Advertisement

ಗ್ರಾಹಕರಿಗೆ ಆಫರ್: ರಿಲಯನ್ಸ್ ಜಿಯೋದಿಂದ 444 ರೂಪಾಯಿ ಪ್ಲ್ಯಾನ್, ಪ್ರತಿದಿನ 2ಜಿಬಿ ಡಾಟಾ!

06:50 PM Jan 13, 2021 | |

ನವದೆಹಲಿ: ರಿಲಯನ್ಸ್ ಜಿಯೋ ಇದೀಗ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಲವಾರು ರಿಚಾರ್ಜ್ ಪ್ಲ್ಯಾನ್ ಗಳನ್ನು ನೀಡಿದ್ದು, ಇದರಲ್ಲಿ 444 ರೂಪಾಯಿ ಪ್ಲ್ಯಾನ್ ನಲ್ಲಿ ದಿನಂಪ್ರತಿ 2ಜಿಬಿ ಡಾಟಾ ಉಪಯೋಗಿಸಬಹುದಾಗಿದೆ ಎಂದು ಜಿಯೋ ತಿಳಿಸಿದ್ದು, ಇದು ಇತರ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದಲ್ಲಿ ಕಡಿಮೆ ಬೆಲೆಯದ್ದಾಗಿದೆ ಎಂದು ತಿಳಿಸಿದೆ.

Advertisement

ರಿಲಯನ್ಸ್ 444 ರೂಪಾಯಿ ಪ್ಲ್ಯಾನ್:

56 ದಿನಗಳ ವ್ಯಾಲಿಡಿಟಿ

2 ಜಿಬಿ ದಿನಂಪ್ರತಿ

ಗ್ರಾಹಕರು 56 ದಿನಗಳಲ್ಲಿ ಒಟ್ಟು 112 ಜಿಬಿ ಡಾಟಾ ಬಳಸಬಹುದಾಗಿದೆ

Advertisement

444 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಗ್ರಾಹಕರು ಅನಿಯಮಿತ ವಾಯ್ಸ್ ಕರೆಗಳನ್ನು (ಜಿಯೋ ನೆಟ್ ವರ್ಕ್ ಹೊರತುಪಡಿಸಿ)ಮಾಡಬಹುದಾಗಿದೆ.

ಗ್ರಾಹಕರು 100 ಎಸ್ ಎಂಎಸ್ ಸಬ್ಸ್ ಕ್ರಿಪ್ಶನ್ ಪಡೆಯಬಹುದಾಗಿದೆ.

ಇದನ್ನೂ ಓದಿ:ಮುಂಬರುವ ಚುನಾವಣೆಯಲ್ಲೂ ಬಿಜೆಪಿ ಗೆಲುವಿನ ಓಟ ಮುನ್ನಡೆಯಲಿದೆ : ಅರುಣ್ ಸಿಂಗ್

444 ರೂಪಾಯಿ ಪ್ಲ್ಯಾನ್ ನಂತೆ, ಇತರ ರಿಚಾರ್ಜ್ ಪ್ಲ್ಯಾನ್ ಗಳ ವಿವರ: 598 ರೂಪಾಯಿ, 2,599 ರೂಪಾಯಿ, 599 ರೂಪಾಯಿ ಹಾಗೂ 249 ರೂಪಾಯಿ ದರ ನಿಗದಿಪಡಿಸಲಾಗಿದೆ. ಇವೆಲ್ಲದರಲ್ಲಿಯೂ ದಿನಂಪ್ರತಿ 2 ಜಿಬಿ ಡಾಟಾ ಬಳಸಬಹುದಾಗಿದೆ.

2,399 ರೂಪಾಯಿ ರಿಚಾರ್ಜ್ ಮಾತ್ರ ಒಂದು ವರ್ಷದ ವ್ಯಾಲಿಡಿಟಿ ಹೊಂದಿದ್ದು, ಎಲ್ಲಾ ನೆಟ್ ವರ್ಕ್ ಗಳಿಂದಲೂ ಅನಿಯಮಿತ ಕರೆಗಳನ್ನು ಮಾಡಬಹುದಾಗಿದೆ ಎಂದು ಜಿಯೋ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next