1,311 ಮಂದಿಯ ಅರ್ಜಿ ಸ್ವೀಕೃತವಾಗಿದೆ. ಆದರೆ ಸುಮಾರು 650 ಮಂದಿಗೆ ಮಾತ್ರ ಪರಿಹಾರ ಧನ ದೊರೆತಿದೆ. 345 ಮಂದಿ ಅಗಸರು ಅರ್ಜಿ ಸಲ್ಲಿಸಿದ್ದು, 338 ಮಂದಿಗೆ ಮಂಜೂರಾಗಿದೆ. ಉಡುಪಿ ಜಿಲ್ಲೆಯಲ್ಲಿ 1,416 ಮಂದಿ ಕೌÒರಿಕರು/ಅಗಸರ ಅರ್ಜಿ ವಿಲೇವಾರಿ ಆಗಿದೆ. 1,290 ಮಂದಿಗೆ ಪರಿಹಾರ ಧನ ಮಂಜೂರಾಗಿದೆ. ಆದರೆ ಎಷ್ಟು ಮಂದಿ ಫ‌ಲಾನುಭವಿಗಳ ಖಾತೆಗೆ ಪರಿಹಾರ ಧನ ಮೊತ್ತ ಜಮೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಬಿಪಿಎಲ್‌ ಮಾನದಂಡದಿಂದಾಗಿ ಒಟ್ಟು ಅರ್ಹರಲ್ಲಿ ಶೇ. 40ರಷ್ಟು ಮಂದಿಗೆ ಮಾತ್ರ ಪರಿಹಾರ ಧನ ದೊರೆತಿದೆ. ಮುಂಗೈಗೆ ಬೆಲ್ಲ ಸವರುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಕೌÒರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸವಿತಾ ಸಮಾಜದ ಮುಖಂಡರ ಪ್ರಕಾರ ದ.ಕ. ಜಿಲ್ಲೆಯಲ್ಲಿ 2,500ಕ್ಕೂ ಅಧಿಕ ಮಂದಿ ಕೌÒರಿಕರಿದ್ದಾರೆ. ಆದರೆ ಅವರಲ್ಲಿ ಸಾವಿರಕ್ಕಿಂತಲೂ ಕಡಿಮೆ ಮಂದಿ ಬಿಪಿಎಲ್‌ ಕಾರ್ಡ್‌ ಹೊಂದಿದ್ದಾರೆ. ಬಿಪಿಎಲ್‌ಗೆ ಅರ್ಹತೆ ಇದ್ದರೂ ಬಿಪಿಎಲ್‌ಗೆ ಅರ್ಜಿ ಹಾಕದಿರುವವರು ಅನೇಕ ಮಂದಿ ಇದ್ದಾರೆ. ಆದರೆ ಈಗ ಸಂಕಷ್ಟದ ಕಾಲದಲ್ಲಿ ಬಿಪಿಎಲ್‌ ಮಾನದಂಡ ಆಗಿರುವುದರಿಂದ ಅವರಿಗೆಲ್ಲ ಪರಿಹಾರ ಧನ ಪಡೆಯಲು ಸಾಧ್ಯವಾಗುತ್ತಿಲ್ಲ.

ವಯೋಮಿತಿಯೂ ಅಡ್ಡಿ
ಪರಿಹಾರ ಧನ ಪಡೆಯಲು ಗರಿಷ್ಠ ವಯೋಮಿತಿ 65 ವರ್ಷಗಳಿಗೆ ಸೀಮಿತಗೊಳಿಸಿರುವುದು ಇನ್ನೊಂದು ಅಡ್ಡಿ. 65 ವರ್ಷ ಮೇಲ್ಪಟ್ಟ ಅನೇಕ ಮಂದಿ ಇಂದಿಗೂ ಕೌÒರಿಕ ವೃತ್ತಿ ಮಾಡುತ್ತಿದ್ದು ಅಂತವರು ವಂಚಿತರಾಗಿದ್ದಾರೆ. ಇದರ ಜತೆ ಕುಟುಂಬದ ಓರ್ವ ಸದಸ್ಯರು ಮಾತ್ರ ಪರಿಹಾರ ಧನ ಪಡೆಯಬಹುದು ಎಂಬ ನಿಬಂಧನೆ ಇದೆ. ಈ ಕಾರಣದಿಂದಲೂ ಅನೇಕರಿಗೆ ಪರಿಹಾರ ಧನ ದೊರೆತಿಲ್ಲ.
ಪ್ರಯತ್ನಕ್ಕೆ ಫ‌ಲ ಸಿಕ್ಕಿಲ್ಲ ಬಿಪಿಎಲ್‌ ಮಾನದಂಡ ಕೈಬಿಡ ಬೇಕೆಂಬ ಬೇಡಿಕೆಯನ್ನಿಟ್ಟು ಕಳೆದೆರಡು ತಿಂಗಳುಗಳಿಂದ ಮನವಿ ಸಲ್ಲಿಸುತ್ತಿದ್ದರೂ ಅದು ಈಡೇರಿಲ್ಲ.

ಒಂದು ಕಾರ್ಡ್‌ನಲ್ಲಿ ಒಬ್ಬರಿಗೆ
ಒಂದು ರೇಷನ್‌ ಕಾರ್ಡ್‌ ನಲ್ಲಿ ಒಬ್ಬರು ಮಾತ್ರ ಪರಿಹಾರ ಪಡೆಯ ಬಹುದು. ಒಂದು ಕುಟುಂಬ ದಲ್ಲಿ (ಒಂದು ಬಿಪಿಎಲ್‌ ರೇಷನ್‌ ಕಾರ್ಡ್‌) ಹಲವು ಮಂದಿ ಕ್ಷೌರಿಕರು ಇದ್ದರೆ ಅವರಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ಸಿಗುತ್ತದೆ. ಇದು ಕೂಡ ಯೋಜ ನೆಯ ಹಿನ್ನಡೆಗೆ ಕಾರಣ ಎನ್ನುತ್ತಾರೆ ಕ್ಷೌರಿಕರು. ಉಭಯ ಜಿಲ್ಲೆಗಳಲ್ಲಿ ಇಂಥ ಹಲವಾರು ಪ್ರಕರಣಗಳಿವೆ.

Advertisement

ಅರ್ಹರಿಗೆ ಸಿಕ್ಕಿಲ್ಲ
ಎಪಿಎಲ್‌ನಲ್ಲಿಯೂ ಹಲವು ಮಂದಿ ಇದ್ದಾರೆ. ಅವರಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನೇ ಕೊಟ್ಟಿಲ್ಲ. ಕೊರೊನಾದಿಂದಾಗಿ ಎಲ್ಲರಿಗೂ ಸಮಸ್ಯೆಯಾಗಿದೆ. ಎಲ್ಲರಿಗೂ ಅವಕಾಶ ನೀಡಿದ್ದರೆ ಮಾತ್ರ ಅರ್ಥಪೂರ್ಣವಾಗುತ್ತಿತ್ತು. ಬಿಪಿಎಲ್‌ನವರಿಗೂ ಹಲವು ಮಂದಿಗೆ ಹಣ ಬಂದಿಲ್ಲ.
-ಪದ್ಮನಾಭ, ಕ್ಷೌರಿಕರು, ಮಂಗಳೂರು

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next