Advertisement

ಎಕ್ಸಲರೇಟ್‌ ಬ್ರ್ಯಾಂಡ್‌ಗೆ ಹಾರ್ದಿಕ್‌ ಪಾಂಡ್ಯ ರಾಯಭಾರಿ

08:19 AM Nov 02, 2022 | Team Udayavani |

ಬೆಂಗಳೂರು: ರಿಲಯನ್ಸ್‌ ರಿಟೇಲ್‌ ಅಥ್ಲೀಶರ್‌ ಬ್ರ್ಯಾಂಡ್‌ ಎಕ್ಸ್‌ಲರೇಟ್‌ ಅನ್ನು ಅಜಿಯೋ ವ್ಯವಹಾರದಲ್ಲಿ ಪರಿಚಯಿಸಲಿದ್ದು, ರಾಯಭಾರಿಯಾಗಿ ಕ್ರಿಕೆಟ್‌ ಆಲ್‌ರೌಂಡರ್‌ಹಾರ್ದಿಕ್‌ ಪಾಂಡ್ಯರನ್ನು ನಿಯೋಜಿಸಲಾಗಿದೆ.

Advertisement

ಕ್ರೀಡೆಯಲ್ಲಿ ಸಕ್ರಿಯವಾಗಿ ಆಸಕ್ತಿ ಹೊಂದಿರುವ ಕ್ರೀಡಾಪಟುಗಳಿಗೆ ಎಕ್ಸಲರೇಟ್‌ ಅನುಕೂಲಕರವಾಗಿದ್ದು, ಕೈಗೆಟಕುವ ದರದಲ್ಲಿ ವಿಶ್ವದರ್ಜೆಯ ಕ್ರೀಡಾ ಉಡುಪುಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಇದರಲ್ಲಿ ಕ್ರೀಡಾ ಶೂ, ಆ್ಯಥ್ಲೆಟಿಕ್‌ ಮತ್ತು ಲೈಫ್ಸ್ಟೈಲ್‌ ಪಾದರಕ್ಷೆಗಳು, ಟ್ರ್ಯಾಕ್‌ ಪ್ಯಾಂಟ್‌, ಟಿ-ಶರ್ಟ್‌, ಶಾರ್ಟ್ಸ್ ಸೇರಿ ಕ್ರೀಡಾ ಉಡುಪುಗಳು ಲಭ್ಯವಿವೆ. ಹಾಗೂ ಎಕ್ಸಲರೇಟ್‌ ಉತ್ಪನ್ನಗಳು ದೇಶದ ಪ್ರಮುಖ ಬಿ2ಬಿ ಇ ಕಾಮರ್ಸ್‌ ವೇದಿಕೆ ಅಜಿಯೋ ಬ್ಯುಜಿನೆಸ್‌ನಲ್ಲಿ ಪಡೆಯಬಹುದಾಗಿದೆ.

ಈ ಕುರಿತು ಮಾತನಾಡಿದ ರಿಲಯನ್ಸ್‌ ರೀಟೈಲ್‌ನ ಫ್ಯಾಷನ್‌ ಮತ್ತು ಲೈಸ್ಟೈಲ್‌ ಅಧ್ಯಕ್ಷ ಮತ್ತು ಸಿಇಒ ಅಖೀಲೇಶ್‌ ಪ್ರಸಾದ್‌ ಅವರು,ಎಕ್ಸಲರೇಟ್‌ ಕೈಗೆಟಕುವ ಉತ್ಪನ್ನದ ಕೊಡುಗೆ ಯೊಂದಿಗೆ ಮೌಲ್ಯ-ಪ್ರಜ್ಞೆಯ ಗ್ರಾಹಕರಿಗೆ ಸಂತೋಷವಾಗುವುದು ಖಂಡಿತ. ಡೋಂಟ್‌ ಬ್ರೇಕ್‌, ಎಕ್ಸ್‌ಲರೇಟ್‌ ಅಭಿಯಾನವು ಯುವಕರಲ್ಲಿ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.

ಅಜಿಯೋ ವ್ಯವಹಾರ, ರಿಲಯನ್ಸ್‌ ರೀಟೈಲ್‌ನ ಹೊಸ-ವಾಣಿಜ್ಯ ಅಂಗವಾಗಿದ್ದು, ದೇಶಾದ್ಯಂತ ಫ್ಯಾಷನ್‌ ಮತ್ತು ಜೀವನಶೈಲಿ ವಿಭಾಗದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳು ಮತ್ತು 500ಕ್ಕೂ ಹೆಚ್ಚು ಬ್ರ್ಯಾಂಡ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next