Advertisement
ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ವತಿಯಿಂದ ಮಾ. 20ರಂದು ಅಂಧೇರಿ ಪಶ್ಚಿಮದ ಮೊಗವೀರ ಭವನದ ಎಂವಿಎಂ ಶಾಲಿನಿ ಜಿ. ಶಂಕರ್ ಸೆಂಟರ್‌ನ ಸಭಾಗೃಹದಲ್ಲಿ ಆಯೋಜಿಸಿದ್ದ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಅಶೋಕ್ ಸುವರ್ಣ ಅವರು ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಾರೈಸಿದರು.
Related Articles
Advertisement
ಪ್ರಾಮಾಣಿಕತೆ, ಎಲ್ಲೂ ಸ್ವಹಿತಕ್ಕಾಗಿ ಹೋರಾಡದೆ, ಕುರ್ಚಿಗಾಗಿ ಹಾತೊರೆಯದೆ ಇರುವುದು ಅಶೋಕ್ ಸುವರ್ಣರ ದೊಡ್ಡ ಗುಣ. ಅವರೋರ್ವ ರೋಲ್‌ಮೋಡೆಲ್. ಅವರ ಕೃತಿಯನ್ನು ಬರೆಯುವಲ್ಲಿ ನನಗೆ ಬಹಳ ಸಂತೋಷವಾಗಿದೆ ಎಂದು ಕೃತಿಕರ್ತೃ ಗೋಪಾಲ ತ್ರಾಸಿ ತಿಳಿಸಿದರು.
85ರ ದಶಕದಲ್ಲಿ ಬರೆದಂತಹ ಅಂದಿನ ಲೇಖನಗಳು ಇಂದೂ ಪ್ರಸ್ತುತ ಅನ್ನುವುದು ಕೃತಿಯ ಹೆಗ್ಗಳಿಕೆ. ಬರವಣಿಗೆಯನ್ನು ಶಿಸ್ತು ಮತ್ತು ವಿಷಮಕ್ಕೆ ಒತ್ತು ಕೊಟ್ಟಿರುವುದನ್ನು ಗಮನಿಸಬಹುದು. ಈ ಕೃತಿ ಒಂದು ಗೈಡ್ ತರ. ನಮ್ಮ ಜತೆ ಸದಾ ಇರಲಿದೆ ಎಂದು ಪರಿಕ್ರಮಣ ಕೃತಿಯನ್ನು ಪರಿಚಯಿಸಿದ ಕವಿ, ಲೇಖಕಿ ಡಾ| ಜಿ. ಪಿ. ಕುಸುಮಾ ಅಭಿಪ್ರಾಯಿಸಿದರು.
ಮುಂಬಯಿ ಕನ್ನಡಿಗರು ಮರೆಯ ಲಾರದ, ಮರೆಯಬಾರದ ವ್ಯಕ್ತಿತ್ವ ಅಶೋಕ್ ಸುವರ್ಣ ಅವರದ್ದು. ಅಶೋಕ್ ಅವರು ತಮ್ಮ ಬದುಕನ್ನು ಕಟ್ಟಿಕೊಂಡ ಬಗೆಯನ್ನು ಲೇಖಕರು ಬಹಳ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಅಶೋಕ್ ಅವರ ಜೀವನ ಕಥೆಯನ್ನು ಸರಳವಾದ ಭಾಷೆಯಲ್ಲಿ ಸವಿಸ್ತಾರವಾಗಿ ಕಟ್ಟಿ ಕೊಟ್ಟಿರುವ ಗೋಪಾಲ ತ್ರಾಸಿ ಅವರು ಅಭಿನಂದನಾರ್ಹರು ಎಂದು ಲೇಖಕ, ಸಂಘಟಕ ಜಿ. ಟಿ. ಆಚಾರ್ಯ ತಿಳಿಸಿದರು.
