Advertisement
ಜಿಯೋ ನೆಟ್ ವರ್ಕ್ ಇದೀಗ ಅಕ್ಟೋಬರ್ ತಿಂಗಳ 9ರ ಬಳಿಕ ರಿಚಾರ್ಚ್ ಮಾಡಿಕೊಳ್ಳುವವರಿಗೆ ಯೋಜನೆಯನ್ನು ಬದಲಾಯಿಸಿದೆ. ಜಿಯೋ ಸಂಖ್ಯೆ ಹೊರತುಪಡಿಸಿದ ಬೇರೆ ನೆಟ್‌ವರ್ಕ್‌ಗೆ ಕರೆ ಮಾಡಿದರೆ 6 ಪೈಸೆಯನ್ನು ಚಾರ್ಜ್ ಮಾಡಲಾಗುತ್ತದೆ. ಇದು ಪರೋಕ್ಷವಾಗಿ ಜಿಯೋ ಟು ಜಿಯೋ ಗ್ರಾಹಕರಿಗೆ ಮಾತ್ರ ಅನುಕೂಲಮಾಡಿಕೊಡುತ್ತದೆ.
ಏರ್‌ಟೆಲ್ ಹೊಸ ಮಾರ್ಕೆಟಿಂಗ್ ಯೋಜನೆ ಹಾಕಿಕೊಂಡಿದ್ದು ಪರೋಕ್ಷವಾಗಿ ಜಿಯೋದ ಕಾಲೆಳೆದಿದೆ. “ಕೆಲವರಿಗೆ ಅನಿಯಮಿತ ಎಂದರೆ ಬೇರೇನೋ ಅರ್ಥ ಇದ್ದಂತಿದೆ. ಆದರೆ ನಮಗೆ (ಏರ್‌ಟೆಲ್) “ಅನ್‌ಲಿಮಿಟೆಡ್ ವಾಯ್ಸ ಕಾಲ್’ ಎಂದರೆ ಗ್ರಾಹಕರು ಯಾವುದೇ ಸಂಖ್ಯೆಗೆ ಉಚಿತವಾಗಿ ಕರೆ ಮಾಡುವುದೇ ಆಗಿದೆ. ಏರ್‌ಟೆಲ್‌ಗೆ ಬದಲಾಯಿಸಿಕೊಳ್ಳಿ’ ಎಂದು ಹೇಳಿದೆ.
Related Articles
ವೊಡಾಫೋನ್ ಏನಂದಿತು?
“ರಿಲ್ಯಾಕ್ಸ್, ನಮ್ಮ ಕಡೆಯಿಂದ ಅನ್ ಲಿಮಿಡೆಟ್ ಕರೆಗಳು ಯಾವುದೇ ಷರತ್ತಿಲ್ಲದೆ ಮುಂದುವರಿಯಲಿದೆ. ನಾವೂ ಈಗಾಗಲೇ ನೀಡಿದ ಭರವಸೆಯಂತೆ ಅದನ್ನು ಅನುಭವಿಸಿ’ ಎಂದು ವೊಡಾಪೋನ್ ಹೇಳಿದೆ.
Advertisement
ತಾನು ಈಗಾಗಲೇ ಜಾರಿಗೊಳಿಸಿದ ಪರಿಷ್ಕೃತ ಯೋಜನೆಯನ್ನು ಜಿಯೋ ಸಮರ್ಥಿಸಿ ಟ್ವೀಟ್ ಮಾಡಿದೆ. ನಿಮಿಷಕ್ಕೆ 6 ಪೈಸೆಯನ್ನು “ಏರ್ ಟೋಲ್’ ಎಂದು ಅದು ಹೇಳಿದೆ. ಬೇರೆ ನೆಟ್ ವರ್ಕ್‌ಗಳಿಗೆ ಮಾಡುವ ಕರೆಗೆ ಟ್ರಾಯ್ ನಿಯಮದಂತೆ “ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್’ (ಐಯುಸಿ) ವಿಧಿಸಬಹುದಾಗಿದೆ ಎಂದು ಹೇಳಿದೆ.