Advertisement

ಪತ್ರಕರ್ತರ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

10:32 PM Jun 21, 2019 | mahesh |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಜು. 1ರಂದು ಕುದುಲ್‌ ರಂಗರಾವ್‌ ಪುರಭವನದಲ್ಲಿ ಆಯೋಜಿಸಿರುವ “ಜಿಲ್ಲಾ ಪತ್ರಕರ್ತರ ಸಮ್ಮೇಳನ 2019’ರ ಆಮಂತ್ರಣ ಪತ್ರಿಕೆ ಪತ್ರಿಕಾ ಭವನದಲ್ಲಿ ಮಂಗಳವಾರ ಬಿಡುಗಡೆಗೊಂಡಿತು.

Advertisement

ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಸಮಾಜದ ತಪ್ಪನ್ನು ತಿದ್ದುವ, ಜನರಲ್ಲಿ ತಿಳಿವಳಿಕೆ ಮೂಡಿಸುವ ಪತ್ರ ಕರ್ತರಿಗೆ ರಕ್ಷಣೆ ಬೇಕಾಗಿದೆ. ಒಳ್ಳೆಯ ವಿಚಾರವನ್ನು ಸಮಾಜದ ಮುಂದಿಡುವ ಜತೆಗೆ ತಪ್ಪು ನಡೆದಾಗ ಎಚ್ಚರಿಸುವ ಕೆಲಸ ವನ್ನು ಪತ್ರಕರ್ತರು ಸಮರ್ಥವಾಗಿ ನಿಭಾ ಯಿಸುತ್ತಿದ್ದಾರೆ. ಪತ್ರಕರ್ತರಿಗೆ ಭದ್ರತೆ, ಗೌರವ ನೀಡಬೇಕು. ಈ ನಿಟ್ಟಿನಲ್ಲಿ ಪತ್ರ ಕರ್ತರ ಸಮ್ಮೇಳನ ಪೂರಕವಾಗಲಿ ಎಂದರು.

ಮುಖ್ಯ ಅತಿಥಿಯಾಗಿದ್ದ ದ.ಕ.ಜಿ. ಕಸಾಪ ಅಧ್ಯಕ್ಷ ಎಸ್‌. ಪ್ರದೀಪಕುಮಾರ್‌ ಕಲ್ಕೂರ ಮಾತನಾಡಿದರು. ಸಮ್ಮೇಳನದ ರೂಪುರೇಷೆ, ಕಾರ್ಯಕ್ರಮದ ವಿವರದ ಬಗ್ಗೆ ಸಂಘದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್‌ ಇಂದಾಜೆ ಮಾಹಿತಿ ನೀಡಿದರು.

ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ಆನಂದ ಶೆಟ್ಟಿ , ಮಂಗಳೂರು ಪ್ರಸ್‌ಕ್ಲಬ್‌ ಅಧ್ಯಕ್ಷ ಅನ್ನು ಮಂಗಳೂರು, ಸಮ್ಮೇಳನದ ಸಂಚಾಲಕ ಜಗನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. ಸತ್ಯಾ ಸ್ವಾಗತಿಸಿದರು. ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಜಿತೇಂದ್ರ ಕುಂದೇಶ್ವರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next