ಹೊಸದಿಲ್ಲಿ: ಲಾಕ್‌ಡೌನ್ ಅವಧಿಯಲ್ಲಿ ಮಕ್ಕಳಿಗೆ ಮನೆಯಲ್ಲೇ ಪರ್ಯಾಯ ಕಲಿಕಾ ವಿಧಾನವನ್ನು ಪರಿ ಚಯಿಸುವ ಸಲುವಾಗಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಗುರುವಾರ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡಿದೆ.
ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು 1ರಿಂದ 5ನೇ ತರಗತಿಯ ಮಕ್ಕಳಿ ಗಾಗಿ 8 ವಾರಗಳ ಈ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದಾರೆ.
ಮನೆಯಲ್ಲೇ ಇರುವ ಮಕ್ಕಳಿಗೆ ಶಿಕ್ಷಣ ನೀಡಲು ಶಿಕ್ಷಕರು ತಂತ್ರಜ್ಞಾನ ಮತ್ತು ಸಾಮಾ ಜಿಕ ಮಾಧ್ಯಮಗಳನ್ನು ಹೇಗೆ ಬಳಸಿ ಕೊಳ್ಳ ಬೇಕು ಎಂಬ ವಿಸ್ತೃತ ಮಾರ್ಗ ಸೂಚಿ ಯನ್ನು ಈ ಕ್ಯಾಲೆಂಡರ್ ಒಳಗೊಂಡಿದೆ. ಇದೇ ರೀತಿ ಶಾಲಾ ಶಿಕ್ಷಣದ ಎಲ್ಲ ಹಂತಗಳಿಗೂ ಅನ್ವಯವಾಗುವಂತೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರನ್ನು ಎನ್‌ಸಿಇಆರ್‌ಟಿ ಅಭಿವೃದ್ಧಿ ಪಡಿಸಿದೆ. ಈ ಹಿಂದೆ ಮಂಡಳಿಯು ಪ್ರಾಥ ಮಿಕ, ಹಿ.ಪ್ರಾ. ಮತ್ತು ಮಾಧ್ಯಮಿಕ ತರಗತಿಗಳಿಗೂ ಕ್ಯಾಲೆಂಡರ್ ಅಭಿ ವೃದ್ಧಿಪಡಿಸಿತ್ತು.
ಸಕಾರಾತ್ಮಕತೆ ಬೆಳೆಸಲು ಸಹಾಯಕ
ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ ಸಚಿವ ನಿಶಾಂಕ್, ಆನ್‌ಲೈನ್ ಶಿಕ್ಷಣ ನೀಡುವಿಕೆ ಮತ್ತು ಕಲಿಕಾ ಸಂಪನ್ಮೂಲ ಗಳನ್ನು ಬಳಸಿಕೊಂಡು ಕೊರೊನಾ ಕಾಲದಲ್ಲಿ ಸಕಾರಾತ್ಮಕತೆ ಬೆಳೆಸಿ ಕೊಳ್ಳಲು ನಮ್ಮ ವಿದ್ಯಾರ್ಥಿ ಗಳು, ಶಿಕ್ಷಕರು, ಪ್ರಾಂಶುಪಾಲರು ಮತ್ತು ಹೆತ್ತವ ರಿಗೆ ಈ ಕ್ಯಾಲೆಂಡರ್ ಸಹಕರಿಸಲಿದೆ ಎಂದಿದ್ದಾರೆ.
ಜತೆಗೆ ಇಂಥ ಸಂಕಷ್ಟದ ಕಾಲದಲ್ಲಿ ಮಕ್ಕಳಿಗೆ ಆಸಕ್ತಿ ದಾಯಕ ಚಟು ವಟಿಕೆಗಳ ಮೂಲಕ ಕಲಿಕೆಗೆ ಪರ್ಯಾಯ ವಿಧಾನಗಳನ್ನು ಒದಗಿ ಸುವುದು ನಮ್ಮೆಲ್ಲರ ಕರ್ತವ್ಯ. ತೀವ್ರ ಒತ್ತಡದಿಂದ ಕೂಡಿದ ಈ ಸನ್ನಿವೇಶ ದಲ್ಲಿ ಮಕ್ಕಳು ಆದಷ್ಟು ವ್ಯಸ್ತ ರಾಗಿರುವಂತೆ ಮತ್ತು ಹೊಸ ತರಗತಿಗಳಲ್ಲಿ ಕಲಿಕೆ ಮುಂದುವರಿಸುವಂತೆ ಪ್ರೇರೇಪಿಸುವ ಅಗತ್ಯವೂ ಇದೆ ಎಂದಿದ್ದಾರೆ.
ನೀಟ್, ಜೆಇಇ ಬಗ್ಗೆ ಪರಿಶೀಲನೆ
ಕೋವಿಡ್ 19 ಹೆಚ್ಚುತ್ತಿರುವ ಕಾರಣ ನೀಟ್, ಜೆಇಇಯಂತಹ ಪ್ರವೇಶ ಪರೀಕ್ಷೆಗಳನ್ನು ನಡೆಸು ವುದು ಸೂಕ್ತವೋ ಅಲ್ಲವೋ ಎಂಬ ಬಗ್ಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯ ಅಧಿಕಾರಿಗಳು ಮತ್ತು ಇತರ ತಜ್ಞರನ್ನು ಒಳ ಗೊಂಡ ಸಮಿತಿಯು ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ರಮೇಶ್ ಹೇಳಿದ್ದಾರೆ.