Advertisement
ಈ ಬಗ್ಗೆ ನ್ಯಾ.ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಹಿಮಾ ಕೋಹ್ಲಿ ಅವರನ್ನೊಳಗೊಂಡ ನ್ಯಾಯಪೀಠ ಶುಕ್ರವಾರ ಈ ನಿರ್ಧಾರ ಪ್ರಕಟಿಸಿದೆ. ಆದರೆ, ಸಾರ್ವಜನಿಕ ವಲಯದಲ್ಲಿ ಇರುವ ಪ್ರಮುಖರು ಕಾರ್ಪೊರೇಟ್ ಕಂಪನಿಗಳ ವಿರುದ್ಧ ಹೇಳಿಕೆ ನೀಡಿದರೆ ಅವುಗಳ ವರ್ಚಸ್ಸಿಗೆ ಚ್ಯುತಿಯಾಗುತ್ತದೆ ಮತ್ತು ಹೂಡಿಕೆಗಳಿಗೆ ಪ್ರತಿಕೂಲ ಉಂಟಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಫೆ.17ರಂದು ನೈಸ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ, ನ್ಯಾ.ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಹಿಮಾ ಕೋಹ್ಲಿ ನೇತೃತ್ವದ ನ್ಯಾಯಪೀಠ ದೇವೇಗೌಡರಿಗೆ ಹೇಳಿಕೆ ನೀಡದಂತೆ ಸೂಚನೆ ನೀಡಿತ್ತು ಹತ್ತು ವರ್ಷಗಳ ಹಿಂದೆ ಸಂದರ್ಶನವೊಂದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ನಂದಿ ಇನಾಸ್ಟ್ರಕ್ಟರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ವಿರುದ್ಧ ಮಾತನಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2021 ಜೂ.17ರಂದು ಕೆಳಹಂತದ ಕೋರ್ಟ್ ಒಂದು ದೇವೇಗೌಡರಿಗೆ 2 ಕೋಟಿ ರೂ. ಪರಿಹಾರ ನೀಡುವಂತೆ ಆದೇಶ ನೀಡಿತ್ತು.