Advertisement
ಹೊಸಮಠ ಸೇತುವೆ ಬಳಿ ಎರಡೂ ಬದಿಯ ಸಂಪರ್ಕ ರಸ್ತೆಗಳಲ್ಲಿ ನಿರ್ಮಿಸಲಾಗಿದ್ದ ಹಂಪ್ (ರಸ್ತೆ ಉಬ್ಬು) ನಿಂದಾಗಿ ಹಲವು ವಾಹನಗಳು ಅಪಘಾತಕ್ಕೀಡಾಗಿದ್ದು ವಾಹನ ಚಾಲಕರ ಆಕ್ರೋಶಕ್ಕೆ ಕಾರಣವಾಗಿತ್ತು. ಕಾರುಗಳ ಅಡಿಭಾಗ ಈ ಹಂಪ್‌ಗೆ ತಾಗಿ ಬಿಡಿ ಭಾಗಗಳಿಗೆ ಹಾನಿಯಾಗಿ ನಷ್ಟ ಸಂಭವಿಸಿದ ಘಟನೆಗಳೂ ನಡೆದಿದ್ದವು.
ಸ್ವಲ್ಪ ಮಾರ್ಪಾಟು ಮಾಡಿದ್ದೇವೆ
ನಾವು ಇಲಾಖೆಯಿಂದ ಸೂಚಿಸಲ್ಪಟ್ಟ ಅಳತೆ ಹಾಗೂ ಮಾದರಿಯಲ್ಲಿಯೇ ಹೊಸಮಠದಲ್ಲಿ ವೈಜ್ಞಾನಿಕ ರೀತಿಯಲ್ಲೇ ರಸ್ತೆ ಉಬ್ಬು ನಿರ್ಮಿಸಿದ್ದೆವು. ಅಲ್ಲಿ 30 ಕಿ.ಮೀ. ವೇಗದಲ್ಲಿ ವಾಹನಗಳನ್ನು ಚಲಾಯಿಸಬೇಕೆನ್ನುವ ಫಲಕಗಳನ್ನು ಅಳವಡಿಸಲಾಗಿತ್ತು. ಆದರೆ ವಾಹನ ಚಾಲಕರಿಗೆ ತೊಂದರೆಯಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ರಸ್ತೆ ಉಬ್ಬಿನಲ್ಲಿ ಸ್ವಲ್ಪಮಟ್ಟಿನ ಮಾರ್ಪಾಟು ಮಾಡಿದ್ದೇವೆ.
– ಪ್ರಸನ್ನ ದರ್ಬೆ, ಎಂಜಿನಿಯರ್, ಕೆಆರ್‌ಡಿಸಿಎಲ್