Advertisement

“ತುಳುನಾಡಿನ ಕಟ್ಟುಕಟ್ಟಳೆಗಳು’ 6ನೇ ಆವೃತ್ತಿ ಬಿಡುಗಡೆ

03:45 PM Apr 27, 2017 | |

ಮುಂಬಯಿ: ನಗರದ ಹಿರಿಯ ಲೇಖಕರಾದ ಕ್ಯಾಟರಿಂಗ್‌ ಉದ್ಯಮಿ, ಅನ್ನದಾತ ರಾಘು ಪಿ. ಶೆಟ್ಟಿ ಅವರ “ತುಳುನಾಡಿನ ಕಟ್ಟು ಕಟ್ಟಳೆಗಳು’ ಕೃತಿಯ ಆರನೇ ಆವೃತ್ತಿಯ ಬಿಡುಗಡೆ ಕಾರ್ಯಕ್ರಮವು ಎ. 14ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ನಡೆಯಿತು.

Advertisement

ಸಂಘದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಆಯೋಜಿಸಲಾಗಿರುವ ಬಿಸುಪರ್ಬ ಸಂದರ್ಭದಲ್ಲಿ ಗಣ್ಯರು ಕೃತಿಯನ್ನು  ಬಿಡುಗಡೆಗೊಳಿಸಿದರು. ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ವಿಶ್ವ ಬಂಟ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷ ಡಾ| ಪಿ. ವಿ. ಶೆಟ್ಟಿ, ಎ. ಸಿ. ಭಂಡಾರಿ, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಐ. ಆರ್‌. ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಕುತ್ಯಾರ್‌, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ್‌ ಭಂಡಾರಿ, ಜತೆ ಕೋಶಾಧಿಕಾರಿ ಮಹೇಶ್‌ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಲತಾ ಜಯರಾಮ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿವೇಕ್‌ ವಿ. ಶೆಟ್ಟಿ, ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ, ಸಂಘದ ಪ್ರಶಸ್ತಿ ಪುರಸ್ಕೃತೆ, ಯಕ್ಷಗಾನ ಕಲಾವಿದೆ ಪೂರ್ಣಿಮಾ ಯತೀಶ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಈ ಕೃತಿಯು ಈಗಾಗಲೇ ಐದು ಮುದ್ರಣಗಳನ್ನು ಕಂಡಿದ್ದು, ಇದರ ಇಂಗ್ಲಿಷ್‌ ಆವೃತ್ತಿಯೂಪ್ರಕಟಗೊಂಡಿದೆ. ಕೃತಿಯಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತಾ ಹೋಗಿರುವುದಲ್ಲದೆ, ಹೊಸ ವಿಷಯಗಳು ಸೇರ್ಪಡೆಗೊಂಡಿವೆ. ಕೃತಿಯನ್ನು ಈಗಾಗಲೇ ಸಾವಿರಾರು ಮಂದಿ ಮೆಚ್ಚಿಕೊಂಡಿದ್ದು, ಇದರ ಪ್ರಯೋಜನವನ್ನು ಪಡೆದಿದ್ದಾರೆ. ಬಹುಜನರ ಅಪೇಕ್ಷೆಯ ಮೇರೆಗೆ “ತುಳುನಾಡಿನ ಕಟ್ಟುಕಟ್ಟಲೆಗಳು’ ಕೃತಿಯನ್ನು ಹೊರತರಲು ಲೇಖಕ, ಸಮಾಜ ಸೇವಕ ರಾಘು ಪಿ. ಶೆಟ್ಟಿ ಅವರು ಮುಂದಾಗಿದ್ದು,  ಕೃತಿಯನ್ನು ವ್ಯಾಪಾರಿ ದೃಷ್ಟಿಯಿಂದ ಪ್ರಕಟಿಸುತ್ತಿಲ್ಲ, ಸೇವಾವೃತ್ತಿ ಎಂದುನಂಬಿ ಮಾಡುತ್ತಿದ್ದೇನೆ ಎಂದು ಲೇಖಕರು ತಿಳಿಸಿದರು. ವೃತ್ತಿಯಲ್ಲಿ ಕ್ಯಾಟರಿಂಗ್‌ ಉದ್ಯಮಿ
ಯಾಗಿರುವ ಅವರು ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ವಿಶೇಷ ಒಲವನ್ನು ಬೆಳೆಸಿ
ಕೊಂಡಿರುವ ಅವರು ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕಾಣಿಕೆಯನ್ನು ನೀಡಿದ್ದಾರೆ. ಅವರ ಅರವತ್ತರ ನಡಿಗೆ ಎಂಬ ಕೃತಿಯು ಬೆಳಕು ಕಂಡಿದೆ. 

ಹಲವಾರು ಕಾರ್ಯಕ್ರಮಗಳಲ್ಲಿ ಉಚಿತ ವಾಗಿ ಅನ್ನದಾನ ಮಾಡಿದ ಶ್ರೇಯಸ್ಸು ಅವರಿಗಿದೆ. ಹಾಗಾಗಿ ಅವರಿಗೆ ಅನ್ನದಾತ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಗಿದೆ. ನಾಟಕ ಮತ್ತು ಯಕ್ಷಗಾನದಲ್ಲಿ ವಿಶೇಷ ಆಸಕ್ತಿಯನ್ನು ಅವರು ಹೊಂದಿದ್ದಾರೆ. ಇದೇ ಸಂದರ್ಭದಲ್ಲಿ ಅತಿಥಿ-ಗಣ್ಯರು ರಾಘು ಪಿ. ಶೆಟ್ಟಿ ಅವರನ್ನು ಅಭಿನಂದಿಸಿದರು.  

   ಚಿತ್ರ-ವರದಿ: ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next