Advertisement

Jio ಪೋನ್ ಬಳಕೆದಾರರಿಗೆ ನೂತನ ದೀರ್ಘಾವಧಿ ವ್ಯಾಲಿಡಿಟಿ ಪ್ಲಾನ್ ಲಾಂಚ್!

06:38 AM Jan 25, 2019 | Sharanya Alva |

ಮುಂಬೈ: ಜಿಯೋ ಫೋನ್ ಬಳಕೆದಾರರಿಗೆ ಜಿಯೋ ಹೊಸದಾಗಿ ಮಾನ್ ಸೂನ್ ಹಂಗಾಮ ಹೆಸರಿನಲ್ಲಿ ಎರಡು ದೀರ್ಘವಧಿಯ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. 594 ರೂ. ಮತ್ತು 297 ರೂ.ಗೆ  ದೊರೆಯುವ ಪ್ಲಾನ್ ಗಳು ಬಳಕೆದಾರರಿಗೆ ಹೆಚ್ಚಿನ ಆಯ್ಕೆಯನ್ನು ನೀಡಲಿದೆ.

Advertisement

594 ರೂ. ಪ್ಲಾನ್‌ನಲ್ಲಿ ಜಿಯೋ ಫೋನ್ ಬಳಕೆದಾರರಿಗೆ ಅನ್ ಲಿಮಿಟೆಡ್ ಲೋಕಲ್ ಮತ್ತು ಎಸ್ ಟಿಡಿ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ, ಅಲ್ಲದೇ ನಿತ್ಯ 0.5 GB ಡೇಟಾ ವನ್ನುಪಡೆದುಕೊಳ್ಳಬಹುದಾಗಿದೆ.

ಇದು ಖಾಲಿಯಾದ ನಂತರದಲ್ಲಿ 64 Kbps ವೇಗದಲ್ಲಿ ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. 168 ದಿನಗಳ ವ್ಯಾಲಿಡಿಟಿ ಹೊಂದಿದೆ. ಅಂದರೆ ಆರು ತಿಂಗಳ ವ್ಯಾಲಿಡಿಟಿ ದೊರೆಯಲಿದೆ. ಇದಲ್ಲದೇ ಬಳಕೆದಾರರಿಗೆ ಜಿಯೋ ಸೂಟ್ ಮತ್ತು 300 SMSಗಳನ್ನು ಕಳುಹಿಸುವ ಅವಕಾಶವನ್ನು ನೀಡಲಾಗಿದೆ.

297 ರೂ.  ಪ್ಲಾನ್‌ನಲ್ಲಿ ಜಿಯೋ ಫೋನ್ ಬಳಕೆದಾರರಿಗೆ ಅನ್ ಲಿಮಿಟೆಡ್ ಲೋಕಲ್ ಮತ್ತು ಎಸ್ ಟಿಡಿ ಕರೆಗಳನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ನಿತ್ಯ 0.5 GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಇದು ಖಾಲಿಯಾದ ನಂತರದಲ್ಲಿ 64 Kbps ವೇಗದಲ್ಲಿ ಡೇಟಾವನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. 84 ದಿನಗಳ ವ್ಯಾಲಿಡಿಟಿ ಹೊಂದಿದೆ, ಅಂದರೆ ಮೂರು ತಿಂಗಳ ವ್ಯಾಲಿಡಿಟಿ ದೊರೆಯಲಿದೆ. ಇದಲ್ಲದೇ ಬಳಕೆದಾರರಿಗೆ ಜಿಯೋ ಸೂಟ್ ಮತ್ತು 300 SMSಗಳನ್ನು ಕಳುಹಿಸುವ ಅವಕಾಶವನ್ನು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next