Advertisement
– ದೇಹದಲ್ಲಿ ಕಫ ಹೆಚ್ಚಾಗುವಂತೆ ಮಾಡುವ ಮೊಸರು, ಯೋಗರ್ಟ್‌ನಿಂದ ದೂರವಿರಿ.– ಶೀತ- ಜ್ವರ ಇದ್ದಾಗ ನೀರು ಕುಡಿಯುತ್ತಾ ಇರಬೇಕು. ಆದರೆ, ಹಣ್ಣಿನ ರಸ ಸೇವಿಸುವುದು ಒಳ್ಳೆಯದಲ್ಲ. ಜ್ಯೂಸ್‌ನಲ್ಲಿರುವ ಸಕ್ಕರೆ ಅಂಶವು, ರೋಗದ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳ ಕ್ಷಮತೆಯನ್ನು ಕಡಿಮೆ ಮಾಡುತ್ತದೆ.
– ಶೀತವಿದ್ದಾಗ ನಾಲಗೆ ಜಡ್ಡುಗಟ್ಟಿ ಕುರುಕಲು ತಿಂಡಿಗಳನ್ನು ತಿನ್ನೋಣ ಅನ್ನಿಸೋದು ಸಹಜ. ಹಾಗೇನಾದ್ರೂ ನಾಲಗೆಯ ಮಾತು ಕೇಳಿದಿರೋ, ಕೆಮ್ಮು ಹೆಚ್ಚಾಗೋದು ಖಂಡಿತ.
– ನೆಗಡಿಯಿದ್ದಾಗ ಆದಷ್ಟು ಸಪ್ಪೆ ಇರುವ ಆಹಾರ ಸೇವಿಸಿ.
– ಶೀತ-ತಲೆನೋವಿಗೆ ಕಾಫಿ ರಾಮಬಾಣ ಅನ್ನುವ ಮಾತಿದೆ. ಆದರೆ, ಕಾಫಿ ಕುಡಿಯುವುದರಿಂದ ಗಂಟಲು ಒಣಗಿ, ಕೆಮ್ಮು ಹೆಚ್ಚಾಗುವ ಸಂಭವವಿದೆ.