ಶಿರಹಟ್ಟಿ: ಪಟ್ಟಣದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇಲ್ಲಿನ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಪಟ್ಟಣದ ನೆಹರು ವೃತ್ತದಿಂದ ಗಾಂಧಿ ವೃತ್ತದಲ್ಲಿರುವ ಮಾರುಕಟ್ಟೆಯಲ್ಲಿ ವಾರದ ಮೂರು ದಿನಗಳಲ್ಲಿ ಒಂದು ಬದಿಗೆ ಮತ್ತು ಉಳಿದ ದಿನಗಳಲ್ಲಿ ಇನ್ನೊಂದು ಬದಿಗೆ ವಾಹನ ನಿಲ್ಲಿಸುವಂತೆ ಸೂಚನಾ ಫಲಕ ಹಾಕಲಾಗಿದೆ.
ಈ ಹಿಂದೆ ಪಟ್ಟಣದಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಲಾಗುತ್ತಿತ್ತು. ಇದರಿಂದ ಇತರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದಕ್ಕೆ ಪೊಲೀಸ್ ಸಿಬ್ಬಂದಿ ನೇಮಕವೂ ಮಾಡಲಾಗಿತ್ತು. ಆದರೂ ತೊಂದರೆ ತಪ್ಪಿರಲಿಲ್ಲ. ಹೀಗಾಗಿ ಹೊಸ ಕ್ರಮ ಕೈಗೊಳ್ಳಲಾಗಿದೆ.
ಈ ಕುರಿತು ಪಿಎಸ್‌ಐ ಬಸವರಾಜ ತಿಪ್ಪರಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ ಶುಕ್ರವಾರ ಸಾರ್ವಜನಿಕರಿಗೆ ನಿಯಮ ಪಾಲಿಸುವಂತೆ ಸೂಚನೆ ನೀಡಿದರು.
ಪಟ್ಟಣದ ನೆಹರು ವೃತ್ತದಿದ ಗಾಂಧಿ ವೃತ್ತವನ್ನು ದಾಟಿ ವಾಹನ ಸವಾರರಿಗೆ ಮತ್ತು ನಿಲುಗಡೆಗೆ ಮತ್ತು ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿತ್ತು. ಇದನ್ನು ಪರಿಗಣಿಸಿದ ಪಿಎಸ್‌ಐ ಬಸವರಾಜ ತಿಪ್ಪರಡ್ಡಿ ನಿಯಮ ಪಾಲಿಸುವಂತೆ ವಾಹನ ಸವಾರರಿಗೆ ಮನವರಿಕೆ ಮಾಡಿಕೊಟ್ಟರು.
ರಸ್ತೆ ಅಗಲೀಕರಣ ಆಗುವವರೆಗೂ ಪರ್ಯಾಯ ವ್ಯವಸ್ಥೆ ಇಲ್ಲದೇ ಇರುವುದರಿಂದ ವಾಹನ ಸವಾರರು ಸಹಕರಿಸಬೇಕು. ಇತರರು ವಾಹನ ಚಲಾಯಿಸುವುದಕ್ಕೆ ಅನುಕೂಲ ಕಲ್ಪಿಸಬೇಕು. ನಿಯಮವನ್ನು ಪಾಲಿಸಬೇಕೆಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಯಿತು.