Advertisement

ಏಸು ಕ್ರಿಸ್ತರ ಪ್ರಾರ್ಥನೆಯಿಂದ ನೆಮ್ಮದಿ: ಶಾಸಕ ಖೇಣಿ

12:57 PM Dec 16, 2017 | Team Udayavani |

ಹುಮನಾಬಾದ: ಬೀದರ ದಕ್ಷಿಣ ಕ್ಷೇತ್ರದಲ್ಲಿ 180 ಕ್ರೆಸ್ತ್ ಧರ್ಮದ ಪ್ರಾರ್ಥನಾ ಮಂದಿರಗಳಿವೆ. ಏಸು ಕ್ರಿಸ್ತರ ಆಶೀರ್ವಾದದಿಂದ ನನ್ನ ಕ್ಷೇತ್ರದ ಜನರು ಸುಖ ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ಶಾಸಕ ಅಶೋಕ ಖೇಣಿ ಹೇಳಿದರು.

Advertisement

ತಾಲೂಕಿನ ಮನ್ನಾಏಖೇಳಿ ಗ್ರಾಮದ ನೂರ್‌ ಭವನದಲ್ಲಿ ಕರ್ನಾಟಕ ಮಕ್ಕಳ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ರಿಸ್‌ಮಸ್‌ ಉತ್ಸವ 2017ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಂತಿಪ್ರಿಯನಾದ ಏಸು ಕ್ರಿಸ್ತರ ಪ್ರಾರ್ಥನೆಯಿಂದ ಮನಸ್ಸಿಗೆ ನೆಮ್ಮದಿ, ಸಮಾಧಾನ ಪ್ರಾಪ್ತಿಯಾಗುತ್ತದೆ. ಸಮಾಜವನ್ನು ಒಳ್ಳೆಯದಾರಿಗೆ ತರುವಲ್ಲಿ ಶ್ರಮಿಸಿದ್ದಾರೆ. ಸಮಾಜದ ಜನರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಅಲ್ಲದೇ ಉತ್ತಮ ಸಂಸ್ಕೃತಿ, ಆಚಾರ ವಿಚಾರ, ನಡೆನುಡಿ ಬಗ್ಗೆ ಮಕ್ಕಳಿಗೆ ತಿಳಿಹೇಳಿ ಅಜ್ಞಾನದಿಂದ ಸುಜ್ಞಾನದ ಕಡೆಗೆ ತರಬೇಕು ಎಂದು ಹೇಳಿದರು.

ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ವಿರೋಧ ಪಕ್ಷದವರಿಗೆ ಕಾಣುತ್ತಿಲ್ಲ. ವಿರೋಧ ಪಕ್ಷದವರು ಕೇವಲ ಆಧಾರ ರಹಿತ ಸುಳ್ಳು ಆರೋಪ ಮಾಡುತ್ತಾ ದಿನ ಕಳೆಯುತ್ತಿದ್ದಾರೆ. ಸಮಸ್ಯೆಗೆ ಸ್ಪಂದಿಸಬೇಕಾದ ಪಕ್ಷಗಳು ಬಡಜನರ ದಿಕ್ಕು ತಪ್ಪಿಸುವಂತಹ ಕೆಲಸಗಳಲ್ಲಿ ನಿರತರಾಗಿವೆ. ಕ್ಷೇತ್ರದ ಜನರು ಎಲ್ಲ ವಿಷಯಗಳನ್ನು ಸರಳವಾಗಿ ಅರ್ಥೈಸಿಕೊಳ್ಳುವಂತರಿದ್ದಾರೆ ಎಂದು ಹೇಳಿದರು.

