Advertisement

Reliance Jio Prime Membership ಡೆಡ್‌ಲೈನ್‌ 1 ತಿಂಗಳು ಮುಂದಕ್ಕೆ

03:36 PM Mar 27, 2017 | |

ಹೊಸದಿಲ್ಲಿ : ಮಾರ್ಚ್‌ 31ರಂದು ಕೊನೆಗೊಳ್ಳುವ ಗಡುವಿನ  ರಿಲಯನ್ಸ್‌ ಜಿಯೋ ಪ್ರೈಮ್‌ ಮೆಂಬರ್‌ಶಿಪ್ಪನ್ನು ನೀವಿನ್ನೂ  ಪಡೆದುಕೊಂಡಿಲ್ಲವಾದರೆ ಅದಕ್ಕಾಗಿ ನೀವೀಗ ನಿರಾಶರಾಗಬೇಕಿಲ್ಲ. ರಿಲಯನ್ಸ್‌ ಜಿಯೋ ಮೆಂಬರ್‌ಶಿಪ್‌ ಪಡೆಯಲು ಇರುವ ಗಡುವನ್ನು ಕಂಪೆನಿಯು ಒಂದು ತಿಂಗಳ ಮಟ್ಟಿಗೆ ವಿಸ್ತರಿಸಲಿದೆ ಎಂಬುದಾಗಿ ಗ್ಯಾಜೆಟ್‌ 360 ಡಿಗ್ರಿ ವರದಿಮಾಡಿದೆ

Advertisement

ಕಳೆದ ಫೆಬ್ರವರಿ ತಿಂಗಳಲ್ಲೇ ರಿಲಯನ್ಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು “ಎಪ್ರಿಲ್‌ 1ರಿಂದ ಜಿಯೋಗೆ ಬರುವ ಗ್ರಾಹಕರಿಗೆ ಉಳಿದೆಲ್ಲ ಸಂಸ್ಥೆಗಳಿಂತ ಶೇ.20ರಷ್ಟು ಹೆಚ್ಚು ಡಾಟಾವನ್ನು ಕೊಡಲಾಗುವುದು ಎಂದು ಪ್ರಕಟಿಸಿದ್ದರು.

ಜಿಯೋ ಪ್ರೈಮ್‌ ಮೆಂಬರ್‌ಶಿಪಕ್‌ ಪ್ಲಾನ್‌ ನಡಿ  ಗ್ರಾಹಕರು ಒಂದು ಬಾರಿಯ ಸದಸ್ಯ ಶುಲ್ಕವಾಗಿರುವ 99 ರೂ.ಗಳನ್ನು ಪಾವತಿಸಿ ಜಿಯೋದ ಈಗಿರುವ ಎಲ್ಲ ಲಾಭಗಳನ್ನು ಪಡೆಯಬಹುದಾಗಿದೆ.

ಈಗಿನ ಪ್ರಕಾರ ಮಾರ್ಚ್‌ 1ರಿಂದ ಆರಂಭಗೊಂಡಿರುವ ಜಿಯೋ ಪ್ರೈಮ್‌ ಮೆಂಬರ್‌ಶಿಪ್‌ ನೋಂದಾವಣೆಯು ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿದೆ. 

ತಿಂಗಳ ಶುಲ್ಕವನ್ನು ಪಾವಿತಸುವ ಮೂಲಕ ಜಿಯೋ ಗ್ರಾಹಕರು ಮುಂದಿನ 12 ತಿಂಗಳ ಕಾಲ ಈಗಿರುವ ಹ್ಯಾಪಿ ನ್ಯೂಇಯರ್‌ ಯೋಜನೆಯ ಎಲ್ಲ ಲಾಭಗಳನ್ನು ಪಡೆಯಬಹುದಾಗಿದೆ. 

Advertisement

ಜಿಯೋ ಪ್ರೈಮ್‌ ಮೆಂಬರ್‌ಶಿಪ್‌ ಪಡೆಯದವರು ವಾಯ್ಸ ಕಾಲ್‌ಗ‌ಳನ್ನು ಉಚಿತವಾಗಿ ಪಡೆಯುವರಲ್ಲದೆ ಅವರಿಗೆ ರೋಮಿಂಗ್‌ಚಾರ್ಜ್‌ ಕೂಡ ಇರುವುದಿಲ್ಲ.

ಜಿಯೋ ಮನಿ ಆ್ಯಪ್‌ ಮೂಲಕ ಪ್ರೈಮ್‌ ಮೆಂಬರ್‌ಶಿಪ್‌ ಶುಲ್ಕ ಪಾವತಿಸುವಾಗ 50 ರೂ. ಕ್ಯಾಶ್‌ ಬ್ಯಾಕ್‌ ಹಾಗೂ ತಿಂಗಳ ಶುಲ್ಕ  303 ರೂ ಪಾವತಿಸುವಾಗ 50 ರೂ. ಕ್ಯಾಶ್‌ ಬ್ಯಾಕ್‌ ಸೇರಿದಂತೆ ಹೊಸ ಗ್ರಾಹಕರು ಒಟ್ಟು  100 ರೂ. (50 +50 ರೂ.) ಕ್ಯಾಶ್‌ ಬ್ಯಾಕ್‌ ಪಡೆಯುವ ಮೂಲಕ 99 ರೂ.ಗಳ ಪ್ರೈಮ್‌ ಮೆಂಬರ್‌ಶಿಪ್‌ ಶುಲ್ಕವನ್ನು ಉಚಿತ ಮಾಡಿಕೊಳ್ಳಬಹುದಾಗಿದೆ ಎಂದು ಈಚೆಗಷ್ಟೇ ಜಿಯೋ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next