ಹೊಸದಿಲ್ಲಿ : ಭಾರತದಲ್ಲಿ ನಿನ್ನೆ ಬುಧವಾರದ ಭಾರೀ ಅಬ್ಬರದ ಪ್ರಚಾರದೊಂದಿಗೆ ಬಿಡುಗಡೆಗೊಂಡಿರುವ ಸ್ಯಾಮ್‌ಸಂಗ್ ಗ್ಯಾಲಕ್ಕಿ ಎಸ್8 ಮತ್ತು ಗ್ಯಾಲಕ್ಸಿ ಎಸ್8+ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ರಿಲಯನ್ಸ್ ಜಿಯೊ ಡಬಲ್ ಡಾಟಾ ಆಫರ್ ಇರುವುದು ಅದರ ಆಕರ್ಷಣೆಯನ್ನು ದುಪ್ಪಟ್ಟು ಹೆಚ್ಚಿಸಿದೆ.
2017ರ ಮೇ 5ರಂದು ಮಾರಾಟ ಆರಂಭಗೊಳ್ಳಲಿರುವ ಗ್ಯಾಲಕ್ಸಿ ಸ್ಮಾರ್ಟ್ ಫೋನ್‌ಗಳ ಬೆಲೆ ಅನುಕ್ರಮವಾಗಿ 57,900 ರೂ. ಮತ್ತು 64,900. ಇವು ಫ್ಲಿಪ್ ಕಾರ್ಟ್ ಮತ್ತು ಸ್ಯಾಮ್‌ಸಂಗ್ ಆನ್‌ಲೈನ್ ಸ್ಟೋರ್‌ಗಳ ಮೂಲಕ ಸಿಗಲಿವೆ.
ಪ್ರಮೋಶನಲ್ ಆಫರ್ ರೂಪದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಕಿ ಎಸ್8 ಮತ್ತು ಗ್ಯಾಲಕ್ಸಿ ಎಸ್8+ ಗಾಹಕರಿಗೆ ರಿಲಯನ್ಸ್ ಜಿಯೋ ನೆಟ್‌ವರ್ಕ್‌ನ ಡಬಲ್ ಡಾಟಾ ಸಿಗಲಿದೆ. ತಿಂಗಳ 309 ರೂ. ರೀಚಾರ್ಜ್ ವೆಚ್ಚದಲ್ಲಿ ಅವರು 4ಜಿ ಡಾಟಾದ 448 ಜಿಬಿ ಯನ್ನು ಮುಂದಿನ ಎಂಟು ತಿಂಗಳ ಮಟ್ಟಿಗೆ ಪಡೆಯುತ್ತಾರೆ. ಇದು ವಸ್ತುತಃ ಮುಂದಿನ ಎಂಟು ತಿಂಗಳ ಮಟ್ಟಿಗೆ ದಿನಕ್ಕೆ 2ಜಿಬಿ ಹೈ ಸ್ಪೀಡ್ 4ಜಿ ಡಾಟಾ ಸಿಕ್ಕಂತಾಗುತ್ತದೆ.
ರಿಲಯನ್ಸ್ ಜಿಯೋ ದ ಧನಾಧನ್ ಆಫರ್ ಪ್ರಕಾರ ಬಳಕೆದಾರರು 3 ತಿಂಗಳ ಅವಧಿಗೆ ತಿಂಗಳಿಗೆ 309 ರೀಚಾರ್ಜ್ ದರದಲ್ಲಿ ದಿನಕ್ಕೆ 1 ಜಿಬಿ 4ಜಿ ಹೈಸ್ಪೀಡ್ ಡಾಟಾ ಪಡೆಯುತ್ತಾರೆ. ಅಲ್ಲದೆ 509 ರೂ. ರೀಚಾರ್ಜ್ ವೆಚ್ಚದಲ್ಲಿ ಅವರು 3 ತಿಂಗಳ ಅವಧಿಗೆ 2 ಜಿಬಿ 4ಜಿ ಹೈಸ್ಪೀಡ್ ಡಾಟಾ ಪಡೆಯುತ್ತಾರೆ.