ನಾನು ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಆಸ್ವಾಸನೆಗಳನ್ನು ಸಂಪೂರ್ಣವಾಗಿ ಈಡೇರಿಸಿದ್ದೇನೆ. ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯ ಕಲ್ಪಸುವ ನಿಟ್ಟಿನಲ್ಲಿ 1048 ಕೋಟಿ ರೂ. ವೆಚ್ಚದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳಿಸಿದ್ದೇವೆ. ಇನ್ನೂ ಕೆಲ ಕಾಮಗಾರಿಗಳು ಪ್ರಗತಿಯಲ್ಲಿವೆ. ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡಲಾಗಿದೆ ಎಂದು ಹೇಳಿದರು.

Advertisement

ಕ್ಷೇತ್ರದ ಪ್ರತಿ ಗ್ರಾಪಂ ಮಟ್ಟದಲ್ಲಿ ನಾನು ಮಾಡಿರುವ ಅಭಿವೃದ್ಧಿ ಯೋಜನೆಗಳ ಸಮಗ್ರ ಮಾಹಿತಿ ಕರಪತ್ರಗಳು ಮತ್ತು ಬ್ಯಾನರ್‌ ಅಳವಡಿಸಿ ಆಯಾ ಗ್ರಾಮದಲ್ಲಿನ ಪ್ರಗತಿ ಹಾಗೂ ಖರ್ಚು ಮಾಡಿದ ಅನುದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಸುಳ್ಳು ಹೇಳಿ ರಾಜಕೀಯ ಮಾಡುವರಿಗೆ ಜನರೇ ಉತ್ತರ ನೀಡುತ್ತಾರೆ. ಕ್ಷೇತ್ರದ ಮತದಾರರ ಆಶೀರ್ವಾದದಿಂದ
ನಾನು ಶಾಸಕನಾಗಿದ್ದೇನೆ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆಯಾಗಿದೆ ಎಂದು ಹೇಳಿದರು.

ಕರ್ನಾಟಕ ಮಕ್ಕಳ ಪಕ್ಷದ ರಾಜ್ಯಾಧ್ಯಕ್ಷ ನಾಗೇಂದ್ರ ಪ್ರಸಾದ ಮಾತನಾಡಿ, ವಿರೋಧ ಪಕ್ಷದವರು ಸಭೆ ಸಮಾರಂಭಗಳಿಗಾಗಿ
ಹಣ ಕೊಟ್ಟು ಜನರನ್ನು ಕರೆತರುತ್ತಾರೆ. ಆದರೆ ಶಾಸಕ ಅಶೋಕ ಖೇಣಿ ಅವರ ಕಾರ್ಯಕ್ರಮಕ್ಕೆ ಅಭಿಮಾನಿಗಳು, ಕಾರ್ಯಕರ್ತರು, ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಸ್ವಂತ ಹಣ ಖರ್ಚು ಮಾಡಿಕೂಂಡು ಬರುತ್ತಾರೆ ಎಂದು ಹೇಳಿದರು.

ಸಮಾಜದ ಮೇಲ್ವಿಚಾರಕರಾದ ನೆಲ್ಸನ್‌ ಸುಮಿತ್ರಾ, ಎಂ.ಪಿ. ಜಯಪಾಲ, ಎಸ್‌.ಡಿ.ಎ ಅಧ್ಯಕ್ಷ ವೈಜಿನಾಥ, ಫಾದರ್‌ ಆನಂದಕುಮಾರ ಕೆ. ಸಾನ್ನಿಧ್ಯ ವಹಿಸಿದ್ದರು. ಮುಖಂಡ ಶಿವರಾಜ ಪಾಟೀಲ ಐಸಪುರ, ಸಂದೀಪ ಉದಗೀರೆ. ಮಾರ್ಟಿನ್‌, ಸಂತೋಷ ಹಳ್ಳಿಖೇಡ, ಸಲಮಪಾಶಾ, ಶಿವಕುಮಾರ, ಯೇಸುದಾಸ ಅಮಲಾಪುರೆ, ಪ್ರಸಾದ ಮನ್ನಳ್ಳಿ ಸೇರಿದಂತೆ ಮಕ್ಕಳ ಪಕ್ಷದ ಕಾರ್ಯಕರ್ತರು ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next