Advertisement

ಜಿಯೋ ನೀಡುತ್ತಿದೆ ಗ್ರಾಹಕ ಸ್ನೇಹಿ ಪ್ರೀಪೇಯ್ಡ್ ಪ್ಲ್ಯಾನ್ಸ್..! ಇಲ್ಲಿದೆ ಸಂಪೂರ್ಣ ಮಾಹಿತಿ

02:00 PM Jul 29, 2021 | Team Udayavani |

ನವ ದೆಹಲಿ : ಟೆಲಿಕಾಮ್ ನೆಟ್ ವರ್ಕ್ ಗಳ ದೈತ್ಯ ಸಂಸ್ಥೆ ರಿಲಯನ್ಸ್ ಜಿಯೋ ಮತ್ತೊಂದು ಗ್ರಾಹಕ ಸ್ನೇಹಿ ಯೋಜನೆಯನ್ನು ಜಾರಿಗೆ ತಂದಿದೆ. 3,499 ರೂಪಾಯಿಯೇ ಹೊಸ ಪ್ರಿ ಪೇಯ್ಡ್ ಪ್ಯಾಕೇಜ್ ಘೋಷಿಸಿರುವ ಜಿಯೋ, ತನ್ನ ಗ್ರಾಹಕರಿಗೆ ಭರಪೂರ ಪ್ರಯೋಜನಗಳನ್ನು ನೀಡುತ್ತಿದೆ.

Advertisement

ರಿಲಯನ್ಸ್ ಜಿಯೋ ನೀಡಿದ 3,499 ರೂಪಾಯಿಯ ಹೊಸ ಯೋಜನೆ ವಾರ್ಷಿಕ ಯೋಜನೆಯಾಗಿದ್ದು, 365 ದಿನಗಳ ಮಾನ್ಯತೆಯನ್ನು ಹೊಂದಿದೆ. ಗ್ರಾಹಕರಿಗೆ ಈ ಯೋಜನೆಯಿಂದಾಗಿ ಪ್ರತಿದಿನ 3 ಜಿಬಿ ಡೇಟಾ ದೊರಕುತ್ತದೆ ಮಾತ್ರವಲ್ಲದೆ. ಒಟ್ಟಾರೆ 1,095 ಜಿಬಿ ಡೇಟಾ ನೀಡುತ್ತಿದೆ. ಗ್ರಾಹಕರು ದೈನಂದಿನ ಡೇಟಾ ಮುಗಿಸಿದರು 64ಕೆಬಿಪಿಎಸ್ ಸ್ಪೀಡ್ ನಲ್ಲಿ ಇಂಟರ್ ನೆಟ್ ನನ್ನು ಬಳಸಬಹುದಾಗಿದೆ. ಉಳಿದಂತೆ ಅನಿಯಮಿತ ಕರೆ ಸೌಲಭ್ಯ, ದಿನಕ್ಕೆ 100 ಎಸ್ಎಮ್ಎಸ್ ಉಚಿತವಾಗಿ ನೀಡುತ್ತಿದೆ. ಜಿಯೋಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ನಂತಹ ವಿವಿಧ ಅಪ್ಲಿಕೇಶನ್ ಪ್ರವೇಶಿಸಲು ಅವಕಾಶ ನೀಡುತ್ತಿದೆ.

ಇದನ್ನೂ ಓದಿ : ಸಂಪುಟ ಕುರಿತು ಸಿಎಂ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿರಬೇಕು: ಮುರುಗೇಶ್ ನಿರಾಣಿ

ಇನ್ನು, 2,399 ಮತ್ತು 2,599 ರೂಗಳ ಯೋಜನೆ ಕೂಡ ವಾರ್ಷಿಕ ಯೋಜನೆಯಾಗಿದ್ದು, 365 ದಿನಗಳ ಯೋಜನೆ ಇದಾಗಿದೆ. ಇವೆರಡು ಯೋಜನೆಗಳು  ಪ್ರತಿದಿನ 2ಜಿಬಿ ಡೇಟಾ ಒದಗಿಸುತ್ತದೆ. ಮಾತ್ರವಲ್ಲದೇ ಅನಿಯಮಿಕ ಕರೆ, 100 ಎಸ್ ಎಮ್ ಎಸ್ ಹಾಗೂ ಜಿಯೋ ಆ್ಯಪ್ ಪ್ರವೇಶವನ್ನು ಕೂಡ ಈ ಯೋಜನೆ ನೀಡುತ್ತದೆ.

2,599 ರೂಪಾಯಿಯ ಯೋಜನೆಯು ತನ್ನ ಗ್ರಾಹಕರಿಗೆ ಪ್ರತಿದಿನ 2 ಜಿಬಿ ಇಂಟರ್ ನೆಟ್  ಡೇಟಾ, ಡಿಸ್ನಿ+ ಹಾಟ್ ​​ಸ್ಟಾರ್ ವಿಐಪಿ ಚಂದಾದಾರಿಕೆ ನೀಡುತ್ತದೆ.

Advertisement

ಮಾತ್ರವಲ್ಲದೇ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಜಿಯೋ ಅಗ್ಗದ ಯೋಜನೆಗಳನ್ನು ಕೂಡ ನೀಡುತ್ತಿದ್ದು, 127 ರೂ, 247 ರೂ, 447 ರೂ, 597 ರೂ ಮತ್ತು 2,397 ರೂಪಾಯಿಗಳ ಯೋಜನೆಗಳನ್ನು ಕೂಡ ಇತ್ತೀಚೆಗೆ ಪರಿಚಯಿಸಿದೆ.

ಇದನ್ನೂ ಓದಿ : ಬೊಮ್ಮಾಯಿ ರಾಜ್ಯ‘ಭಾರ’..! ತಂದೆಗಾದ ಸ್ಥಿತಿ ಮಗನಿಗೂ ಆಗಬಹುದೇ..?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next