Advertisement

‘ಅಭೇದ್ಯ ಅಲ್ಲ ಭೇದ’ಕೃತಿ ಬಿಡುಗಡೆ

11:54 AM Oct 29, 2017 | Team Udayavani |

ಮಹಾನಗರ: ಪಿ. ವಿ. ಪ್ರದೀಪ್‌ ಕುಮಾರ್‌ ಅವರು 55 ಕಾದಂಬರಿ ಬರೆದು ಸಾಹಿತ್ಯ ಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಅವರ ಎಲ್ಲ ಕಾದಂಬರಿಗಳಲ್ಲಿ ಮನಸ್ಸು ಅರಳುವ ಕಥಾವಸ್ತುಗಳಿರುತ್ತವೆ ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

Advertisement

ಕಥಾಬಿಂದು ಸಾಹಿತ್ಯ-ಸಾಂಸ್ಕೃತಿಕ ವೇದಿಕೆಯ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ-2017 ಕಾರ್ಯಕ್ರಮದಲ್ಲಿ
ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಮುಂಬಯಿಯ ಹಿರಿಯ ಸಾಹಿತಿ ಎಂ. ಪಿ. ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಭುವನಾಭಿರಾಮ ಉಡುಪ ಉದ್ಘಾಟಿಸಿದರು. ಸಿನಿ ಪತ್ರಕರ್ತೆ ಉಷಾ ಉಡುಪಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಶಿವಾನಂದ ಕರ್ಕೇರ, ಬೆಟ್ಟಂಪಾಡಿ ಸುಂದರ ಶೆಟ್ಟಿ ಅತಿಥಿಗಳಾಗಿದ್ದರು.

ಕೃತಿ ಬಿಡುಗಡೆ 
ಪಿ. ವಿ. ಪ್ರದೀಪ್‌ ಕುಮಾರ್‌ ಅವರ ‘ಅಭೇದ್ಯ ಅಲ್ಲ ಭೇದ’ ಕೃತಿಯನ್ನು ಮೂಡಬಿದಿರೆ ಧನಮಲಕ್ಷ್ಮಿ ಕ್ಯಾಶ್ಯು
ಇಂಡಸ್ಟ್ರೀಸ್‌ನ ಶ್ರೀಪತಿ ಭಟ್‌ ಬಿಡುಗಡೆಗೊಳಿಸಿದರು. ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸ್ಮರಣ ಸಂಚಿಕೆಯನ್ನು ಡಾ| ಮಚ್ಚೇಂದ್ರನಾಥ್‌ ಬಿಡುಗಡೆಗೊಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ
ಮೇಘನಾ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಿತು.ಸುಧಾ ನಾಗೇಶ್‌ ಮತ್ತು
ಪ್ರಿಯಾ ಹರೀಶ್‌ ಕಾರ್ಯಕ್ರಮ ನಿರೂಪಿಸಿದರು. 

Advertisement

ಪ್ರಶಸ್ತಿ ಪ್ರದಾನ
ಶಿಮಂತೂರು ಚಂದ್ರಹಾಸ ಸುವರ್ಣ (ಹಿರಿಯ ಸಾಹಿತಿ), ಹರೀಶ್‌ ಸುರಲಾಯ ಒಡಂಬೆಟ್ಟು (ಕವಿ), ಜನಾರ್ದನ್‌ ಭಟ್‌ (ಧಾರ್ಮಿಕ), ತಾರನಾಥ್‌ ಬೋಳಾರ (ಮಾಜಿ ಸೈನಿಕ), ಬಿ. ವಿಠ್ಠಲ್ ಶೆಟ್ಟಿ (ಹಿರಿಯ ರಂಗಭೂಮಿ ಕಲಾವಿದ),
ಪ್ರಭಾ ಎನ್‌. ಸುವರ್ಣ (ಸಮಾಜಸೇವೆ), ಯು. ಕವಿತಾ ಆರ್‌. ಕಿಣಿ (ತಬಲಾ ವಾದನ), ನೈತಿಕ್‌, ಗಗನ್‌ ಜಿ. ಪ್ರಭು, ಗ್ರಹಿತ್‌ ಜಿ. ಪ್ರಭು, ಸಾರ್ಥಕ್‌ ಶೆಣೈ, ಪ್ರಿಹಾಲಿ ಹರೀಶ್‌ (ಬಹುಮುಖ ಪ್ರತಿಭೆಗಳು) ಅವರನ್ನು ಯುವ ಸೌರಭ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ವಾತಿ ಎನ್‌. ಎಸ್‌., ಸಾತ್ವಿಕ್‌ ಗಣೇಶ್‌ ಎನ್‌. ಎಸ್‌. ಅವರಿಗೆ ಪ್ರಶಸ್ತಿ ಪ್ರದಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next