ಈ ದಿನ ನನ್ನ ಬದುಕಿನಲ್ಲಿ ಅವಿಸ್ಮರಣೀಯ ದಿನ. ಕೃತಿ ಬರುವುದಕ್ಕೆ ಸಹಕರಿಸಿದ ಎಲ್ಲರಿಗೂ ವಂದನೆಗಳು ಎಂದು ಅಶೋಕ್ ಸುವರ್ಣ ತಿಳಿಸಿದರು. ಎಂವಿಎಂ ವಿದ್ಯಾಲಯದ ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಕೆ. ಸಾಲ್ಯಾನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಂಘಟಕ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಅತಿಥಿ
ಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ ದರು. ಮೊಗವೀರ ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಎಲ್. ಸಾಲ್ಯಾನ್, ಮೊಗವೀರ ಮಾಸಿಕದ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮಣ್ ಶ್ರೀಯಾನ್, ದೇವರಾಜ್ ಬಂಗೇರ, ಪ್ರೀತಿ ಹರೀಶ್ ಶ್ರೀಯಾನ್‌ಅತಿಥಿ ಗಳಿಗೆ ಪುಷ್ಪಗುತ್ಛಗಳನ್ನಿತ್ತು ಗೌರವಿಸಿದರು. ಮೊಗವೀರ ಮಾಸಿಕದ ವ್ಯವಸ್ಥಾಪಕ ದಯಾನಂದ ಬಂಗೇರ ವಂದಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾಶೀಲ ರಾಗಿರುವ ಮುಂಬಯಿ ತುಳು, ಕನ್ನಡಿಗರು ಸಾಹಿತ್ಯ ಕ್ಷೇತ್ರದಲ್ಲೂ ವಿಶೇಷ ಸಾಧನೆಗಳನ್ನು ಮಾಡಿದ್ದಾರೆ. ಸಮಾಜದ ಶ್ರೇಯೋನ್ನತಿಗೆ ಇಂತಹ ಲೇಖಕರ ಪಾತ್ರ ಬಹಳ ಮಹತ್ವದ್ದು. ಅಶೋಕ್ ಸುವರ್ಣ ಅವರು ಮೊಗವೀರ ವ್ಯವಸ್ಥಾಪಕ ಮಂಡಳಿಯ ಮುಖಾಂತರ ಮಾಡುತ್ತಿರುವ ಸಾಹಿತ್ಯಕ, ಸಮಾಜ ಸೇವೆ ಅಭಿನಂದನೀಯ. –ಕೃಷ್ಣಕುಮಾರ್ ಎಲ್. ಬಂಗೇರ ಅಧ್ಯಕ್ಷರು, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ
ಒಟ್ಟು ಮುಂಬಯಿ ಬದುಕನ್ನು ಕಟ್ಟಿಕೊಡುವಲ್ಲಿ ಹಲವಾರು ಮಂದಿಯ ಕೃತಿಗಳು ನಮ್ಮೆದುರಿಗೆ ಬರುತ್ತವೆ. ಅದರಲ್ಲೂ ಓರ್ವ ವ್ಯಕ್ತಿಯ ಬದುಕನ್ನು ಚಿತ್ರಿಸುವಾಗ ಗೋಪಾಲ್ ತ್ರಾಸಿ ಬಹಳ ಜಾಗರೂಕತೆ ವಹಿಸಿದ್ದಾರೆ. ಅಶೋಕ್ ಸುವರ್ಣ ಸಾಹಿತಿಯಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಸಮಾಜವನ್ನು ಒಂದುಗೂಡಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದ್ದಾರೆ. ಅವರಂತಹ ಸಾಂಸ್ಕೃತಿಕ ನಾಯಕತ್ವದ ಗುಣವುಳ್ಳವರ ಅಗತ್ಯತೆ ನಮಗಿದೆ. –ಡಾ| ಭರತ್ ಕುಮಾರ್ ಪೊಲಿಪು ರಂಗಕರ್ಮಿ
ಮಹಾರಾಷ್ಟ್ರ ಸರಕಾರದಿಂದ ಅಧಿಕೃತ ಐಡಿ ಕಾರ್ಡ್ ಹೊಂದಿರುವ ಮೊದಲ ಕನ್ನಡಿಗ ಪತ್ರಕರ್ತ ಅಶೋಕ್ ಸುವರ್ಣರ ಸಾಧನೆ ಅಪಾರ. ಮುಂಬಯಿ ಪತ್ರಿಕೋದ್ಯಮದಲ್ಲಿ ಅವರದ್ದು ಮಾದರಿ ವ್ಯಕ್ತಿತ್ವ. ಇವರ ಸಾಧನೆಗಳು ಮುಂದಿನ ಪೀಳಿಗೆಗೆ ಅಗತ್ಯವಾಗಿ ತಿಳಿಯಬೇಕಾಗಿದೆ. ಯುವ ಪತ್ರಕರ್ತರಿಗೆ ಇವರೋರ್ವ ಆದರ್ಶಪ್ರಾಯರು. ಅವರಿಂದ ಇನ್ನಷ್ಟು ಸಾಹಿತ್ಯಕ, ಸಾಮಾಜಿಕ ಸೇವೆಗಳು ನಡೆಯುತ್ತಿರಲಿ. –ರೋನ್ಸ್ ಬಂಟ್ವಾಳ್, ಅಧ್ಯಕ್ಷರು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